ಬಾಲಿವುಡ್‌ನಲ್ಲಿ ಫ್ಲಾಪ್, ದಕ್ಷಿಣದತ್ತ ಮುಖ ಮಾಡಿದ ಐಶ್ವರ್ಯಾ ರೈ!
2022 ರಲ್ಲಿ, ಬಾಕ್ಸ್ ಆಫೀಸ್‌ನಲ್ಲಿ ಬಾಲಿವುಡ್‌ನ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಬೆರಳಿಕೆಯಷ್ಟು ಚಿತ್ರಗಳನ್ನು ಹೊರತುಪಡಿಸಿ, ಎಲ್ಲವೂ ಫ್ಲಾಪ್ ಮತ್ತು ದುರಂತ ಎಂದು ಸಾಬೀತಾಯಿತು. ಅದೇ ಸಮಯದಲ್ಲಿ, 2023 ರ ಆರಂಭದಲ್ಲಿಯೂ, ಬಾಲಿವುಡ್ ಚಿತ್ರಗಳ ಸ್ಥಿತಿಯುಲ್ಲಿ ಯಾವುದೇ ಚೇತರಿಕೆ ಕಾಣುತ್ತಿಲ್ಲ. ಇತ್ತೀಚೆಗಷ್ಟೇ ತೆರೆಕಂಡ ಕುಟ್ಟೆ ( (Kuttey) ಚಿತ್ರ ಸೂಪರ್ ಫ್ಲಾಪ್ ಎಂದು ಸಾಬೀತಾಗಿದೆ. ಇನ್ನೊಂದೆಡೆ ಸೌತ್ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿವೆ..ಈ ನಡುವೆ ಹೊರಬರುತ್ತಿರುವ ಸುದ್ದಿ ಪ್ರಕಾರ, ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಕೂಡ ಬಾಲಿವುಡ್‌ಗಿಂತ ಸೌತ್ ಫಿಲ್ಮ್ ಇಂಡಸ್ಟ್ರಿಯ ಮೇಲೆ ಹೆಚ್ಚು ನಂಬಿಕೆ ಹೊಂದಿದ್ದಾರೆಂದು ತೋರುತ್ತದೆ. ಸೌತ್ ಸೂಪರ್ ಸ್ಟಾರ್ ಅಜಿತ್ ಕುಮಾರ್ (Ajith Kumar) ಅವರ ಮುಂಬರುವ ಚಿತ್ರದಲ್ಲಿ ಐಶ್ವರ್ಯಾ ರೈ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ನಿರ್ದೇಶಕ ವಿಘ್ನೇಶ್ ಶಿವನ್ ಅವರ ಚಿತ್ರ ಕಾಮಿಡಿ ಥ್ರಿಲ್ಲರ್ ಆಗಿದೆ. ಈ ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಅಜಿತ್ ಕುಮಾರ್ ಅವರು ವಿಘ್ನೇಶ್ ಶಿವನ್ ಅವರೊಂದಿಗೆ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ತಾತ್ಕಾಲಿಕವಾಗಿ ಎಕೆ 62 ಎಂದು ಹೆಸರಿಸಲಾಗಿದೆ. ಬಹು ನಿರೀಕ್ಷಿತ ಯೋಜನೆಯು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ವರದಿಗಳ ಪ್ರಕಾರ, ಇದು ಕಾಮಿಡಿ ಥ್ರಿಲ್ಲರ್ ಚಿತ್ರವಾಗಿದೆ
ಸನ್ ನ್ಯೂಸ್ ವರದಿ ಪ್ರಕಾರ, ಚಿತ್ರದಲ್ಲಿ ಅಜಿತ್ ಕುಮಾರ್ ಜೊತೆಗೆ ಐಶ್ವರ್ಯ ರೈ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಅವರು ಚಿತ್ರದ ಕಥೆಯನ್ನು ಇಷ್ಟಪಟ್ಟಿದ್ದಾರೆ ಮತ್ತು ಚಿತ್ರದಲ್ಲಿನ ತಮ್ಮ ಪಾತ್ರದಿಂದ ಸಾಕಷ್ಟು ಪ್ರಭಾವಿತರಾಗಿದ್ದಾರೆ.
ಅದೇ ಸಮಯದಲ್ಲಿ, ನಿರ್ಮಾಪಕರು ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಘೋಷಿಸಲು ಯೋಜಿಸುತ್ತಿದ್ದಾರೆ.ಅಜಿತ್ ಕುಮಾರ್ ಮತ್ತು ವಿಘ್ನೇಶ್ ಶಿವನ್ ಅವರ ಪ್ರಾಜೆಕ್ಟ್‌ಗೆ ಹತ್ತಿರವಿರುವ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಈ ಚಿತ್ರದಲ್ಲಿ ಇಬ್ಬರು ನಟಿಯರು ಇರಲಿದ್ದಾರೆ.
ಈ ಯೋಜನೆಗೆ ತ್ರಿಷಾ ಕೃಷ್ಣನ್ ಕೂಡ ಸೇರಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಪೊನ್ನಿಯನ್ ಸೆಲ್ವನ್ ನಂತರ ತ್ರಿಶಾ ಕೃಷ್ಣನ್ ಮತ್ತು ಐಶ್ವರ್ಯ ರೈ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ
ಅಜಿತ್ ಕುಮಾರ್ ಅವರ ಈ ಪ್ರಾಜೆಕ್ಟ್‌ನಲ್ಲಿ ಅರವಿಂದ್ ಸ್ವಾಮಿ ಕೂಡ ಜೊತೆಯಾಗಲಿದ್ದಾರೆ. ತಮಿಳು ಚಿತ್ರರಂಗದ ಸ್ಫುರದ್ರೂಪಿ ಮತ್ತು ಡ್ಯಾಶಿಂಗ್ ನಟರು ಇಬ್ಬರೂ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಜಿತ್ ಕುಮಾರ್ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಹಾಡುಗಳನ್ನು ಸಂಯೋಜಿಸಲಿದ್ದಾರೆ. ಅನಿರುದ್ಧ ಅವರು ಈ ಹಿಂದೆ ಅಜಿತ್ ಅವರ ವಿವೇಗಂ ಮತ್ತು ವಿಘ್ನೇಶ್ ಶಿವನ್ ಅವರ ಕಥುವಕುಲ ಎರಡು ಕಾದಲ್ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಲೈಕಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ ಎಂದು ಹೇಳಲಾಗುತ್ತಿದೆ.