MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಆಕೆಯಿಂದಾಗಿ ನಮ್ಮ ಮಗಳು ಬದುಕಿದ್ದಾಳೆ: ಮಗುವಿನ ಚಿಕಿತ್ಸೆಗೆ ಸಹಾಯ ಮಾಡಿದ ನಟಿ ಶ್ರುತಿ ಹಾಸನ್‌

ಆಕೆಯಿಂದಾಗಿ ನಮ್ಮ ಮಗಳು ಬದುಕಿದ್ದಾಳೆ: ಮಗುವಿನ ಚಿಕಿತ್ಸೆಗೆ ಸಹಾಯ ಮಾಡಿದ ನಟಿ ಶ್ರುತಿ ಹಾಸನ್‌

ನಟಿ ಶ್ರುತಿ ಹಾಸನ್ ಅವರು ಅಪರೂಪದ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದ 'ಆಳವಿ' ಎಂಬ ಮಗುವಿನ ದುಬಾರಿ ಚಿಕಿತ್ಸೆಗೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಚಿಕಿತ್ಸೆಯ ನಂತರ ಮಗುವನ್ನು ಭೇಟಿ ಮಾಡಿ ಸಮಯ ಕಳೆದಿದ್ದು, ಮಗುವಿನ ಪೋಷಕರು ಸಾಮಾಜಿಕ ಜಾಲತಾಣದಲ್ಲಿ ನಟಿಯ ಮಾನವೀಯತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

2 Min read
Author : Anusha Kb
Published : Feb 04 2026, 04:18 PM IST
Share this Photo Gallery
  • FB
  • TW
  • Linkdin
  • Whatsapp
16
ಮಗುವಿನ ಚಿಕಿತ್ಸೆಗೆ ಸಹಾಯ ಮಾಡಿದ ನಟಿ
Image Credit : instagram

ಮಗುವಿನ ಚಿಕಿತ್ಸೆಗೆ ಸಹಾಯ ಮಾಡಿದ ನಟಿ

ತೀವ್ರವಾದ ಅನುವಂಶಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿನ ಚಿಕಿತ್ಸೆಗೆ ಸಹಾಯ ಮಾಡುವ ಮೂಲಕ ಶ್ರುತಿ ಹಾಸನ್ ಮಾನವೀಯತೆ ಮೆರೆದಿದ್ದಾರೆ. ಕಮಲ್‌ ಹಾಸನ್ ಪುತ್ರಿ ತಮಿಳಿನ ಹಲವು ಸಿನಿಮಾಗಳಲ್ಲಿ ನಟಿಸಿರುವ ಶ್ರುತಿ ಹಾಸನ್ ಅವರು ಬಹಳ ದುಬಾರಿಯಾದ ಚಿಕಿತ್ಸೆಗೆ ಆ ಮಗುವಿನ ಪೋಷಕರಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಮಗುವಿಗೆ ಜೀವದಾನ ಮಾಡಿದ್ದಾರೆ.

26
ಶ್ರುತಿ ಹಾಸನ್‌ಗೆ ಕೃತಜ್ಷತೆ ಸಲ್ಲಿಸಿದ ದಂಪತಿ
Image Credit : Instagram

ಶ್ರುತಿ ಹಾಸನ್‌ಗೆ ಕೃತಜ್ಷತೆ ಸಲ್ಲಿಸಿದ ದಂಪತಿ

ಈ ಬಗ್ಗೆ ಆ ಪುಟ್ಟ ಮಗುವಿನ ಪೋಷಕರೇ ಸ್ವತಃ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿ ನಟಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಪುಟ್ಟ ಮಗುವಿನ ಅಪರೂಪದ ಕಾಯಿಲೆಗೆ ಚಿಕಿತ್ಸೆ ನೀಡಲು ಸಹಾಯ ಮಾಡಿದ್ದಲ್ಲದೇ ನಟಿ, ಚಿಕಿತ್ಸೆ ಪಡೆದ ನಂತರ ಆ ಮಗುವನ್ನು ಹೋಗಿ ಭೇಟಿ ಮಾಡಿ ಮುದ್ದಾಡಿದ್ದಾರೆ. ಶ್ರುತಿ ಹಾಸನ್ ಆ ಮಗುವಿನ ಜೊತೆ ಕಾಲ ಕಳೆಯುತ್ತಿರುವ ಫೋಟೋ ವೀಡಿಯೋಗಳನ್ನು ಮಗುವಿನ ಪೋಷಕರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ನಟಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Related Articles

