ಸಲ್ಮಾನ್ ಮೋಸ ಮಾಡಿದ ನಂತರ,ಅಜರುದ್ದೀನ್ ಪ್ರೀತಿಗೆ ಬಿದ್ದ ಸಂಗೀತ ಬಿಜ್ಲಾನಿ
ಬಾಲಿವುಡ್‌ನ ಮಾಜಿ ನಟಿ ಸಂಗೀತಾ ಬಿಜ್ಲಾನಿ ಸಲ್ಮಾನ್ ಖಾನ್ ಎಕ್ಸ್‌ಗರ್ಲ್ ಫ್ರೆಂಡ್‌ಗಳಲ್ಲಿ ಒಬ್ಬರು. ಸಲ್ಮಾನ್ ಖಾನ್‌ನಿಂದ ಮೋಸ ಹೋದ ನಂತರ ಸಂಗೀತಾ ಭಾರತದ ಮಾಜಿ ಕ್ಯಾಪ್ಟನ್ ಮೊಹಮ್ಮದ್ ಅಜರುದ್ದೀನ್ ಪ್ರೀತಿಗೆ ಬಿದ್ದರು. ಹಿಂದೆ ಸಂಗೀತಾ ಅಜರುದ್ದೀನ್ ತುಂಬಾ ಕಡಿಮೆ ಮಾತಾನಾಡುವ ವ್ಯಕ್ತಿ ಎಂದು ಹೇಳಿದ್ದರು. ಹಾಗಾದರೆ ಇವರ ನಡುವೆ ಪ್ರೀತಿ ಹುಟ್ಟಿಕೊಂಡಿದ್ದು ಯಾವಾಗ?
ಭಾರತದ ಮಾಜಿ ಕ್ರಿಕೆಟ್ ನಾಯಕ ಮೊಹಮ್ಮದ್ ಅಜರುದ್ದೀನ್ ಮತ್ತು ಮಾಡೆಲ್ ಕಮ್ ನಟಿ ಸಂಗೀತ ಬಿಜ್ಲಾನಿ ಫಸ್ಟ್ ಜಾಹೀರಾತು ಚಿತ್ರೀಕರಣದಲ್ಲಿ ಭೇಟಿಯಾಗಿದ್ದು.
ಅವರು ಭೇಟಿಯಾದಾಗ ಅಜರುದ್ದೀನ್ ಬಹಳ ಕಡಿಮೆ ಮಾತಾನಾಡುವ ವ್ಯಕ್ತಿ ಎಂದು ಆಕೆಗೆ ತಿಳಿದಿದ್ದು, ಆದರೂ ಸಂಗೀತಾ ಕ್ರಿಕೆಟಿಗನೆಡೆಗೆ ಸೆಳೆಯಲ್ಪಟ್ಟರು .ನಂತರ ನಡೆದಿದ್ದು ಇತಿಹಾಸವಾಗಿದೆ.
ಬಾಲಿವುಡ್‌ನ ಇವೆಂಟ್ಸ್ ಮತ್ತು ಪಾರ್ಟಿಗಳಲ್ಲಿ ಇಬ್ಬರೂ ಭೇಟಿಯಾಗುತ್ತಿದ್ದರು, ಅದು ಅವರ ಪ್ರೀತಿ ಬೆಳೆಯಲು ಕಾರಣವಾಯಿತು.
ಆ ಸಮಯದಲ್ಲಿ, ಅಜರುದ್ದೀನ್ ಆಗಲೇ ನೌರೀನ್‌ರನ್ನು ಮದುವೆಯಾಗಿ ಮೊಹಮ್ಮದ್ ಅಸದುದ್ದೀನ್ ಮತ್ತು ಮೊಹಮ್ಮದ್ ಅಯಾಜುದ್ದೀನ್ ಎಂಬ ಇಬ್ಬರು ಮಕ್ಕಳನ್ನೂ ಹೊಂದಿದ್ದರು.
ನಂತರ, ಈ ಜೋಡಿಯ ರಿಲೆಷನ್‌ಶಿಪ್ ಸುದ್ದಿ ಹರಡಿದಂತೆ ಪರಿಸ್ಥಿತಿ ಗಂಭೀರವಾಯಿತು. ಅಜರುದ್ದೀನ್‌ನಿಂದ ಭಾರೀ ಜೀವನಾಂಶವನ್ನು ಪಡೆದ ನಂತರ ನೌರೀನ್ ಬೇರ್ಪಟ್ಟರು.
ನಂತರ ಸಂಗೀತ ಮತ್ತು ಅಜರ್ ಮದುವೆಯಾಗಿ ಸುಮಾರು 14 ವರ್ಷಗಳ ಕಾಲ ಒಟ್ಟಿಗೆ ಇದ್ದರು.
ಆದಾಗ್ಯೂ, ಮದುವೆಯ ನಂತರದ ವರ್ಷಗಳಲ್ಲಿ ಅವರ ಸಂಬಂಧದಲ್ಲಿ ಬಿರುಕುಗಳು ಬೆಳೆಯಲು ಪ್ರಾರಂಭಿಸಿದಾಗ ಇಬ್ಬರು ಸ್ವಇಚ್ಛೆಯಿಂದ ಬೇರೆಯಾಗಲು ನಿರ್ಧರಿಸಿದರು.
1994 ರಲ್ಲಿ ಸಲ್ಮಾನ್ ಖಾನ್ ಜೊತೆ ಸೀರಿಯಸ್ ರಿಲೆಷನ್‌ಶಿಪ್‌ನಲ್ಲಿದ್ದ ಸಂಗೀತಾ ಮದುವೆಯಾಗಲು ಹೊರಟಿದ್ದರು ಹಾಗೂ ಮದುವೆ ಕಾರ್ಡ್‌ಗಳನ್ನು ಸಹ ಮುದ್ರಿಸಲಾಗಿತ್ತು.
ಆದರೆ ಸಲ್ಮಾನ್ ಇನ್ನೊಬ್ಬ ಮಹಿಳೆಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಾಗ ಅವರು ಬೇರೆಯಾದರು, ಸಲ್ಮಾನ್‌ರ ಬದ್ಧತೆಯಿಲ್ಲದ ವರ್ತನೆಯಿಂದಾಗಿ ಕೆಲವು ದಿನಗಳ ಮೊದಲು ಮದುವೆಯನ್ನು ಸಂಗೀತಾ ನಿಲ್ಲಿಸಿದರು.
ಸೋಮಿ ಅಲಿಯೊಂದಿಗೆ ಸಲ್ಮಾನ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು. ಅವನ ಮಾತನ್ನು ಕೇಳಲು ಸಿದ್ಧರಿಲ್ಲದ ಬಿಜ್ಲಾನಿ ಮದುವೆಯನ್ನು ನಿಲ್ಲಿಸಿದಳು ಎಂದು ಇಂಡಿಯಾ ಡಾಟ್ ಕಾಮ್ ನ ವರದಿ ಮಾಡಿತ್ತು. ಕಾಫಿ ವಿಥ್ ಕರಣ್ ಶೋನಲ್ಲಿ ಸಲ್ಮಾನ್ ಕೂಡ ಇದನ್ನು ಒಪ್ಪಿಕೊಂಡಿದ್ದಾರೆ.