- Home
- Entertainment
- Cine World
- ಹಿಟ್ & ರನ್ ಕೇಸ್, ವಿದ್ಯಾರ್ಥಿಯ ಸಾವಿನ ಬೆನ್ನಲ್ಲೇ ಪ್ರಖ್ಯಾತ ನಟಿ ನಂದಿನಿ ಕಶ್ಯಪ್ ಅರೆಸ್ಟ್!
ಹಿಟ್ & ರನ್ ಕೇಸ್, ವಿದ್ಯಾರ್ಥಿಯ ಸಾವಿನ ಬೆನ್ನಲ್ಲೇ ಪ್ರಖ್ಯಾತ ನಟಿ ನಂದಿನಿ ಕಶ್ಯಪ್ ಅರೆಸ್ಟ್!
ಗುವಾಹಟಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಯುವಕ ಸಾವನ್ನಪ್ಪಿದ ಪ್ರಕರಣದಲ್ಲಿ ಅಸ್ಸಾಮಿ ನಟಿ ನಂದಿನಿ ಕಶ್ಯಪ್‌ರನ್ನು ಬಂಧಿಸಲಾಗಿದೆ. ಅತಿವೇಗದ ಚಾಲನೆ ಮತ್ತು ಡಿಕ್ಕಿಯ ನಂತರ ಪರಾರಿಯಾಗಲು ಯತ್ನಿಸಿದ ಆರೋಪ ಅವರ ಮೇಲಿದೆ.

ಗುವಾಹಟಿಯ ದಖಿಂಗಾವ್ ಪ್ರದೇಶದಲ್ಲಿ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ 21 ವರ್ಷದ ಸಮಿಯುಲ್ ಹಕ್ ಸಾವನ್ನಪ್ಪಿದ ಪ್ರಕರಣದಲ್ಲಿ ಅಸ್ಸಾಮಿ ನಟಿ ನಂದಿನಿ ಕಶ್ಯಪ್ ಅವರನ್ನು ಬಂಧಿಸಲಾಗಿದೆ.
ನಂದಿನಿ ಕಶ್ಯಪ್ ಇತ್ತೀಚಿನ ಅಸ್ಸಾಮಿ ಹಿಟ್ 'ರುದ್ರ' ಚಿತ್ರದಲ್ಲಿ ಸುರಭಿ ಪಾತ್ರದ ಮೂಲಕ ಹೆಸರುವಾಸಿಯಾಗಿದ್ದಾರೆ ಮತ್ತು ಪ್ರಾದೇಶಿಕ ಮನರಂಜನಾ ವಲಯದಲ್ಲಿ ಹೊಸ ಮುಖವಾಗಿ ಹೊರಹೊಮ್ಮಿದ್ದಾರೆ. ಅವರ ಚಲನಚಿತ್ರ ಪಾತ್ರಗಳ ಹೊರತಾಗಿ, ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.
ಗುವಾಹಟಿಯಲ್ಲಿ ಜನಿಸಿದ ನಟಿ, ನಿಕಿತಾ ಎಂಬ ಹೆಸರಿನಿಂದಲೂ ಗುರುತಿಸಲ್ಪಟ್ಟಿದ್ದಾರೆ. 2018 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಈಕೆ ಅಂದಿನಿಂದ ನಟನೆ, ನಿರೂಪಣೆ, ಮಾಡೆಲಿಂಗ್ ಮತ್ತು ನೃತ್ಯ ಸೇರಿದಂತೆ ಉದ್ಯಮದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ನಂದಿನಿ ತನ್ನ ಶಾಲಾ ಶಿಕ್ಷಣವನ್ನು ಅಮಿಂಗಾವ್‌ನಲ್ಲಿರುವ ಫ್ಯಾಕಲ್ಟಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪೂರ್ಣಗೊಳಿಸಿದ್ದರು. ನಂತರ 2021 ರಲ್ಲಿ ಮೇಘಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಿಂದ ತನ್ನ ಪದವಿಯನ್ನು ಪಡೆದಿದ್ದಾರೆ.
