ನೀವು ಹೀಗ್ ಮಾಡ್ತೀರಾ ಅಂತ ನಿರೀಕ್ಷಿಸಿರಲಿಲ್ಲ; ಸಿಗರೇಟು ಸೇದಿ ತಗಲಾಕ್ಕೊಂಡ ಅನನ್ಯಾ ಪಾಂಡೆಗೆ ನೆಟ್ಟಿಗರ ಕ್ಲಾಸ್
ಸಂಬಂಧಿಯ ಮದುವೆಯಲ್ಲಿ ಮಿಂಚುತ್ತಿರುವ ಅನನ್ಯಾ ಧೂಮಪಾನ ಮಾಡಿ ತಗಲಾಕ್ಕೊಂಡಿದ್ದಾರೆ. ಅನನ್ಯಾ ಫೋಟೋ ವೈರಲ್ ಆಗಿದ್ದು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.
ಬಾಲಿವುಡ್ ನಟಿ ಅನನ್ಯಾ ಪಾಂಡೆ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಅನನ್ಯಾ ಸದ್ಯ ಸೋದರ ಸಂಬಂಧಿ ಅಲನ್ನಾ ಪಾಂಡೆ ಮದುವೆ ಸಂಭ್ರಮದಲ್ಲಿದ್ದಾರೆ. ಅಲನ್ನಾ ಪಾಂಡೆ ಅವರ ಮೆಹಂದಿ ಮತ್ತು ಸಂಗೀತ ಸಮಾರಂಭ ಜೋರಾಗಿ ನಡೆಯುತ್ತಿದೆ. ನಟಿ ಅನನ್ಯಾ ಪಾಂಡೆ ಕೂಡ ಭರ್ಜರಿಯಾಗಿ ಮಿಂಚಿದ್ದಾರೆ.
ಅನನ್ಯಾ ಪಾಂಡೆ ಮದುವೆಯಲ್ಲಿ ಮಿಂಚುವ ಜೊತೆಗೆ ಧೂಮಪಾನ ಮಾಡಿ ತಗಲಾಕ್ಕೊಂಡಿದ್ದಾರೆ. ಅನನ್ಯಾ ಪಾಂಡೆ ತನ್ನ ಸ್ನೇಹಿತರ ಗ್ಯಾಂಗ್ ಜೊತೆ ಸಿಗರೇಟು ಸೇದುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅನನ್ಯಾ ಪಾಂಡೆ ಫೋಟೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ಅನನ್ಯಾ ಪಾಂಡೆ ನಿಜಕ್ಕೂ ಸಿಗರೇಟು ಸೇದುತ್ತಾರಾ ಎಂದು ಶಾಕ್ ಆಗಿದ್ದಾರೆ. ಫೋಟೋ ಶೇರ್ ಮಾಡಿ ಇದು ನಿಜಕ್ಕೂ ಅನನ್ಯಾ ಎಂದು ಅಚ್ಚರಿಯಿಂದ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅನನ್ಯಾ ಸಿಗರೇಟು ಸೇದುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಧೂಮಪಾನ ಆರೋಗ್ಯಕ್ಕೆ ಹಾನಿಕಾರ ಎಂದು ಹೇಳುತ್ತಿದ್ದಾರೆ.
ಅನನ್ಯಾ ಪಾಂಡೆ ಫೋಟೋ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ. ಆದರೆ ಅನನ್ಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮದುವೆಯಲ್ಲಿ ಫುಲ್ ಮಿಂಚುತ್ತಿದ್ದಾರೆ. ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಲೆಹಂಗಾದಲ್ಲಿ ಅನನ್ಯಾ ಕಾಣಿಸಿಕೊಂಡಿದ್ದಾರೆ.
ಅನನ್ಯಾ ಪಾಂಡೆ ಇತ್ತೀಚೆಗೆ ಡೇಟಿಂಗ್ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ನಟ ಆದಿತ್ಯಾ ರಾಯ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಇತ್ತೀಚಿಗೆ ಈ ಸ್ಟಾರ್ ಜೋಡಿ ಹೆಚ್ಚಾಗಿ ಕ್ಯಾಮರಾ ಕಣ್ಣಿಗೆ ಸೆರೆಯಾಗುತ್ತಿದ್ದಾರೆ. ಇಬ್ಬರೂ ಪ್ರೀತಿ ಪ್ರೇಮ ಅಂತ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ.
ಡೇಟಿಂಗ್ ವದಂತಿ ಬೆನ್ನಲ್ಲೇ ಅನನ್ಯಾ ಸಿಗರೇಟು ಸೇದು ಸುದ್ದಿಯಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ನಡೆಯುತ್ತಿದೆ. ದೂಮಪಾನ ಮಾಡುವವರನ್ನು ದ್ವೇಷಿಸುತ್ತೇನೆ ಎಂದು ಅನೇಕರು ಹೇಳುತ್ತಿದ್ದಾರೆ. ಹುಡುಗ ಅಥವಾ ಹುಡುಗಿ ಯಾರೆ ಆಗಿರಲಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳುತ್ತಿದ್ದಾರೆ.