ತಂದೆಯ ಕನಸಿನ ಮನೆ ಖರೀದಿಸುವ ಆಸೆ ಅಮಿತಾಬ್‌ಗೆ ಈಡೇರಲೇ ಇಲ್ಲ!
First Published Dec 9, 2020, 6:15 PM IST
ಬಾಲಿವುಡ್‌ನ ಬಿಗ್ ಬಿ ಅಮಿತಾಬ್ ಮುಂಬೈನಲ್ಲಿ ಒಂದಲ್ಲ ಮೂರು ಬಂಗಲೆಗಳ ಓನರ್. ಆದರೆ ಅಲಹಾಬಾದದ್‌ನಲ್ಲಿರುವ ಅವರ ತಂದೆಯ ಕನಸಿನ ಮನೆಯನ್ನು ಖರೀದಿಸಲು ಸಾಧ್ಯವಾಗಲಿಲ್ಲ. ವಿವರ ಇಲ್ಲಿದೆ.

ಯುಪಿಯ ಪ್ರಯಾಗ್ರಾಜ್ (ಅಲಹಾಬಾದ್) ನಲ್ಲಿ ಜನಿಸಿದ ಅಮಿತಾಬ್ ಬಚ್ಚನ್ ಈಗ ಮುಂಬೈನಲ್ಲಿ ಮೂರು ಬಂಗಲೆಗಳ ಮಾಲೀಕ. ಆದರೆ ಸಾಕಷ್ಟು ಶ್ರೀಮಂತ ಸೆಲೆಬ್ರೆಟಿಗಳಲ್ಲಿ ಒಬ್ಬರಾಗಿರುವ ಅಮಿತಾಬ್‌ಗೆ ತಮ್ಮ ತಂದೆಯ ಕನಸಿನ ಮನೆಯನ್ನು ಖರೀದಿಸಲು ಸಾಧ್ಯವಾಗಲಿಲ್ಲ.

ವಾಸ್ತವವಾಗಿ, ಅಮಿತಾಬ್ ತಂದೆ ಹರಿವಂಶ್ ರಾಯ್ ಮತ್ತು ತಾಯಿ ತೇಜಿ ಬಚ್ಚನ್ ಜೊತೆ ಅಲಹಾಬಾದ್‌ನಲ್ಲಿ ಬಾಡಿಗೆ ಬಂಗಲೆಯಲ್ಲಿ ವಾಸಿಸುತ್ತಿದ್ದರು. 1984ರಲ್ಲಿ, ಚುನಾವಣೆಯ ಸಮಯದಲ್ಲಿ, ಬಿಗ್ ಬಿ ಈ ಬಂಗಲೆ ಖರೀದಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು, ಆದರೆ ಟ್ರಸ್ಟ್ ಆಸ್ತಿಯಾದ ಕಾರಣದಿಂದಾಗಿ, ಅವರ ಆಸೆ ಇಂದಿಗೂ ಈಡೇರಿಲ್ಲ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?