ಬೀಚ್‌ನಲ್ಲಿ ಶರ್ಟ್ ಚಿಚ್ಚಿ ಬೋಲ್ಡ್ ಪೋಸ್ ಕೊಟ್ಟ ಶ್ರಿಯಾ ಶರಣ್: ಸಂತೂರ್ ಮಮ್ಮಿ ಎಂದ ಫ್ಯಾನ್ಸ್!
ಬಹುಭಾಷಾ ನಟಿ ಶ್ರಿಯಾ ಶರಣ್ ರಿಲ್ಯಾಕ್ಸ್ ಮೂಡ್ನಲ್ಲಿದ್ದು, ಬೀಚ್‌ನಲ್ಲಿ ಮೋಜು ಮಸ್ತಿ ಮಾಡ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್ ವೈರಲ್ ಆಗಿದೆ.
ಎರಡು ದಶಕಗಳಿಂದಲೂ ನಟಿ ಶ್ರಿಯಾ ಚಿತ್ರರಂಗದಲ್ಲಿ ತಮ್ಮದೇಯಾದ ಛಾಪನ್ನೂ ಮೂಡಿಸಿ ಮಿಂಚುತ್ತಿದ್ದಾರೆ. ಸದ್ಯ ಅವರು ಬೀಚ್‌ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಬೀಚ್‌ನಲ್ಲಿ ಶರ್ಟ್ ಬಟನ್ ತೆಗೆದು ಬೋಲ್ಡ್ ಆಗಿ ಶ್ರಿಯಾ ಶರಣ್ ಫೋಟೋಗೆ ಪೋಸ್ ಕೊಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಲ್ಲದೇ ಸಾಗರವು ನನಗೆ ಸಂತೋಷವನ್ನು ನೀಡುತ್ತದೆ ಎಂದು ಬರೆದುಕೊಂಡಿದ್ದಾರೆ
ಇಷ್ಟಂ ಸಿನಿಮಾದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಶ್ರಿಯಾ ಕಡಿಮೆ ಅವಧಿಯಲ್ಲಿ ಸ್ಟಾರ್ ನಟಿ ಆಗಿದ್ದಾರೆ. ತೆಲುಗಿನಲ್ಲಿ ಟಾಪ್ ಹೀರೋಗಳ ಜೊತೆಯೂ ನಟಿಸಿದ್ದಾರೆ. ಹಲವು ಹಿಟ್ ಸಿನಿಮಾ ನೀಡಿದ್ದಾರೆ.
ನಟಿ ಶ್ರಿಯಾ ಶರಣ್ ಬಾಲಿವುಡ್, ಕಾಲಿವುಡ್, ಹಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದು, ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಬ್ಜ ಸಿನಿಮಾದಲ್ಲಿ ನಟಿಸುವ ಮೂಲಕ ಶ್ರಿಯಾ ಕನ್ನಡಿಗರ ಮನಗೆದ್ದಿದ್ದಾರೆ.
ಬಾಲಿವುಡ್ ಚಿತ್ರಗಳಲ್ಲಿಯೂ ಅಭಿನಯಿಸಿ ಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಹಿಂದಿಯಲ್ಲಿ ದೃಶ್ಯಂ ಸಿನಿಮಾ ಮೂಲಕ ನಟಿ ಶ್ರಿಯಾ ಶರಣ್ ಸದ್ದು ಮಾಡಿದ್ದರು. ಅವರು ಮಾಡೆಲ್ ಆಗಿಯೂ ಕೆಲಸ ಮಾಡಿದ್ದಾರೆ.
ನಟನೆಯಲ್ಲಿಯೂ ಶ್ರಿಯಾ ಎವರ್ ಗ್ರೀನ್ ಸ್ಟಾರ್ ಎಂದೇ ಗುರುತಿಸಿಕೊಂಡವರು. ಸ್ಟಾರ್ ಹೀರೋಗಳ ಜೊತೆ ತೆರೆ ಹಂಚಿಕೊಂಡಿರುವ ಶ್ರಿಯಾ ಈಗ ದೊಡ್ಡ ದೊಡ್ಡ ನಟರ ಜೊತೆ ನಟಿಸಿ ಹೆಸರು ಮಾಡುತ್ತಿದ್ದಾರೆ.