Related image1
ಸಂಗೀತವೇ ನನ್ನ ಉಸಿರು, ಅದಿಲ್ಲದಿದ್ದರೆ ನಾನೇನಾಗುತ್ತಿದ್ದೆನೋ ಗೊತ್ತಿಲ್ಲ: ಗಾಯಕಿ-ನಟಿ ಶ್ರುತಿ ಹಾಸನ್!
Related image2
ನನ್ನನ್ನು ಐರನ್ ಲೆಗ್ ಅಂದ್ರು.. ಆದ್ರೆ ಆ ಹೀರೋ ಬಗ್ಗೆ ಏನ್ ಹೇಳ್ತಿರಾ? ಶ್ರುತಿ ಹಾಸನ್ ತಿರುಗೇಟು
36
ಮಗು ಅಳವಿ ಜೊತೆ ನಟಿ ಶ್ರುತಿ ಹಾಸನ್
Image Credit : Instagram

ಮಗು ಅಳವಿ ಜೊತೆ ನಟಿ ಶ್ರುತಿ ಹಾಸನ್

ತಮ್ಮ ಮಗು ಆಳವಿ ಜೊತೆಗೆ ಶ್ರುತಿ ಆಟವಾಡುತ್ತಿರುವ ಫೋಟೋವನ್ನು ಹಂಚಿಕೊಂಡಿರುವ ದಂಪತಿ ಆಕೆಯಿಂದಾಗಿ ಇಂದು ನಮ್ಮ ಮಗಳು ಜೀವಂತವಾಗಿದ್ದಾಳೆ ಎಂದು ಬರೆದುಕೊಂಡಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಶ್ರುತಿ ಹಾಗೂ ಅಳವಿ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿರುವ ದಂಪತಿ ಹೀಗೆ ಬರೆದುಕೊಂಡಿದ್ದಾರೆ. 'ನೀವು ನಿಮ್ಮ ಹೀರೋ/ಹೀರೋಯಿನ್‌ಗಳನ್ನು ಎಂದಿಗೂ ಭೇಟಿಯಾಗಬಾರದು ಎಂದು ಅವರು ಹೇಳುತ್ತಾರೆ, ಆದರೆ ಸ್ಪಷ್ಟವಾಗಿ, ಅವರು ಶ್ರುತಿ ಹಾಸನ್ (@shrutzhaasan) ಅವರನ್ನು ಭೇಟಿ ಮಾಡಿಲ್ಲ. ನಾನು ಯಾವಾಗಲೂ ಬಹಳಷ್ಟು ಯೋಚಿಸುವ ನೋಡುವ ಆದರೆ ತುಂಬಾ ಕಡಿಮೆ ಹೇಳುವ ವ್ಯಕ್ತಿ ಮತ್ತು ಇಂದು ನನ್ನ ಹೃದಯ ತುಂಬಿ ತುಳುಕುತ್ತಿದೆ. ಈ ಭೇಟಿಯು ಒಂದು ಮೈಲಿಗಲ್ಲು.' ಎಂದು ಅವರು ಬರೆದುಕೊಂಡಿದ್ದಾರೆ.

