ಸ್ಟಾರ್ ಹೀರೋ ಸಂಭಾವನೆಗಿಂತ ಹೆಚ್ಚು ತಿಂಗಳ ಆದಾಯ ಗಳಿಸುತ್ತಾರೆ ರಮ್ಯ ಕೃಷ್ಣನ್
ರಮ್ಯಾಕೃಷ್ಣನ್: ಸೀನಿಯರ್ ನಟಿ ರಮ್ಯಾಕೃಷ್ಣನ್ ಸೆಲೆಕ್ಟಿವ್ ಆಗಿ ಸಿನಿಮಾ ಮಾಡ್ತಾರೆ. ಆದ್ರೆ ಆದಾಯ ಮಾತ್ರ ಕೋಟಿ ಕೋಟಿ. ರಮ್ಯಾ ಕೃಷ್ಣ ತಿಂಗಳ ಆದಾಯ ಕೇಳಿದರೆ ದಂಗಾಗುವುದು ಖಚಿತ. ರಮ್ಯಾ ಕೃಷ್ಣನ್ ಆದಾಯ ಮೂಲ ಯಾವುದು?

80-90 ರ ದಶಕದಲ್ಲಿ ಸಿನಿಮಾರಂಗದಲ್ಲಿ ಮಿಂಚಿದ ರಮ್ಯಾಕೃಷ್ಣನ್, ಗ್ಲಾಮರ್ ಬ್ಯೂಟಿ ಎಂದು ಹೆಸರುವಾಸಿಯಾಗಿದ್ದರು. ಎಲ್ಲಾ ಟಾಪ್ ಸ್ಟಾರ್‌ಗಳ ಜೊತೆ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ರಮ್ಯ ಕೃಷ್ಣನ್ ನಟಿಸಿದ್ದಾರೆ. ಈಗಲೂ ರಮ್ಯ ಕೃಷ್ಣನ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರ ವಹಿಸುತ್ತಾರೆ.
ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ತಿರುವು ಪಡೆದ ರಮ್ಯಾಕೃಷ್ಣನ್‌ಗೆ 'ಬಾಹುಬಲಿ' ಸಿನಿಮಾ ಮಹತ್ವದ ತಿರುವು ನೀಡಿತು. ಶಿವಗಾಮಿ ಪಾತ್ರದಲ್ಲಿ ಅವರು ಎಲ್ಲರನ್ನೂ ಅಚ್ಚರಿಗೊಳಿಸಿದರು. ಶಿವಗಾಮಿ ಪಾತ್ರದ ಮೂಲಕ ದೇಶಾದ್ಯಂತ ರಮ್ಯ ಕೃಷ್ಣನ್ ಸದ್ದು ಮಾಡಿದ್ದಾರೆ. ಈ ಪಾತ್ರವನ್ನು ರಮ್ಯ ಕೃಷ್ಣನ್‌ಗಿಂತ ಉತ್ತಮವಾಗಿ ಮಾಡಬಲ್ಲ ನಟಿ ಮತ್ತೊಬ್ಬರಿಲ್ಲ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಕನ್ನಡದಲ್ಲೂ ಹಲವು ಸಿನಿಮಾಗಳಲ್ಲಿ ರಮ್ಯಾ ಕೃಷ್ಣನ್ ಪಾತ್ರ ನಿರ್ವಹಿಸಿದ್ದಾರೆ.
ಐವತ್ತು ದಾಟಿದ ರಮ್ಯಾಕೃಷ್ಣನ್ ಎಲ್ಲಾ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಪಾತ್ರಗಳ ಆಯ್ಕೆ ಮಾಡುವಾಗ ಎಚ್ಚರ ವಹಿಸುತ್ತಾರೆ. ಇಷ್ಟೇ ಅಲ್ಲ ಏಕ ಕಾಲಕ್ಕೆ ಹಲವು ಸಿನಿಮಾಗಳಲ್ಲಿ ರಮ್ಯ ಕೃಷ್ಣನ್ ನಟಿಸುತ್ತಿಲ್ಲ. ಆದರೆ ಅವರ ಸಂಪಾದನೆ ಕೋಟಿ ಕೋಟಿ. ಮೂಲಗಳ ಪ್ರಕಾರ ರಮ್ಯ ಕೃಷ್ಣನ್ ಅವರ ತಿಂಗಳ ಆದಾಯ ಬರೋಬ್ಬರಿ 5 ಕೋಟಿ ರೂಪಾಯಿ. ಇದು ಹಲವು ಸ್ಟಾರ್ ಹೀರೋಗಳ ಸಂಭಾವನೆಗಿಂತ ಹೆಚ್ಚು.
ಕೇರಳದಲ್ಲಿ ಐದು ಬ್ಯೂಟಿ ಪಾರ್ಲರ್‌ಗಳು ಮತ್ತು ಹೈದರಾಬಾದ್‌ನಲ್ಲಿ ಮೂರು ಆಭರಣ ಅಂಗಡಿಗಳನ್ನು ಹೊಂದಿರುವ ರಮ್ಯಾಕೃಷ್ಣನ್, ಸಿನಿಮಾ, ಜಾಹೀರಾತು ಮತ್ತು ವ್ಯವಹಾರಗಳಿಂದ ತಿಂಗಳಿಗೆ ಐದು ಕೋಟಿ ಗಳಿಸುತ್ತಾರೆ ಎನ್ನಲಾಗಿದೆ. ಹಲವು ಕ್ಷೇತ್ರದಲ್ಲಿ ರಮ್ಯ ಕೃಷ್ಣನ್ ಹೂಡಿಕೆ ಮಾಡಿದ್ದಾರೆ. ಇದರಿಂದ ಆದಾಯ ಗಳಿಸುತ್ತಿದ್ದಾರೆ. ಹೀಗಾಗಿ ರಮ್ಯ ಕೃಷ್ಣನ್ ತಿಂಗಳಿಗೆ 5 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ವಾರ್ಷಿಕ ಕೋಟಿ ಕೋಟಿ ರೂಪಾಯಿ ಆದಾಯ ತೆರಿಗೆಯನ್ನು ರಮ್ಯ ಕೃಷ್ಣನ್ ಪಾವತಿಸುತ್ತಿದ್ದಾರೆ.
ರಮ್ಯಾಕೃಷ್ಣನ್
ರಮ್ಯಾಕೃಷ್ಣನ್ ಸಂಪಾದನೆಗೆ ಹೋಲಿಸಿದರೆ ಸ್ಟಾರ್ ನಟರೂ ಇಷ್ಟು ಆದಾಯಗಳಿಸುತ್ತಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ. ನಟಿ ಆದಾಯ ಕುರಿತು ರಮ್ಯಾಕೃಷ್ಣನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಯಾವುದೇ ರೀತಿಯ ಸ್ಪಷ್ಟನೆಯನ್ನೂ ನೀಡಿಲ್ಲ. ಆದರೆ ರಮ್ಯಾಕೃಷ್ಣನ್ ಲಕ್ಷುರಿ ಲೈಫ್ ಸ್ಟೈಲ್ ಹೊಂದಿದ್ದಾರೆ ಅನ್ನೋದು ನಿಜ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.