2022 ರಲ್ಲಿ ಅವರ ತಾಯಿ ಕುಂಜಲತಾ ಗೊಗೊಯ್ ದಾಸ್ ನಿರ್ದೇಶನದ 'ಜನಕ್ನಂದಿನಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮೊದಲು ಅವರು ಕೆಲವು ಸಂಗೀತ ವೀಡಿಯೊಗಳಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ ಅಸ್ಸಾಮಿ ಉದ್ಯಮದ ಹಲವಾರು ಗಮನಾರ್ಹ ನಟರು ನಟಿಸಿದ್ದರು.
ಏಜೆನ್ಸಿ ವರದಿಯ ಪ್ರಕಾರ, ಅತಿ ವೇಗದಂತಹ ಸಂಚಾರ ಉಲ್ಲಂಘನೆಗಾಗಿ ನಂದಿನಿ ಅವರ ವಾಹನಕ್ಕೆ ಈ ಹಿಂದೆ ಹಲವು ಬಾರಿ ದಂಡ ವಿಧಿಸಲಾಗಿದೆ ಎಂದು ಗುವಾಹಟಿ ಪೊಲೀಸ್ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಅವರ ಇತ್ತೀಚಿನ ಸಿನಿಮಾಗಳ ಬಗ್ಗೆ ಹೇಳುವುದಾದರೆ, ರೂಪಕ್ ಗೊಗೊಯ್ ನಿರ್ದೇಶನದ ನಂದಿನಿ ಅವರ ಇತ್ತೀಚಿನ ಚಿತ್ರ 'ರುದ್ರ' ಅವರ ವೃತ್ತಿಜೀವನದಲ್ಲಿ ದೊಡ್ಡ ತಿರುವು ನೀಡಿದೆ. ಜೂನ್ 27 ರಂದು ಬಿಡುಗಡೆಯಾದ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡಿದೆ. ರವಿ ಶರ್ಮಾ, ಆದಿಲ್ ಹುಸೇನ್, ಜಾಯ್ ಕಶ್ಯಪ್ ಮತ್ತು ಅರ್ಚಿತಾ ಅಗರ್ವಾಲ್ ಅವರಂತಹ ನಟರನ್ನು ಒಳಗೊಂಡಿತ್ತು.
ಪಿಟಿಐ ವರದಿಗಳ ಪ್ರಕಾರ, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಮಿಯುಲ್ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲಿಯೇ ಮಂಗಳವಾರ ನಂದಿನಿಯನ್ನು ಬಂಧಿಸಲಾಗಿದೆ.
ಬುಧವಾರ ಆಕೆಯ ಬಂಧನವನ್ನು ಅಧಿಕೃತವಾಗಿ ದಾಖಲಿಸಲಾಗಿದ್ದು, ಸ್ವಲ್ಪ ಸಮಯದ ನಂತರ ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ನಂದಿನಿ ಅತಿ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದು, ಡಿಕ್ಕಿಯ ನಂತರ ಕಾರ್ ನಿಲ್ಲಿಸದೆ ಇರುವುದನ್ನು ತೋರಿಸಲಾಗಿದೆ. ಪ್ರತ್ಯಕ್ಷದರ್ಶಿಗಳು ಹೇಳುವಂತೆ ಘಟನೆ ನಡೆದ ತಕ್ಷಣ ಆಕೆ ಕಾರ್‌ನೊಂದಿಗೆ ಪರಾರಿಯಾಗಲು ಯತ್ನಿಸಿದಳು ನಂತರ ಸಂತ್ರಸ್ಥನ ಸ್ನೇಹಿತರು ಆಕೆಯನ್ನು ಬೆನ್ನಟ್ಟಿ ಹಿಡಿದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

