MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ವಿಚ್ಚೇದನ ಪಡೆದು 7ವರ್ಷ ದೂರಾಗಿ ಮರುಮದುವೆಯಾದ ಖ್ಯಾತ ನಿರ್ಮಾಪಕ, ಈಗ ಪತ್ನಿ ಸೌಂದರ್ಯ ಸ್ಪರ್ಧೆ ವಿಚೇತೆ!

ವಿಚ್ಚೇದನ ಪಡೆದು 7ವರ್ಷ ದೂರಾಗಿ ಮರುಮದುವೆಯಾದ ಖ್ಯಾತ ನಿರ್ಮಾಪಕ, ಈಗ ಪತ್ನಿ ಸೌಂದರ್ಯ ಸ್ಪರ್ಧೆ ವಿಚೇತೆ!

ಭಾರತೀಯ ಚಿತ್ರರಂಗದಲ್ಲಿ ಒಬ್ಬೊಬ್ಬ ತಾರೆಯರದ್ದೂ ಒಂದೊಂದು ಕಥೆ ಇದೆ. ಇದರಲ್ಲಿ ಸುಂದರ ಪ್ರೇಮ ಕಥೆ ಇದೆ ಇದೆ, ಜೀವನದ ಕಷ್ಟಗಳು ಬೆಳದು ಬಂದ ಹಾದಿ ಇದೆ. ನಿಜ ಜೀವನದ ಅದೆಷ್ಟೋ ಕಥೆಗಳು ಸಿನೆಮಾವಾಗಿದೆ. ಕೆಲವೊಂದು ಸಿನೆಮಾವು ನಿಜ ಜೀವನಕ್ಕೆ ಹೋಲುವಂತಿದೆ.  ಆದರೆ  ಇದು ಪ್ರಸಿದ್ಧ ನಿರ್ಮಾಪಕರೊಬ್ಬರ ನಿಜ ಜೀವನದ ಕಥೆಯಾಗಿದೆ.

2 Min read
Gowthami K
Published : Jun 20 2024, 09:45 PM IST| Updated : Jun 20 2024, 09:50 PM IST
Share this Photo Gallery
  • FB
  • TW
  • Linkdin
  • Whatsapp
18

'ಕಾಂತೆ', 'ಶೂಟೌಟ್ ಅಟ್ ಲೋಖಂಡವಾಲಾ' ಚಿತ್ರಗಳನ್ನು ನಿರ್ದೇಶಿಸಿ, ನಿರ್ಮಿಸಿದ ಚಿತ್ರ ನಿರ್ಮಾಪಕ ಸಂಜಯ್ ಗುಪ್ತಾ ಅವರ ನಿಜ ಜೀವನದ ಕಥೆ ಇದು. ಪ್ರೀತಿಸಿ, ಮದುವೆಯಾಗಿ, ವಿಚ್ಛೇದನ ಪಡೆದ ನಂತರ ಮೊದಲ ಹೆಂಡತಿಯನ್ನು ಮರುಮದುವೆಯಾಗಿದ್ದೇ  ಒಂದು ಸುಂದರ ಕಥೆ.

28

ಮಾಡೆಲ್ ಆಗಬೇಕೆಂಬ ಅನುರಾಧ  ಕನಸಾಗಿತ್ತು 19 ನೇ ವಯಸ್ಸಿನಲ್ಲಿ, ಮಿಸ್ ಸ್ಮೈಲ್ ಸ್ಪರ್ಧೆಯನ್ನು ಗೆದ್ದ ನಂತರ,  ಜೀವನದ ಅನಿರೀಕ್ಷಿತ ತಿರುವು ಪಡೆಯಿತು. ಸಂಜಯ್ ಗುಪ್ತಾ ಮತ್ತು ಅನುರಾಧಾ ಇಬ್ಬರೂ ಪ್ರೀತಿಸುತ್ತಿದ್ದರು, ಮತ್ತು ಅನುರಾಧಾಗೆ ಕೇವಲ 22 ವರ್ಷದವರಾಗಿದ್ದಾಗ 30 ವರ್ಷದ ಸಂಜಯ್  ವಿವಾಹವಾದರು. ದಂಪತಿಗಳು ಹಲವು ವರ್ಷಗಳ ಕಾಲ ಜೀವನ ನಡೆಸಿ ಬಳಿಕ ಕೌಟುಂಬಿಕ ಕಲಹದ ಹಿನ್ನೆಲೆ ವಿಚ್ಛೇದನ ಪಡೆದರು. ಆದರೆ, ಆಶ್ಚರ್ಯ ಎಂದರೆ ಸಂಜಯ್ ಗುಪ್ತಾ ಮತ್ತು ಅನುರಾಧ ಆರು ವರ್ಷಗಳ  ಕಾಲ ವಿಚ್ಛೇದನ ಪಡೆದು ದೂರಾಗಿ ಇದ್ದು, ಬಳಿಕ ಒಂದಾಗಿ ಮರುಮದುವೆಯಾದರು.

