5 ವರ್ಷಗಳಿಂದ ಸೌತ್ ಸಿನೆಮಾದಿಂದ ದೂರವಿರುವ 53ರ ಬ್ಯಾಚುಲರ್ ನಟಿ, ಮತ್ತೆ ಬರ್ತಾರಾ?
53ರ ಹರೆಯದಲ್ಲೂ ಗ್ಲಾಮರ್ ಉಳಿಸಿಕೊಂಡಿರುವ ನಟಿ ಟಾಲಿವುಡ್‌ನಿಂದ ದೂರ ಉಳಿದಿದ್ದಾರೆ. ಆಕೆ ತೆಲುಗು ಸಿನಿಮಾಗಳನ್ನು ಮಾಡದಿರಲು ಬಾಲಿವುಡ್‌ನಲ್ಲಿನ ಬ್ಯುಸಿ ಶೆಡ್ಯೂಲ್ ಮತ್ತು ಆಸಕ್ತಿದಾಯಕ ಆಫರ್‌ಗಳ ಕೊರತೆ ಕಾರಣ ಎನ್ನಲಾಗಿದೆ. ಇನ್ನೂ ಕೂಡ ಬ್ಯಾಚುಲರ್ ಆಗಿರುವ ಆ ನಟಿ ಯಾರು? ಇಲ್ಲಿದೆ ಮಾಹಿತಿ

50 ದಾಟಿದರೂ.. ಯುವ ನಟಿಯರು ಸಹ ಅಸೂಹೆ ಪಡುವಂತಹ ಗ್ಲಾಮರ್ ಆಕೆಯದ್ದು. ಈಗಲೂ ಆಕೆ ನಟಿಸಿದ್ರೆ ಶಿಳ್ಳೆ ಹೊಡೆಯೋ ಅಭಿಮಾನಿಗಳು ಇದ್ದಾರೆ. ಟಾಲಿವುಡ್, ಬಾಲಿವುಡ್ ಅಂತೇನಿಲ್ಲ. ಆಕೆಯ ಪೋಸ್ಟರ್ ಕಂಡರೆ ಸಾಕು ಮುಗಿಬೀಳ್ತಾರೆ. ಇಂಡಸ್ಟ್ರಿಯಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ನಟಿಯಾಗಿರುವ ಈ ಬ್ಯೂಟಿ. ಮದುವೆಯಾಗದೆ ಇಷ್ಟ ಬಂದ ಸಿನಿಮಾಗಳನ್ನು ಮಾಡ್ತಾ. ತನಗೆ ಇಷ್ಟವಾದ ಲೈಫ್ ಅನ್ನು ಹ್ಯಾಪಿಯಾಗಿ ಎಂಜಾಯ್ ಮಾಡ್ತಿದ್ದಾರೆ.
ಅವರು ಬೇರೆ ಯಾರೂ ಅಲ್ಲ ಟಬು. 53 ವರ್ಷದ ಈ ಸೀನಿಯರ್ ಬ್ಯೂಟಿ. ಮೋಸ್ಟ್ ಎಲಿಜಿಬಲ್ ನಟಿಯಾಗಿ ರೆಕಾರ್ಡ್ ಕ್ರಿಯೇಟ್ ಮಾಡಿದ್ದಾರೆ. ಬಾಲಿವುಡ್‌ನಲ್ಲಿ ಆಗಾಗ ಸಿನಿಮಾಗಳನ್ನು ಮಾಡುತ್ತಿರುವ ಟಬು. ತನಗೆ ಹಿಟ್ ಸಿನಿಮಾಗಳನ್ನು ನೀಡಿದ ಟಾಲಿವುಡ್ ಅನ್ನು ಮರೆತಿದ್ದಾರೆ. 2020ರಲ್ಲಿ ಬ್ಲಾಕ್‌ಬಾಸ್ಟರ್ ಮೂವಿ ಅಲ ವೈಕುಂಠಪುರಂನಲ್ಲಿ ಮಾಡ್ರನ್ ತಾಯಿಯಾಗಿ ಕಾಣಿಸಿಕೊಂಡ ಟಬು.
ಆ ನಂತರ ಟಾಲಿವುಡ್ ಕಡೆ ತಿರುಗಿಯೂ ನೋಡಲಿಲ್ಲ. ಅವಕಾಶಗಳು ಇಲ್ವಾ ಅಂದ್ರೆ ಟಬು ಮಾಡ್ತೀನಿ ಅಂದ್ರೆ ಸಾಕು ಸಿನಿಮಾಗಳು ಕ್ಯೂ ನಿಲ್ತವೆ. ಹಾಗಂತ ಎಲ್ಲಾ ಅಮ್ಮನ ಪಾತ್ರಗಳೇ ಬರೋದಿಲ್ಲ ಆಕೆಗೆ. ಈ ಏಜ್‌ನಲ್ಲಿ ಗ್ಲಾಮರ್ ಪಾತ್ರಗಳಿಗೆ, ಬೋಲ್ಡ್ ಪಾತ್ರಗಳಿಗೆ ಸೈ ಅನ್ನೋ ಟಬು ತೆಲುಗು ಸಿನಿಮಾಗಳನ್ನು ಯಾಕೆ ಮಾಡ್ತಿಲ್ಲ ಅಂತಾ ಪ್ರಶ್ನಿಸ್ತಿದ್ದಾರೆ ಫ್ಯಾನ್ಸ್.