46
ಮನೆಗೆ ಕರೆಸಿ ಸಹಾಯ ಮಾಡಿದ ಶ್ರುತಿ
Image Credit : Instagram

ಮನೆಗೆ ಕರೆಸಿ ಸಹಾಯ ಮಾಡಿದ ಶ್ರುತಿ

ನಟಿ ಶ್ರುತಿ ತಮ್ಮ ಮೇಲೆ ತೋರಿದ ಕರುಣೆಯ ಬಗ್ಗೆ ಹೇಳಿಕೊಂಡ ಅವರು ನನ್ನನ್ನು ಹೆಚ್ಚು ರೋಮಾಂಚನಗೊಳಿಸಿದ್ದು ಅವರ ಉಪಸ್ಥಿತಿ ಮಾತ್ರವಲ್ಲ, ಅವರ ಅದ್ಭುತ ದಯೆ. ಅವರು ತಮ್ಮ ಖಾಸಗಿ ಸ್ಥಳಕ್ಕೆ ನಮ್ಮನ್ನು ಆಹ್ವಾನಿಸಿದ್ದು ಒಂದು ಅಪರೂಪದ ಉಡುಗೊರೆ, ಆದರೆ ಅವರು ನಮ್ಮನ್ನು ಸ್ವಾಗತಿಸಿದ ರೀತಿ ಕುಟುಂಬದಂತೆ ಭಾಸವಾಯಿತು. ಅವರು ನಮ್ಮ ಮಗಳು ಆಳವಿಯೊಂದಿಗೆ ತುಂಬಾ ಸಿಹಿಯಾಗಿ, ತಾಳ್ಮೆಯಿಂದ ವರ್ತಿಸಿದ ರೀತಿ ನಾನು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುವ ವಿಷಯ. ಶ್ರುತಿಯ ಮಾಧುರ್ಯ ಮತ್ತು ಅವರು ತುಂಬಾ ಚಿಂತನಶೀಲವಾಗಿ ನೀಡಿದ ಬಿಸ್ಕತ್ತುಗಳ ದೊಡ್ಡ ಚೀಲದಿಂದಾಗಿ ಆಳವಿಯ ಮುಖವು ಬೆಳಗುವುದನ್ನು ನೋಡುವುದು ನನ್ನನ್ನು ಅತ್ಯಂತ ಸಂತೋಷಪಡಿಸಿತು ಎಂದು ಅವರು ಬರೆದಿದ್ದಾರೆ. ಆಕೆ ಬಹಳ ಸರಳವಾದ ಹುಡುಗಿ, ಆಕೆ ಮಾಡಿದ ಕೆಲಸಕ್ಕೆ ನಾವು ಕೃತಜ್ಞರಾಗಿದ್ದೇವೆ ಎಂದು ದಂಪತಿ ಹೇಳಿದ್ದಾರೆ.

56
ಶ್ರುತಿ ಹಾಸನ್ ದಂಪತಿಗೆ ಸಹಾಯ ಮಾಡಿದ್ದು ಹೇಗೆ?
Image Credit : Instagram

ಶ್ರುತಿ ಹಾಸನ್ ದಂಪತಿಗೆ ಸಹಾಯ ಮಾಡಿದ್ದು ಹೇಗೆ?

ಜುಲೈ 2025 ರಲ್ಲಿ ಈ ದಂಪತಿ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ತಮ್ಮ ಮಗಳು ಹೊಂದಿರುವ ಅತೀ ಅಪರೂಪದ ಎಂಎಸ್‌ಎಂಡಿ(Mendelian Susceptibility to Mycobacterial Diseases)ಆರೋಗ್ಯ ಸಮಸ್ಯೆ, ಅದಕ್ಕೆ ಮೂಳೆ ಮಜ್ಜೆಯ ಕಸಿ ಅಗತ್ಯವಿರುವುದು ಅದಕ್ಕೆ ತಗಲುವ ದುಬಾರಿ ವೆಚ್ಚದ ಬಗ್ಗೆ ವಿವರಿಸಿದ್ದರು. ಇದನ್ನು ನೋಡಿ ನಟಿ ಶ್ರುತಿ ಹಾಸನ್ ಆ ಮಗುವಿಗೆ ಸಹಾಯ ಮಾಡುವುದಕ್ಕೆ ಮುಂದೆ ಬಂದರು. ದೇವರು ನಮ್ಮನ್ನು ತಲುಪಲು ಸಾಧ್ಯವಾಗದಿದ್ದಾಗ, ಅವನು ಯಾರನ್ನಾದರೂ ಕಳುಹಿಸುತ್ತಾನೆ ಹಾಗೆಯೇ ನಮಗೆ, ಒಬ್ಬರು ಶ್ರುತಿ ಅವರನ್ನು ಕಳುಹಿಸಿದರು. ಅವರು ನಮ್ಮನ್ನು ಅದ್ಭುತ ವೈದ್ಯರ ತಂಡಕ್ಕೆ ಪರಿಚಯಯಿಸಿದರು ಎಂದು ಅವರು ಹೇಳುತ್ತಾರೆ.

