Ajay Devgn Assets - ನಟನ ಅದಾಯ, ಆಸ್ತಿ ಮತ್ತು ಕಾರುಗಳ ಸಂಗ್ರಹದ ವಿವರ
ಬಾಲಿವುಡ್ ನ 'ಸಿಂಗಮ್' ಅಜಯ್ ದೇವಗನ್ (Ajay Devgn) ಇಂದು ತಮ್ಮ 53ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 22 ನೇ ವಯಸ್ಸಿನಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಅಜಯ್ ದೇವಗನ್, 2 ಏಪ್ರಿಲ್ 1969 ರಂದು ಪಂಜಾಬ್‌ನಲ್ಲಿ ಜನಿಸಿದರು. ‘ಫೂಲ್ ಔರ್ ಕಾಂಟೆ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾ ಆ ಕಾಲದ ಹಿಟ್ ಚಿತ್ರಗಳಲ್ಲಿ ಒಂದಾಯಿತು. ಗಂಭೀರಪಾತ್ರಗಳಿಂದ ಹಿಡಿದು ಹಾಸ್ಯ ಪಾತ್ರಗಳಿಗೆ ಜೀವ ತುಂಬುವ ಅಜಯ್ ಅವರ ಹೆಚ್ಚಿನ ಎಲ್ಲಾ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಿದೆ. ಬಹುಶಃ ಈ ಕಾರಣಕ್ಕಾಗಿಯೇ ಅವರು ಎರಡು ಬಾರಿ ಅತ್ಯುತ್ತಮ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ನಟನ ಆಸ್ತಿಯ ವಿವರ ಇಲ್ಲಿದೆ.
ಅಜಯ್ ದೇವಗನ್ ಐಷಾರಾಮಿ ಜೀವನಶೈಲಿಯನ್ನು ಇಷ್ಟಪಡುತ್ತಾರೆ. ಅವರು ಮುಂಬೈನ ಐಷಾರಾಮಿ ಪ್ರದೇಶವಾದ ಜುಹುದಲ್ಲಿ ಬಂಗಲೆಯನ್ನು ಹೊಂದಿದ್ದಾರೆ. ಇದಲ್ಲದೇ ಫ್ಲಾಟ್ ಕೂಡ ಇದೆ. ಆದರೆ ಅಜಯ್ ತನ್ನ ಕುಟುಂಬದೊಂದಿಗೆ ಶಿವಶಕ್ತಿ ಬಂಗಲೆಯಲ್ಲಿ ವಾಸಿಸುತ್ತಾರೆ.
ಇದು ಇಂಟರಿಯರ್ ಮಾತ್ರವಲ್ಲ ಹೊರಗಿನಿಂದ ಸಹ ನೋಡಲು ಬಹಳ ಅದ್ಭುತವಾಗಿದೆ. ಈ ಬಂಗಲೆಯ ಬೆಲೆ ಸುಮಾರು 30 ಕೋಟಿ ರೂ ಎಂದು ಅಂದಾಜಿಸಲಾಗಿದೆ. ಈ ನಟನ ಬಂಗಲೆಯಲ್ಲಿ ನಾಲ್ಕು ಬೆಡ್ ರೂಮ್‌ಗಳಿದ್ದು ಅತ್ಯಂತ ಸುಂದರವಾಗಿ ಅಲಂಕರಿಸಲಾಗಿದೆ.
ಇದಲ್ಲದೇ ಗ್ರಂಥಾಲಯವೂ ಈ ಬಂಗಲೆಯಲ್ಲಿವೆ. ಅಜಯ್ ಓದುವ ಹವ್ಯಾಸವನ್ನು ಹೊಂದಿದ್ದಾರೆ. ಶಿವಶಕ್ತಿ ಬಂಗಲೆ ಜಿಮ್, ಕ್ರೀಡಾ ಕೊಠಡಿ ಮತ್ತು ಈಜುಕೊಳವನ್ನು ಸಹ ಹೊಂದಿದೆ. ಶೂಟಿಂಗ್ ಮುಗಿಸಿ ಹೆಚ್ಚಿನ ಸಮಯ ಮನೆಯಲ್ಲೇ ಇರಲು ಬಯಸುವ ಅಜಯ್ ಕುಟುಂಬದೊಂದಿಗೆ ಮನೆಯಲ್ಲಿ ಗುಣಮಟ್ಟದ ಸಮಯವನ್ನು ಕಳೆಯುತ್ತಾರೆ. ಅಜಯ್ ಪಾರ್ಟಿಗಳಿಗೆ ಹೋಗಲು ಇಷ್ಟಪಡುವುದಿಲ್ಲ.
ಸಂದರ್ಶನವೊಂದರಲ್ಲಿ, ಕಾಜೋಲ್ ಅಜಯ್‌ಗೆ ಹೆಚ್ಚು ಜನ ಸೇರುವುದು ಇಷ್ಟವಿಲ್ಲ. ಅವರು ಶಾಂತವಾಗಿರುತ್ತಾರೆ ಮತ್ತು ವೈಯಕ್ತಿಕ ಜೀವನವನ್ನು ಹೆಚ್ಚು ಆನಂದಿಸುತ್ತಾರೆ ಎಂದು ಹೇಳಿದ್ದರು.
ಅಜಯ್ ದೇವಗನ್ ಒಟ್ಟು 295 ಕೋಟಿ ಆಸ್ತಿ ಹೊಂದಿದ್ದಾರೆ. ಅವರ ಆದಾಯದ ಮುಖ್ಯ ಮೂಲವೆಂದರೆ ಚಲನಚಿತ್ರಗಳು ಮತ್ತು ಬ್ರಾಂಡ್ ಎಂಡೋರ್ಸ್‌ಮೆಂಟ್ಸ್. ಸಿನಿಮಾದ ಶುಲ್ಕದ ಹೊರತಾಗಿ, ಅಜಯ್ ಲಾಭದಲ್ಲಿ ಕೂಡ ಪಾಲು ತೆಗೆದುಕೊಳ್ಳುತ್ತಾರೆ. ಅಜಯ್ ದೇವಗನ್ ಒಂದು ಚಿತ್ರಕ್ಕೆ 30 ರಿಂದ 50 ಕೋಟಿ ಚಾರ್ಜ್ ಮಾಡುತ್ತಾರೆ.
ಸಿನಿಮಾದಲ್ಲಿ ಅತಿಥಿ ಪಾತ್ರಕ್ಕಾಗಿ ಸಹ ಕೋಟ್ಯಂತರ ರೂಪಾಯಿ ತೆಗೆದುಕೊಳ್ಳುವ ಅಜಯ್ ಗಂಗೂಬಾಯಿ ಕಾಠಿವಾಡಿಗೆ 11 ಕೋಟಿ, ಆರ್‌ಆರ್‌ಆರ್‌ಗೆ 25 ಕೋಟಿ ತೆಗೆದುಕೊಂಡಿದ್ದಾರೆ.ಅಜಯ್ ದೇವಗನ್ ತಮ್ಮದೇ ಆದ ಖಾಸಗಿ ಜೆಟ್ ಹೊಂದಿರುವ ಭಾರತೀಯ ನಟರಲ್ಲಿ ಒಬ್ಬರು. ಇದರ ಮೌಲ್ಯ 84 ಕೋಟಿ ರೂ. ಈ ಖಾಸಗಿ ಜೆಟ್‌ನ ಹೆಸರು ಹಾಕರ್ 800.
ಅಜಯ್‌ಗೂ ಕಾರುಗಳೆಂದರೆ ಒಲವು. ಅವರ ಬಳಿ ಹಲವು ಐಷಾರಾಮಿ ಕಾರುಗಳಿವೆ. ಅವರ ಗ್ಯಾರೇಜ್‌ನಲ್ಲಿ BMW Z4, Maserati Quattroporte, Mercedes Benz S Class ಸೇರಿದಂತೆ 7 ಕಾರುಗಳಿವೆ.