38

ಇತ್ತೀಚೆಗೆ ಮಿಸೆಸ್ ವರ್ಲ್ಡ್ ಇಂಟರ್‌ನ್ಯಾಶನಲ್ 2024 ಪ್ರಶಸ್ತಿಯನ್ನು ಗೆದ್ದಿರುವ ಅನುರಾಧಾ ಅವರು ತಮ್ಮ ಪತಿಯೊಂದಿನ ಬದುಕು ಮತ್ತು  ಸಂಬಂಧದ ಬಗ್ಗೆ ಸಂದರ್ಶನವೊಂದರಲ್ಲಿ  ವಿಚ್ಛೇದನ  ಪಡೆದು ಬೇರೆಯಾದರೂ ಇಬ್ಬರಿಗೂ ಒಬ್ಬರನ್ನು ಒಬ್ಬರು ಬಿಟ್ಟು ಇರಲಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ. ನಾವು ಬೇರೆ ಬೇರೆಯಾಗಿದ್ದಕ್ಕೆ  ಕೇವಲ ಸಂಜಯ್ ಮಾತ್ರ ಕಾರಣವಲ್ಲ. ನಾವಿಬ್ಬರೂ ಕೂಡ ಕಾರಣರಾಗಿದ್ದೆವು ಎಂದಿದ್ದಾರೆ.

48

ನೀವು ಬೇರೆಯಾದ ಸಮಯದಲ್ಲಿ ಸಂಜಯ್‌ಗೆ ಸಂಬಂಧವಿದೆ ಎಂದು ವರದಿಯಾಗಿದ್ದನ್ನು ನೀವು ನಂಬುತ್ತೀರಾ ಎಂದು ಸಂದರ್ಶಕರು ಕೇಳಿದಾಗ, ನಾನು ಈ ಸುದ್ದಿಗಳನ್ನು ನಂಬದಿರಲು ನಿರ್ಧರಿಸಿದೆ. ನಾನು ಬೇರೆಯವರಿಗಿಂತ ಸಂಜಯ್‌ನನ್ನು ನಂಬಲು ನಿರ್ಧರಿಸಿದೆ ಎಂದಿದ್ದಾರೆ. ಮದುವೆಯ ಬಳಿಕ ಸ್ವಲ್ಪ ಸಮಯದವರೆಗೆ ವೈವಾಹಿಕ ಜೀವನ ಚೆನ್ನಾಗಿತ್ತು. ನಂತರ ನಾವು ಬೇರ್ಪಟ್ಟೆವು.

58

ನಾನು ತನ್ನ ಸ್ವಂತ ಜೀವನ ಮತ್ತು ಸ್ವತಂತ್ರವಾಗಿರಲು ಬಯಸಿದ್ದೆ. ಆದರೆ ಈ ಸಮಯದಲ್ಲಿ ಸಂಜಯ್  ನನ್ನ ಸಂಪರ್ಕವನ್ನು  ಶಾಶ್ವತವಾಗಿ ಕಲೆದುಕೊಳ್ಳಲು ಬಯಸಲಿಲ್ಲ. ಸಂಜಯ್,  ಪ್ರತಿ ವರ್ಷ ಅಥವಾ ಆರು ತಿಂಗಳಿಗೊಮ್ಮೆ, ಮತ್ತೆ ಒಟ್ಟಿಗೆ ಸೇರೋಣ ಎಂದು ಹೇಳುತ್ತಿದ್ದರು ಎಂದಿದ್ದಾರೆ. ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದೆವು.

68

ವಿಚ್ಛೇದನದ ನಂತರ ನಾವಿಬ್ಬರೂ ಒಂಟಿಯಾಗಿದ್ದೇವೆ. ಆದ್ದರಿಂದ ನಾವು ಮತ್ತೆ  ಒಂದಾಗಿ ಮರುಮದುವೆಯಾಗಲು ನಿರ್ಧರಿಸಿದೆವು. ನಾವು ಎಂದಿಗೂ ದೂರವಾಗಲಿಲ್ಲ, ನಾವು ಯಾವಾಗಲೂ ಸಂಪರ್ಕದಲ್ಲಿರುತ್ತೇವೆ ಏಕೆಂದರೆ ನನ್ನ ಕುಟುಂಬವು ಅವನನ್ನು ಪ್ರೀತಿಸುತ್ತಿದೆ. ಸಂಜಯ್ ಗುಪ್ತಾ ಮತ್ತು ಅನುರಾಧ ಮರುಮದುವೆಯಾಗಿ 15 ವರ್ಷಗಳು ಕಳೆದಿವೆ. ದಂಪತಿಗಳು ಈಗ ತಮ್ಮ ಇಬ್ಬರು ಮಕ್ಕಳೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ.

78

ಸವಾಲಿನ ಮಾನದಂಡಗಳ ಹೊರತಾಗಿಯೂ, ಅನುರಾಧಾ ತನ್ನ ಕನಸುಗಳನ್ನು ಎಂದಿಗೂ ಬಿಟ್ಟುಕೊಡಲಿಲ್ಲ. ಮಿಸೆಸ್ ವರ್ಲ್ಡ್ ಇಂಟರ್ನ್ಯಾಷನಲ್ 2024 ನಲ್ಲಿ  ಭಾಗವಹಿಸಿರುವುದು ಅವರ ಫ್ಯಾಷನ್ ಮತ್ತು ಮಾಡೆಲಿಂಗ್‌ನ ಮೇಲಿನ ಪ್ರೀತಿಯನ್ನು ಸೂಚಿಸುತ್ತದೆ. ಮಿಸೆಸ್ ವರ್ಲ್ಡ್ ಇಂಟರ್‌ನ್ಯಾಶನಲ್ 2024 ಸ್ಪರ್ಧೆಯಲ್ಲಿ ವಿವಿಧ ಹಿನ್ನೆಲೆಯಿಂದ ಬಂದ 168 ಮಹಿಳೆಯರು ಭಾಗವಹಿಸಿದ್ದರು. 40ರ ಹರೆಯದವರ ವಿಭಾಗದಲ್ಲಿ ಸ್ಪರ್ಧಿಸಿರುವ ಅನುರಾಧಾ ಟೈಟಲ್ ಗೆದ್ದರು.

88

ತನ್ನ ಕುಟುಂಬದಿಂದ, ವಿಶೇಷವಾಗಿ ಮಹಿಳೆಯರಿಂದ ಬೆಂಬಲ ಮತ್ತು ಸ್ಫೂರ್ತಿ ತನ್ನ ಯಶಸ್ಸಿಗೆ ಚಾಲನೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು  ಅನುರಾಧ ಹೇಳಿದ್ದಾರೆ. ಈ ಸಾಧನೆ ಹೊಸ ಅವಕಾಶಗಳು ಮತ್ತು ಉತ್ತಮ ವೇದಿಕೆಗಳನ್ನು ಕಲ್ಪಿಸಿಕೊಡಲಿದೆ.  ಅಲ್ಲಿ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಬಹುದು ಎಂದಿದ್ದಾರೆ.  
 

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬಾಲಿವುಡ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved