ಸಾರಾ ಆಲಿ ಖಾನ್ ನಟನೆ ನೋಡಿ ತಲೆ ಚಚ್ಚಿಕೊಂಡ ಅಕ್ಷಯ್ ಕುಮಾರ್!
ಸೈಫ್ ಅಲಿ ಖಾನ್ ಅವರ ಪುತ್ರಿ ಸಾರಾ ಅಲಿ ಖಾನ್ ಶೀಘ್ರದಲ್ಲೇ ಅಕ್ಷಯ್ ಕುಮಾರ್ ಜೊತೆ 'ಅತ್ರಂಗಿ ರೇ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾರಾ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು,ಅದರಲ್ಲಿ ಅಕ್ಷಯ್ ಜೊತೆ ಇದ್ದಾರೆ. ವೀಡಿಯೊದಲ್ಲಿ, ಸಾರಾ ರಿಪೋರ್ಟರ್ ರೀತಿ ನಟಿಸಿದ್ದಾರೆ. ಸಾರಾ ನಟನೆ ಅಕ್ಷಯ್ ಕುಮಾರ್ ಅವರಿಗೆ ಇಷ್ಟವಾಗಲಿಲ್ಲ ಹಾಗೂ ವಿಡಿಯೋದಲ್ಲಿ ಅಕ್ಷಯ್ ಕುಮಾರ್ ತಲೆ ಚಚ್ಚಿಕೊಂಡು ಸಾರಾ ಕಾಲೆಳೆದಿದ್ದಾರೆ.
ವೀಡಿಯೊದಲ್ಲಿ, ಸಾರಾ ಅಲಿ ಖಾನ್ ಪ್ರೇಕ್ಷಕರನ್ನು ಅಕ್ಷಯ್ ಕುಮಾರ್‌ಗೆ ಪರಿಚಯಿಸಿದ್ದಾರೆ. ನಂತರ ತಾಜ್‌ಮಹಲ್ ತೋರಿಸಿ, ನೀವು ನೋಡಬೇಕು ಇದನ್ನು. ಆದರೆ ಅಕ್ಷಯ್ ಕುಮಾರ್ ಇದ್ದಾರೆ ಅಲ್ಲಿ ಎಂದಿದ್ದಾರೆ.
ಸಾರಾ ಅಲಿ ಖಾನ್ ತನ್ನ ಮಾತನ್ನು ಇನ್ನು ಮುಂದುವರೆಸುವ ಮೊದಲೇ ಅಕ್ಷಯ್ ಕುಮಾರ್ ತಲೆ ಚಚ್ಚಿಕೊಳ್ಳುತ್ತಾರೆ.
ಇದನ್ನು ನೋಡಿದ ಸಾರಾರ ಮುಖದಲ್ಲಿ ಗಾಬರಿ ಎದ್ದು ಕಾಣುತ್ತದೆ. ಅವರು ಅಕ್ಷಯ್ ಕುಮಾರ್‌ಗೆ ಏನಾಯಿತು ಸರ್? ಎಂದು ಕೇಳುತ್ತಾರೆ.
'ನೀವು ನೋಡಿದಂತೆ, ಅವರು ಪ್ರಾಸ ಪದಗಳನ್ನು ಹೇಳಿ ಏನೋ ಹೇಳಲು ಪ್ರಯತ್ನಿಸಿದ್ದಾರೆ, ಆದರೆ ನಾನು ಇಲ್ಲಿಯವರೆಗೆ ಇಷ್ಟು ಕೆಟ್ಟ ರೈಮ್ ನೋಡಿಲ್ಲ. ಹೇಗಾದರೂ, ಅವರು ಪ್ರಯತ್ನಿಸಿದರು, ಇದು ಒಳ್ಳೆಯದು, ಏಕೆಂದರೆ ಪ್ರಯತ್ನಿಸುವವರು ಎಂದಿಗೂ ಕಳೆದುಕೊಳ್ಳುವುದಿಲ್ಲ' ಎಂದಿದ್ದಾರೆ ಅಕ್ಷಯ್.
ಇದರ ನಂತರ, ಸಾರಾ ವೀಡಿಯೊದಲ್ಲಿ 'ಹಲೋ ವೀಕ್ಷಕರು, ಆಗ್ರಾಗೆ ಸ್ವಾಗತ. ನಾವು ತಾಜ್ ಮಹಲ್ ನೋಡಲು ಬಂದಿದ್ದೇವೆ. ತಾಜ್‌ನ ಅರ್ಥ, ಇದನ್ನು ಕೀರಿಟ ಎಂದ ಸಾರಾ ಮಹಲ್ ಎಂದರೆ ಏನು ಅನ್ನುವುದನ್ನು ಮರೆತು ಬಿಡುತ್ತಾರೆ'
ಅಕ್ಷಯ್ ಕುಮಾರ್ ಮತ್ತು ಸಾರಾ ಅಲಿ ಖಾನ್ ತಮ್ಮ ಮುಂಬರುವ ಅತ್ರಂಗಿ ರೇ ಸಿನಿಮಾಕ್ಕಾಗಿ ಈ ದಿನಗಳಲ್ಲಿ ತಾಜ್ ಮಹಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ.
ಇವರ ಜೊತೆ ನಸೀರುದ್ದೀನ್ ಷಾ ಮತ್ತು ಧನುಷ್ ಕೂಡ ಇದರಲ್ಲಿ ಕೆಲಸ ಮಾಡುತ್ತಿದ್ದಾರೆ. ಶೂಟಿಂಗ್‌ನಲ್ಲಿ ಯಾವುದೇ ತೊಂದರೆಯಾಗದಂತೆ ಇಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಇದಕ್ಕೂ ಮೊದಲು ಸಾರಾ ಅಕ್ಷಯ್ ಕುಮಾರ್ ಅವರ ಮತ್ತೊಂದು ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು ಕೇದರ್‌ನಾಥ್ ನಟಿ.
ಲಾಕ್ ಡೌನ್ ಮೊದಲು ಸಾರಾ ಅಲಿ ಖಾನ್ ಬನಾರಸ್‌ನಲ್ಲಿ ಶೂಟಿಂಗ್ ಮಾಡುತ್ತಿದ್ದರು. ಫೋಟೋಗಳು ಮತ್ತು ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
'ಅತ್ರಂಗಿ ರೇ' ಚಿತ್ರ ಮುಂದಿನ ವರ್ಷ ಆಗಸ್ಟ್‌ನಲ್ಲಿ ಬಿಡುಗಡೆಯಾಗಬಹುದು.
ಅಕ್ಷಯ್ ಕುಮಾರ್ ಅವರ ಹಲವಾರು ಚಿತ್ರಗಳು ಸಿದ್ಧತೆಯಲ್ಲಿವೆ. ಇವುಗಳಲ್ಲಿ ಸೂರ್ಯವಂಶಿ, ಪೃಥ್ವಿರಾಜ್, ಬೆಲ್ ಬಾಟಮ್, ಬಚ್ಚನ್ ಪಾಂಡೆ, ಅತ್ರಂಗಿ ರೇ ಸೇರಿವೆ.
ಅದೇ ಸಮಯದಲ್ಲಿ, ಸಾರಾರ ಕೂಲಿ ನಂಬರ್ ಒನ್ ಡಿಸೆಂಬರ್ 25ರಂದು ಬಿಡುಗಡೆಯಾಗುತ್ತಿದೆ. ಇದಕ್ಕೂ ಮುನ್ನ ಸಾರಾ 2020ರಲ್ಲಿ ಲವ್ ಆಜ್ ತಕ್ ಚಿತ್ರದಲ್ಲಿ ಕಾಣಿಸಿಕೊಂಡರು. ಇದರಲ್ಲಿ ಕಾರ್ತಿಕ್ ಆರ್ಯನ್ ಮುಖ್ಯ ಪಾತ್ರದಲ್ಲಿದ್ದರು.