ತಪ್ಪು ಮಾಹಿತಿಗೆ ಟ್ರೋಲ್‌ ಆದ ಬಿಗ್‌ ಬಿ - ಟ್ವೀಟ್‌ ಡಿಲಿಟ್‌

First Published 24, Mar 2020, 6:01 PM

ಕರೋನಾ ವೈರಸ್  ಹರಡದಂತೆ ತಡೆಗಟ್ಟಲು  ಭಾನುವಾರ ವಿಧಿಸಿದ  ಜನತಾ ಕರ್ಫ್ಯೂಯನ್ನು ಸಾಮಾನ್ಯರಿಂದ ಹಿಡಿದು ಬಾಲಿವುಡ್ ಸೆಲೆಬ್ರೆಟಿಗಳವರೆಗೆ ಎಲ್ಲರೂ  ಅನುಸರಿಸಿದ್ದರು. ನಂತರ ಸಂಜೆ 5 ಗಂಟೆಗೆ ಕರೋನಾ ಕಮಾಂಡೋಗಳಿಗೆ ಚಪ್ಪಾಳೆ, ತಟ್ಟೆ, ಶಂಖ ಮತ್ತು ಘಂಟೆ ನಾದ ಮೂಲಕ ಧನ್ಯವಾದ ಅರ್ಪಿಸಿದ ವಿಡೀಯೊ ಪೋಟೋಗಳು ಎಲ್ಲ ಕಡೆ ಹರಿದಾಡುತ್ತಿವೆ. ಚಪ್ಪಾಳೆ ತಟ್ಟುವಿಕೆಯಿಂದ ಉಂಟಾಗುವ ಕಂಪನವು ಕರೋನಾ ವೈರಸ್ ಅನ್ನು ಕೊಲ್ಲುತ್ತದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದನ್ನು ಅಮಿತಾಬ್ ಬಚ್ಚನ್ ಸಹ ಟ್ವೀಟ್ ಮಾಡಿದ್ದರು. ಆದರೆ ಇದು ಸುಳ್ಳೆಂದು ಬೆಳಕಿಗೆ ಬಂದಾಗ ಜನರು ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು. ತಕ್ಷಣ ಬಿಗ್‌ ಬಿ ಟ್ವೀಟ್‌ ಅನ್ನು ಡಿಲಿಟ್‌ ಮಾಡಿದ್ದಾರೆ.

ಅಮಿತಾಬ್  ಟ್ವೀಟ್‌ - 'ಮಾರ್ಚ್ 22 ಅಮಾವಾಸ್ಯ,  ತಿಂಗಳ ಕರಾಳ ರಾತ್ರಿ. ವೈರಸ್‌ಗಳು, ಬ್ಯಾಕ್ಟೀರಿಯಾಗಳು ಮತ್ತು ದುಷ್ಟ ಶಕ್ತಿಗಳು  ಅತ್ಯಂತ ಶಕ್ತಿಶಾಲಿಯಾಗಿರುತ್ತದೆ. ಈ ಸಂದರ್ಭದಲ್ಲಿ, ಶಂಖ ಮತ್ತು ಘಂಟೆಗಳ ಶಬ್ದದಿಂದ ವೈರಸ್ ದುರ್ಬಲಗೊಳ್ಳುತ್ತದೆ. ಚಂದ್ರನು ರೇವತಿ ನಕ್ಷತ್ರಕ್ಕೆ ಹೋಗುತ್ತಿದ್ದಾನೆ. ಕ್ಯುಮ್ಯುಲೇಟಿವ್‌ ವೈಬ್ರೇ‍ಷನ್‌  ರಕ್ತದ ಹರಿವನ್ನು ಉತ್ತಮಗೊಳಿಸುತ್ತದೆ.' ಎಂದು ಟ್ವೀಟ್ ಮಾಡಿದ್ದರು.

ಇದು ಸುಳ್ಳು ಮಾಹಿತಿ ಎಂದು ಟ್ರೋಲ್ ಆಯಿತು.

ಇದು ಸುಳ್ಳು ಮಾಹಿತಿ ಎಂದು ಟ್ರೋಲ್ ಆಯಿತು.

ಕರೋನಾದ ವಿರುದ್ಧ ಹೋರಾಡುತ್ತಿರುವವರ ಗೌರವಾರ್ಥವಾಗಿ ಭಾನುವಾರ ಅಮಿತಾಬ್ ಬಚ್ಚನ್ ಇಡೀ ಕುಟುಂಬದೊಂದಿಗೆ ಅವರ ಮನೆಯ ಟೆರಾಸ್ ಮೇಲೆ  ಚಪ್ಪಾಳೆ ತಟ್ಟಿದ್ದರು.

ಈ ಸಮಯದಲ್ಲಿ ಅವರ ಮಗಳು ಶ್ವೇತಾ ಮತ್ತು ಮೊಮ್ಮಗಳು ನವ್ಯಾ ನವೇಲಿ ಸಹ ಉಪಸ್ಥಿತರಿದ್ದರು .

ಕಿಚ್ಚ ಸುದೀಪ್, ರಜನೀಕಾಂತ್ ಈ ಸಂಬಂದ ಮಾಡಿರುವ ಟ್ವೀಟ್ ಸಹ ಟೀಕೆಗೆ ಗುರಿಯಾಗಿದ್ದವು.

ಅಮಾವಾಸ್ಯೆ ಇರುವುದು ಮಾರ್ಚ್ 24. ಭಾನುವಾರವಲ್ಲ ಎಂಬ ಅರಿವೂ ಯಾರಿಗೂ ಇರಲಿಲ್ಲ.

ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ವಿಶ್ವದಾದ್ಯಂತ 3.35 ಮಿಲಿಯನ್ ತಲುಪಿದೆ.  ಇಟಲಿಯಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿದ್ದು ಸದ್ಯಕ್ಕೆ  5000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ .

ಸುಳ್ಳು ಹರಡುವದ ಮೊದಲು ನಿಂತರ, ಜನರು ಭಯಗೊಳ್ಳುವುದು ಕಡಿಮೆಯಾಗುತ್ತದೆ.

loader