ಅಲ ವೈಕುಂಠಪುರಂ ಸಿನಿಮಾ ಆದ್ಮೇಲೆ ಸಾಲು ಸಾಲು ತೆಲುಗು ಸಿನಿಮಾಗಳನ್ನು ಮಾಡ್ತಾರೆ ಅಂದ್ಕೊಂಡ್ರು ಎಲ್ಲರೂ. ಆಫರ್‌ಗಳು ಕೂಡ ಗಟ್ಟಿಯಾಗಿ ಬರ್ತವೆ. ಟಬು ಅವರನ್ನು ತೆಲುಗು ತೆರೆ ಮೇಲೆ ರೆಗ್ಯುಲರ್ ಆಗಿ ನೋಡಬಹುದು ಅಂದ್ಕೊಂಡ್ರು ಎಲ್ಲರೂ. ಆದ್ರೆ ಅಂದ್ಕೊಂಡಿದ್ದು ನಡೀಲಿಲ್ಲ. ಆ ಸಿನಿಮಾ ಸಕ್ಸಸ್ ಆದ್ಮೇಲೆ ಟಬು ಸೀರಿಯಲ್ ಆಗಿ ತೆಲುಗು ಸಿನಿಮಾಗಳನ್ನು ಮಾಡ್ತಾರೆ ಅಂತಾ ಎಲ್ಲರೂ ಅಂದ್ಕೊಂಡ್ರು. ಆದ್ರೆ ಆ ನಂತರ ನಾಲ್ಕು ವರ್ಷ ಕಳೆದರೂ ಟಬು ತೆಲುಗು ತೆರೆ ಮೇಲೆ ಕಾಣಿಸಲಿಲ್ಲ.
ಆಕೆ ಟಾಲಿವುಡ್‌ನಲ್ಲಿ ಸಿನಿಮಾಗಳನ್ನು ಮಾಡದಿರೋದಕ್ಕೆ ಎರಡು ಕಾರಣಗಳು ಕಾಣಿಸ್ತಿವೆ. ಒಂದು, ಟಬು ಬಾಲಿವುಡ್‌ನಲ್ಲಿ ಬ್ಯುಸಿಯಾಗಿರೋದು. ಹಿಂದಿಯಲ್ಲಿ ಆಕೆಗೆ ಸೀರಿಯಲ್ ಆಫರ್‌ಗಳು ಬರ್ತಿವೆ. ಸೀರಿಯಸ್ ರೋಲ್ಸ್, ಬೋಲ್ಡ್ ಕ್ಯಾರೆಕ್ಟರ್ಸ್, ಸೀನಿಯರ್ ವುಮನ್ ಲೀಡ್ ಆಗಿ ಗಟ್ಟಿ ಪಾತ್ರಗಳನ್ನು ಮಾಡ್ತಿದ್ದಾರೆ. ಪ್ರಸ್ತುತ ‘ಭೂತ್ ಬಂಗ್ಲಾ’ ಅನ್ನೋ ಹಿಂದಿ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಈ ಮಧ್ಯೆ ಆಕೆ ‘ಕ್ರೂ’ ಸಿನಿಮಾದಲ್ಲೂ ನಟಿಸಿ ಒಳ್ಳೆ ಹೆಸರು ತಗೊಂಡಿದ್ದಾರೆ. ಇನ್ನೊಂದು ಕಾರಣ ಟಬುಗೆ ತೆಲುಗಿನಿಂದ ದೊಡ್ಡ ಮಟ್ಟದಲ್ಲಿ ಆಸಕ್ತಿದಾಯಕ ಆಫರ್‌ಗಳು ಬರ್ತಿಲ್ಲ ಅನ್ನೋದು ಕೂಡ ಚರ್ಚೆಗೆ ದಾರಿ ಮಾಡಿಕೊಡ್ತಿದೆ.
ಆಫರ್‌ಗಳು ಬಂದ್ರೂ ಕೂಡ ಆಕೆಗೆ ಸೂಟ್ ಆಗೋ ಪಾತ್ರ ಸಿಗದೆ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ರು ಅಂತಾ ಸುದ್ದಿ. ಅದ್ರಲ್ಲೂ ಟಬು ಕಥೆ ಇಷ್ಟ ಆದ್ರೆ ಮಾತ್ರ ಸಿನಿಮಾಗಳನ್ನು ಮಾಡೋದು. ಬಾಲಿವುಡ್‌ನಲ್ಲಿ ಆದ್ರೂ ಅಷ್ಟೇ. ಇನ್ನು ಆಕೆ ಸಿನಿಮಾಗಳನ್ನು ಮಾಡ್ತಾನೇ ವೆಬ್ ಸೀರೀಸ್‌ಗಳಲ್ಲೂ ನಟಿಸ್ತಿದ್ದಾರೆ. ಹಾಗಾದ್ರೆ ತೆಲುಗಿನಲ್ಲಿ ಅವಕಾಶಗಳನ್ನು ಕೊಡೋದಿಲ್ವಾ. ಕೊಟ್ಟರೂ ರಿಜೆಕ್ಟ್ ಮಾಡ್ತಾರಾ ಅನ್ನೋದು ಚರ್ಚೆಯಾಗ್ತಿದೆ. ಏನೇ ಆದ್ರೂ.. 53 ವರ್ಷದ ವಯಸ್ಸಿನಲ್ಲೂ ಈಗಲೂ ಗ್ಲಾಮರ್, ಟ್ಯಾಲೆಂಟ್‌ನಲ್ಲಿ ಸ್ವಲ್ಪವೂ ಕಮ್ಮಿ ಆಗಿಲ್ಲ.