- Home
- Entertainment
- Cine World
- ಪಾಕಿಸ್ತಾನದಲ್ಲಿ ಭಾರೀ ಟ್ರೆಂಡ್ ಸೃಷ್ಟಿಸಿದ ಡಾಕು ಮಹರಾಜ; ಬಾಲಯ್ಯನ ಆರ್ಭಟಕ್ಕೆ ಆಕೆಯೇ ಕಾರಣ!
ಪಾಕಿಸ್ತಾನದಲ್ಲಿ ಭಾರೀ ಟ್ರೆಂಡ್ ಸೃಷ್ಟಿಸಿದ ಡಾಕು ಮಹರಾಜ; ಬಾಲಯ್ಯನ ಆರ್ಭಟಕ್ಕೆ ಆಕೆಯೇ ಕಾರಣ!
ನಂದಮೂರಿ ಬಾಲಕೃಷ್ಣ ಅಭಿನಯದ ಕೊನೆಯ ಚಿತ್ರ ಡಾಕು ಮಹಾರಾಜ್. ನಿರ್ದೇಶಕ ಬಾಬಿ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಸಂಕ್ರಾಂತಿಗೆ ಬಿಡುಗಡೆಯಾಗಿ 150 ಕೋಟಿ ಗಳಿಸಿತು.

ನಂದಮೂರಿ ಬಾಲಕೃಷ್ಣ ಅಭಿನಯದ ಕೊನೆಯ ಚಿತ್ರ ಡಾಕು ಮಹಾರಾಜ್. ನಿರ್ದೇಶಕ ಬಾಬಿ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾ ಸಂಕ್ರಾಂತಿಗೆ ಬಿಡುಗಡೆಯಾಗಿ 150 ಕೋಟಿ ಗಳಿಸಿತು. ಅಖಂಡ, ವೀರ ಸಿಂಹಾರೆಡ್ಡಿ, ಭಗವಂತ್ ಕೇಸರಿ ಚಿತ್ರಗಳ ನಂತರ ಡಾಕು ಮಹಾರಾಜ್ ಸಿನಿಮಾ ಬಾಲಯ್ಯನಿಗೆ ಸತತ 4ನೇ ಗೆಲುವಾಗಿದೆ. ಸದ್ಯ ಡಾಕು ಮಹಾರಾಜ್ ಸಿನಿಮಾ ಓಟಿಟಿಯಲ್ಲಿ ಸದ್ದು ಮಾಡುತ್ತಿದೆ.
ತೆಲುಗು ಚಿತ್ರಗಳಿಗೆ ನಿಧಾನವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚುತ್ತಿದೆ. ಬಾಹುಬಲಿ, RRR, ಪುಷ್ಪ, ಕಲ್ಕಿ ಚಿತ್ರಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಟಾಕ್ ಆಫ್ ದಿ ಟೌನ್ ಆಗಿವೆ. OTT ಮೂಲಕ ತೆಲುಗು ಚಿತ್ರಗಳು ಜಗತ್ತಿನಾದ್ಯಂತ ಟ್ರೆಂಡ್ ಆಗುತ್ತಿವೆ. ಇತ್ತೀಚೆಗೆ ಬಾಲಯ್ಯ ಡಾಕು ಮಹಾರಾಜ್ ಸಿನಿಮಾ ಕೂಡ ವಿಶ್ವ ಮಟ್ಟದಲ್ಲಿ ಅನೇಕ ದೇಶಗಳಲ್ಲಿ ಟ್ರೆಂಡಿಂಗ್ ಆಗಿದೆ. ಮುಖ್ಯವಾಗಿ ಪಾಕಿಸ್ತಾನದಲ್ಲಿ ಡಾಕು ಮಹಾರಾಜ್ ಧೂಳೆಬ್ಬಿಸುತ್ತಿದೆ.
ಪಾಕಿಸ್ತಾನದ ಜೊತೆಗೆ ಬಾಂಗ್ಲಾದೇಶ, ಕತಾರ್, ಯುಎಇ ದೇಶಗಳಲ್ಲಿ ಡಾಕು ಮಹಾರಾಜ್ ಸಿನಿಮಾ ಟ್ರೆಂಡಿಂಗ್‌ನಲ್ಲಿ ಟಾಪ್‌ನಲ್ಲಿದೆ. ಡಾಕು ಮಹಾರಾಜ್ ಚಿತ್ರಕ್ಕೆ ಇಷ್ಟೊಂದು ಕ್ರೇಜ್ ಇರಲು ಒಂದು ಕಾರಣವಿದೆ ಎಂದು ವಿಶ್ಲೇಷಕರು ಭಾವಿಸಿದ್ದಾರೆ. ಆ ಕಾರಣ ಬೇರೆ ಯಾರೂ ಅಲ್ಲ ಊರ್ವಶಿ ರೌಟೇಲಾ ಅಂತಿದ್ದಾರೆ. ಊರ್ವಶಿ ರೌಟೇಲಾಗೆ ಬಾಲಿವುಡ್ ಚಿತ್ರಗಳ ಜೊತೆಗೆ ಪಾಕ್, ಬಾಂಗ್ಲಾದೇಶದಂತಹ ದೇಶಗಳಲ್ಲಿ ಕ್ರೇಜ್ ಇದೆ.
ಇನ್ನು ಡಾಕು ಮಹಾರಾಜ್ ಚಿತ್ರದಲ್ಲಿ ಊರ್ವಶಿ ರೌಟೇಲಾ ಮಾಡಿದ ಮಾಸ್ ಐಟಂ ಸಾಂಗ್‌ಗೆ ಪ್ರತಿಯೊಬ್ಬರೂ ಫಿದಾ ಆಗಿದ್ದಾರೆ. ಬಾಲಯ್ಯ, ಊರ್ವಶಿ ಒಟ್ಟಿಗೆ ಮಾಡಿದ ಬೋಲ್ಡ್ ಮೂಮೆಂಟ್ಸ್‌ಗೆ ಮೊದಲು ಟೀಕೆಗಳು ಬಂದರೂ ನಂತರ ಅದೇ ಒಳ್ಳೆಯ ಪಬ್ಲಿಸಿಟಿ ತಂದುಕೊಟ್ಟಿತು. ಬಾಲಯ್ಯ, ಊರ್ವಶಿ ರೌಟೇಲಾ ಪರ್ಫಾರ್ಮ್ ಮಾಡಿದ ದಬಿಡಿ ದಿಬಿಡಿ ಐಟಂ ಸಾಂಗ್‌ನಿಂದ ಮ್ಯಾಜಿಕ್ ನಡೆಯುತ್ತಿದೆ ಅಂತಿದ್ದಾರೆ. ಒಟ್ಟಾರೆಯಾಗಿ ಡಾಕು ಮಹಾರಾಜ್ ವರ್ಲ್ಡ್ ವೈಡ್ ಟ್ರೆಂಡ್‌ಗೆ ಊರ್ವಶಿ ರೌಟೇಲಾ ಕಾರಣ ಅಂತಿದ್ದಾರೆ.