66
ಶ್ರುತಿ ತಂಡದಿಂದ ಮಗುವಿಗೆ ಎಲ್ಲಾ ರೀತಿಯ ಸಹಾಯ
Image Credit : Instagram

ಶ್ರುತಿ ತಂಡದಿಂದ ಮಗುವಿಗೆ ಎಲ್ಲಾ ರೀತಿಯ ಸಹಾಯ

ಆಳವಿಯನ್ನು ಇದ್ದಕ್ಕಿದ್ದಂತೆ ಐಸಿಯುಗೆ ದಾಖಲಿಸಿದಾಗ, ನಮಗೆ ಸಹಾಯ ಮಾಡಿದ್ದು ಶ್ರುತಿ ಮತ್ತು ಅವರ ತಂಡ. ಅವರ ಕಾರಣದಿಂದಾಗಿ ನಮಗೆ ವೇಗವಾಗಿ ಮುಂದಡಿ ಇಡಲು, ಉತ್ತಮ ಆರೈಕೆಯನ್ನು ಪಡೆಯಲು ಸಾಧ್ಯವಾಯ್ತು. ಅವರು ಹಾಗೂ ಅವರ ತಂಡವು ಎಲ್ಲವನ್ನೂ ನೋಡಿಕೊಂಡರು, ನಮಗೆ ಶಕ್ತಿಯನ್ನು ನೀಡಿದರು, ಭಾವನಾತ್ಮಕವಾಗಿ, ಆರ್ಥಿಕವಾಗಿ ನಮಗೆ ಬೆಂಬಲ ನೀಡಿದರು ಮತ್ತು ಅವರ ಕಾರಣದಿಂದಾಗಿ ನನ್ನ ಮಗಳು ಇಂದು ಜೀವಂತವಾಗಿದ್ದಾಳೆ ಎಂದು ಪೋಷಕರು ಬರೆದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಕಾಲಿವುಡ್
ಮನರಂಜನಾ ಸುದ್ದಿ

Latest Videos
Recommended Stories
Recommended image1
Warning... ಮನೆಯಲ್ಲಿ ಒಬ್ಬರೇ ಇದ್ದಾಗ ತಪ್ಪಿಯೂ ಈ ಸಿನಿಮಾ ನೋಡ್ಬೇಡಿ
Recommended image2
ಭಾರೀ ವೈರಲ್ ಆಗಿರೋ ಅಮಿತಾಭ್ ಬಚ್ಚನ್ ನೆರೆಮನೆಯವ.. ಕಾರಣ ಗೊತ್ತಾದ್ರೆ ನೀವು ಶಾಕ್ ಆಗ್ತೀರಾ?
Recommended image3
ದಾಸನಿಗಿಲ್ಲ ಬಿಡುಗಡೆ ಭಾಗ್ಯ, ಜೈಲಲ್ಲೇ ಹುಟ್ಟುಹಬ್ಬ! ಮುಂದಿನ ವರ್ಷ ಸಿಗೋಣ ಎಂದಿದ್ದ ದರ್ಶನ್
Related Stories
Recommended image1
ಸಂಗೀತವೇ ನನ್ನ ಉಸಿರು, ಅದಿಲ್ಲದಿದ್ದರೆ ನಾನೇನಾಗುತ್ತಿದ್ದೆನೋ ಗೊತ್ತಿಲ್ಲ: ಗಾಯಕಿ-ನಟಿ ಶ್ರುತಿ ಹಾಸನ್!
Recommended image2
ನನ್ನನ್ನು ಐರನ್ ಲೆಗ್ ಅಂದ್ರು.. ಆದ್ರೆ ಆ ಹೀರೋ ಬಗ್ಗೆ ಏನ್ ಹೇಳ್ತಿರಾ? ಶ್ರುತಿ ಹಾಸನ್ ತಿರುಗೇಟು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved