- Home
- Entertainment
- Cine World
- ಶೂಟಿಂಗ್ ವೇಳೆ ಬೆಟ್ಟದಲ್ಲೆ ಡ್ರೆಸ್ ಚೇಂಜ್, ಒಂದು, ಎರಡೂ ಅಲ್ಲೇ: 90ರ ದಶಕದ ಕಷ್ಟ ಬಿಚ್ಚಿಟ್ಟ ಮಧೂ
ಶೂಟಿಂಗ್ ವೇಳೆ ಬೆಟ್ಟದಲ್ಲೆ ಡ್ರೆಸ್ ಚೇಂಜ್, ಒಂದು, ಎರಡೂ ಅಲ್ಲೇ: 90ರ ದಶಕದ ಕಷ್ಟ ಬಿಚ್ಚಿಟ್ಟ ಮಧೂ
ಅಣ್ಣಯ್ಯ ಚಿತ್ರದ ನಟಿ ಮಧೂ 90 ರ ದಶಕದಲ್ಲಿ ಶೂಟಿಂಗ್ ಸಮಯದಲ್ಲಿ ಏನೆಲ್ಲಾ ಕಷ್ಟ ಅನುಭವಿಸಬೇಕಾಗಿತ್ತು ಅನ್ನೋದರ ಬಗ್ಗೆ ಮೆಲುಕು ಹಾಕಿದ್ದಾರೆ.

ಕಮಾನ್ ಡಾರ್ಲಿಂಗ್… ಅಯ್ಯೋ ಅಯ್ಯೋ… ಎಂದು ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಜೊತೆ ಅಣ್ಣಯ್ಯ ಸಿನಿಮಾದಲ್ಲಿ ಸೊಂಟ ಬಳುಕಿಸಿದ. ರೋಜಾ ಸಿನಿಮಾದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಮನಗೆದ್ದ 90ರ ದಶಕದ ಚೆಲುವೆ ಮಧೂ (Madhoo). ಇಂದಿಗೂ ಈ ನಟಿ ಎವರ್ ಗ್ರೀನ್ ಆಗಿ/ಯೇ ಉಳಿದಿದ್ದಾರೆ.
ಇತ್ತೀಚೆಗೆ ಮಧೂ ಸಂದರ್ಶನ ಒಂದರಲ್ಲಿ ಚಿತ್ರರಂಗ ಅಂದಿನಿಂದ ಇಂದಿನವರೆಗೆ ಯಾವ ರೀತಿ ಬದಲಾಗಿದೆ. ತಾವು 90ರ ದಶಕದಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿತ್ತು ಎನ್ನುವುದರ ಬಗ್ಗೆ ಮನಸು ಬಿಚ್ಚಿ ಮಾತನಾಡಿದ್ದಾರೆ.
ಚಿತ್ರದ ಪ್ರಚಾರದ ಹೊರತಾಗಿ, ವರ್ಷಗಳಲ್ಲಿ ಉದ್ಯಮ ಹೇಗೆ ಬದಲಾಗಿದೆ ಎಂಬುದರ ಬಗ್ಗೆ ಮಧೂ ತೆರೆದಿಟ್ಟರು. 90 ರ ದಶಕದಲ್ಲಿ ನಟಿಯರು ವಾಶ್ ರೂಮ್ ಮತ್ತು ವ್ಯಾನಿಟಿ ವ್ಯಾನ್ (Vanity Van) ಗಳಂತಹ ಮೂಲ ಸೌಲಭ್ಯಗಳಿಲ್ಲದೇ ಹೇಗೆ ಹೆಣಗಾಡುತ್ತಿದ್ದರು, ಓಪನ್ ಜಾಗದಲ್ಲಿ ಹೇಗೋಗೋ ಅಡ್ಜಸ್ಟ್ ಮಾಡಿಕೊಂಡು ಹೇಗೆ ವೇಷಭೂಷಣ ಬದಲಾಯಿಸಬೇಕಿತ್ತು ಎನ್ನುವ ಬಗ್ಗೆಯೂ ಸಹ ಅವರು ತಿಳಿಸಿದ್ದಾರೆ.
ಅದು ಅತ್ಯಂತ ಕಷ್ಟದ ಸಮಯಗಳಲ್ಲಿ ಒಂದಾಗಿತ್ತು ಎನ್ನುವ ಮಧೂ ನಾನು ಕೊಲಾಚಿಯ ಕೆಂಪು ಗುಹೆಗಳಲ್ಲಿ ಕುಳಿತು ತಮಿಳು ಸಿನಿಮಾದ ಶೂಟಿಂಗ್ (film shooting) ಮಾಡುತ್ತಿದ್ದೆ. ಆ ಉರಿಬಿಸಿಲಿನಲ್ಲಿ ಡ್ಯಾನ್ಸ್ ಮಾಡೊದಕ್ಕೆ ಎಂಥೆದ್ದದ್ದೋ ಬಟ್ಟೆ ಧರಿಸುತ್ತಿದ್ದೆವು, ಬೆಟ್ಟಗುಡ್ಡಗಳ ಮಧ್ಯೆ, ಮರಗಳ ಹಿಂದೆ ಹೇಗೋ ನಮ್ಮ ಡ್ರೆಸ್ ಕೂಡ ಬದಲಾಯಿಸಬೇಕಿತ್ತು. ಆ ಸಂದರ್ಭದಲ್ಲಿ ಯಾರು, ಎಲ್ಲಿಂದ ನಮ್ಮನ್ನು ನೋಡ್ತಿದ್ದಾರೆ ಅನ್ನೋದು ಸಹ ಗೊತ್ತಾಗುತ್ತಿರಲಿಲ್ಲ. ಅಷ್ಟೊಂದು ಕಷ್ಟದ ದಿನಗಳಿದ್ದವು ಎಂದಿದ್ದರು ಮಧೂ.
ಹಿಂದೊಮ್ಮೆ ಮಣಿರತ್ನಂ ಅವರ ಇರುವರ್ ಸಿನಿಮಾದ ಶೂಟಿಂಗ್ ಸಮಯದಲ್ಲಿ ತಮಿಳುನಾಡಿನ ಯಾವುದೋ ಪ್ರದೇಶದಲ್ಲಿ ಶೂಟಿಂಗ್ ಮಾಡಲಾಗಿತ್ತು. ಶೂಟಿಂಗ್ ಬ್ರೇಕ್ ಸಮಯದಲ್ಲಿ ನಮಗೆ ಮಲಗಲು ಸರಿಯಾದ ಜಾಗ ಕೂಡ ಇರಲಿಲ್ಲ, ಹಾಗಾಗಿ ನಾನು ಅಲ್ಲೇ ಬಂಡೆಕಲ್ಲುಗಳ ಮೇಲೆಯೇ ಮಲಗುತ್ತಿದ್ದೆ, ಮಲಗೋಕು ಕಷ್ಟವಾಗ್ತಿತ್ತು. ಆವಾಗ ಯಾರೋ ಹೇಳ್ತಿದ್ರು ಎಷ್ಟು ದುಡಿದ್ರೂ ಏನು ಪ್ರಯೋಜನ, ಮಲಗೋಕೆ ಸರಿ ಜಾಗನೂ ಇರದಮೇಲೆ ಎಂದು ತಮ್ಮ ಹಳೆ ದಿನಗಳನ್ನು ಮೆಲುಕು ಹಾಕಿದರು ಮಧೂ.
ಆಗಕ್ಕೂ ಈಗಿನ ಚಿತ್ರರಂಗ ತುಂಬಾ ಬದಲಾಗಿದೆ. ಹಿಂದೆ ನಮಗೆ ಯಾವುದೇ ಫೆಸಿಲಿಟಿ ಇರಲಿಲ್ಲ, ಡ್ರೆಸ್ ಚೇಂಜ್ ಮಾಡೊದಕ್ಕೂ ಏನೂ ಇರಲಿಲ್ಲ, ಟಾಯ್ಲೆಟ್ ಮಾಡೋದಕ್ಕೂ ಸರಿಯಾದ ವ್ಯವಸ್ಥೆ ಇಲ್ಲವಾಗಿತ್ತು, ಎಲ್ಲವನ್ನು ಬೆಟ್ಟ ಗುಡ್ಡದಲ್ಲೇ ಮಾಡಬೇಕಿತ್ತು, ಆದರೆ ಈಗಿನ ಪರಿಸ್ಥಿತಿ ಹಾಗಿಲ್ಲ, ಪ್ರತಿಯೊಬ್ಬ ನಟರಿಗೂ ವ್ಯಾನಿಟಿ ವ್ಯಾನ್ ನೀಡಲಾಗುತ್ತೆ, ಅಲ್ಲೆ ರೆಸ್ಟ್ ತೆಗೆದುಕೊಳ್ಳಬಹುದು, ಎಲ್ಲ ವ್ಯವಸ್ಥೆಯೂ ಇರುತ್ತೆ ಎಂದಿದ್ದಾರೆ ಮಧೂ.
ಇನ್ನೂ ತಮ್ಮ ಎವರ್ ಗ್ರೀನ್ ಲುಕ್ (evergreen look) ಬಗ್ಗೆ ಮಾತನಾಡಿದ ಮಧೂ ನಾನು ಅತ್ಯುತ್ತಮವಾಗಿ ಕಾಣಲು ನಾನು ಬೆಸ್ಟ್ ಆಗಿರಲು ಟ್ರೈ ಮಾಡ್ತೇನೆ. ನಾನು ನನ್ನ ವಯಸ್ಸಿಗಿಂತ ಚಿಕ್ಕವಳಾಗಿ ಕಾಣಿಸಿಕೊಳ್ಳೋದನ್ನು ನಾನು ಇಷ್ಟ ಪಡ್ಟೀನಿ, ಆದರೆ ನಾನು ಖಂಡಿತವಾಗಿಯೂ 20 ಅಥವಾ 16 ವರ್ಷದವರಂತೆ ಕಾಣಲು ಪ್ರಯತ್ನಿಸುತ್ತಿಲ್ಲ, ಅದು ಮೂರ್ಖತನ. ವೈದ್ಯರ ಸಲಹೆ ಮೇರೆಗೆ ನಾನು ಆರೋಗ್ಯವಾಗಿ ಯಂಗ್ ಆಗಿರಲು ಬಯಸುತ್ತೇನೆ ಎನ್ನುತಾರೆ ಈ ನಟಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.