ಕಮಾನ್ ಡಾರ್ಲಿಂಗ್ … ಎಂದು ಕ್ರೇಜಿ ಸ್ಟಾರ್ ಜೊತೆ ಡುಯೆಟ್ ಹಾಡಿದ ನಟಿ ಈಗೆಲ್ಲಿದ್ದಾರೆ?
ಅಣ್ಣಯ್ಯ ಸಿನಿಮಾದಲ್ಲಿ ಕ್ರೇಜಿ ಸ್ಟಾರ್ ಗೆ ನಾಯಕಿಯಾಗಿ ನಟಿಸಿದ್ದ ನಟಿ ಮಧು ಈಗ ಮೂವತ್ತು ವರ್ಷಗಳ ಬಳಿಕ ಹೇಗೆ ಕಾಣಿಸ್ತಿದ್ದಾರೆ ಗೊತ್ತಾ? ಬೋಲ್ಡ್ ಮತ್ತು ಬ್ಯೂಟಿಫುಲ್ ನಟಿಯ ಫೋಟೋಸ್ ಇಲ್ಲಿದೆ.
ಕಮಾನ್ ಡಾರ್ಲಿಂಗ್.. ಅಯ್ಯೋ ಅಯ್ಯೋ… ಸಿಟ್ ಡೌನ್ ಡಾರ್ಲಿಂಗ್ ಅಯ್ಯೋ ಅಯ್ಯೋ ಎಂದು ರಾತ್ರಿಯಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಜೊತೆ ಡುಯೆಟ್ ಹಾಡಿದ ನಟಿ ಮಧು (Madhoo) ನೆನಪಿದ್ದಾರಾ? ಈವಾಗ್ಲೂ ನಟಿ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ.
1993 ರಲ್ಲಿ ಅಣ್ಣಯ್ಯ ಸಿನಿಮಾದಲ್ಲಿ ರವಿಚಂದ್ರನ್ ಗೆ ನಾಯಕಿಯಾಗುವ ಮೂಲಕ ಕನ್ನಡ ಸಿನಿಮಾಗೆ ಎಂಟ್ರಿ ಕೊಟ್ಟ ನಟಿ ಮಧು. ಇವರು ಹಿಂದಿ, ತಮಿಳು, ತೆಲುಗು, ಮಲಯಾಲಂ ಸಿನಿಮಾದಲ್ಲೂ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ.
ಕನ್ನಡದಲ್ಲಿ ಅಣ್ಣಯ್ಯ, ರನ್ನ, ನಾನು ಮತ್ತು ವರಲಕ್ಷ್ಮಿ, ಸೀತಾರಾಮ ಕಲ್ಯಾಣ, ಪ್ರೀಮಿಯರ್ ಪದ್ಮಿನಿ, ರೈಮೋ ಹೀಗೆ ಹಲವು ಕನ್ನಡ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ, ಇಂದಿಗೂ ಬಹು ಬೇಡಿಕೆಯ ನಟಿ ಎಂದ್ರೆ ತಪ್ಪಾಗಲ್ಲ.
ಪದ್ಮ ಮಾಲಿನಿಯಾಗಿ (Padma Malini) ತಮಿಳು ಅಯ್ಯಂಗಾರ್ ಬ್ರಾಹ್ಮಿಣ ಕುಟುಂಬದಲ್ಲಿ ಜನಿಸಿದ ಇವರು ಮುಂದೆ ಮಧು ಮಾಲಿನಿಯಾದರು. ಮತ್ತೊಂದು ವಿಶೇಷತೆ ಏನಂದ್ರೆ ಮಧು ಹೇಮಾ ಮಾಲಿನಿಯವರ ಸಂಬಂಧಿ.
ರೋಜಾ, ಯೋಧ, ಅಣ್ಣಯ್ಯ ಮೊದಲಾದ ಹಿಟ್ ಸಿನಿಮಾಗಳನ್ನು ನೀಡಿದ್ದ ಮಧು 1999 ರಲ್ಲಿ ಆನಂದ್ ಶಾ ಅವರನ್ನು ವಿವಾಹವಾದರು. ಇವರಿಗೆ ಇಬ್ಬರೂ ಮುದ್ದಾದ ಹೆಣ್ಣು ಮಕ್ಕಳಿದ್ದಾರೆ. ಆದರೆ ಇಂದಿಗೂ 20ರ ಹರೆಯದ ಹುಡುಗಿಯಂತೆ ಕಾಣಿಸುತ್ತಾರೆ.
ಇನ್ನು ಸಿನಿಮಾಗಳಲ್ಲಿ ಮಾತ್ರವಲ್ಲ ಮಧು ಕಿರುತೆರೆಯಲ್ಲೂ ಸಹ ಮಿಂಚಿದ್ದರು. ಇವರು ತಮಿಳು ಮತ್ತು ಹಿಂದಿ ಸೀರಿಯಲ್ ಮತ್ತು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ವೆಬ್ ಸೀರಿಸ್ (web series)ಗಳಲ್ಲೂ ಇವರು ನಟಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ (Social media) ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಮಧು ತಮ್ಮ ಟ್ರಾವೆಲ್ ಫೊಟೋಗಳನ್ನು ರೀಲ್ಸ್ ಗಳನ್ನು, ಮಕ್ಕಳ ಜೊತೆ, ಫ್ರೆಂಡ್ಸ್ ಜೊತೆಗಿನ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಕಾಮಿಡಿ ವಿಡಿಯೋಗಳಿಗೆ ಲಿಪ್ ಸಿಂಕ್ ಮಾಡಿ ಸಹ ನಟಿಸಿ ರಂಜಿಸುತ್ತಾರೆ.
ಸಖತ್ ಮಾಡರ್ನ್ ಆಗಿರುವ ಮಧು, ಹೆಚ್ಚಾಗಿ ಫೋಟೋ ಶೂಟ್ ಮಾಡಿ ಶೇರ್ ಮಾಡುತ್ತಿರುತ್ತಾರೆ. ಅಲ್ಲದೇ ಹಿಂದೊಮ್ಮೆ ಕಮಾನ್ ಡಾರ್ಲಿಂಗ್ ಹಾಡಿನ ರೀಲ್ಸ್ ಗೂ ಹೆಜ್ಜೆ ಹಾಕಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು.