- Home
- Entertainment
- Cine World
- MS Dhoni ಜೊತೆಗಿನ ನನ್ನ ಸಂಬಂಧ ಇನ್ನೂ ಕಪ್ಪುಚುಕ್ಕೆಯಾಗಿಯೇ ಉಳಿದಿದೆ: ಬೆಳಗಾವಿ ನಟಿ ಲಕ್ಷ್ಮೀ ರಾಯ್
MS Dhoni ಜೊತೆಗಿನ ನನ್ನ ಸಂಬಂಧ ಇನ್ನೂ ಕಪ್ಪುಚುಕ್ಕೆಯಾಗಿಯೇ ಉಳಿದಿದೆ: ಬೆಳಗಾವಿ ನಟಿ ಲಕ್ಷ್ಮೀ ರಾಯ್
ಭಾರತೀಯ ಕ್ರಿಕೆಟಿಗ ಎಂ ಎಸ್ ಧೋನಿ ಜೊತೆಗಿನ ತಮ್ಮ ಹಳೆಯ ಸಂಬಂಧದ ಬಗ್ಗೆ ರಾಯ್ ಲಕ್ಷ್ಮಿ ಮನಬಿಚ್ಚಿ ಮಾತನಾಡಿದ್ದಾರೆ. ಅದು ತಮ್ಮ ಮೇಲೆ ಒಂದು ಗಾಯದಂತೆ ಉಳಿದಿದೆ ಎಂದು ಹೇಳಿದ್ದಾರೆ.

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪ್ರಸಿದ್ಧ ನಟಿ ರಾಯ್ ಲಕ್ಷ್ಮಿ. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. 2005ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರಿಗೆ ಹೇಳಿಕೊಳ್ಳುವಷ್ಟು ಯಶಸ್ಸು ಸಿಕ್ಕಿಲ್ಲ.
ರಾಯ್ ಲಕ್ಷ್ಮಿ ಮತ್ತು ಧೋನಿ ಐಪಿಎಲ್ ಆರಂಭದ ಸಮಯದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆಗ ಇವರಿಬ್ಬರ ಮಧ್ಯೆ ಲವ್ ಇದೆ ಎನ್ನಲಾಗಿತ್ತು. ನಟಿಯರಿಗೂ, ಕ್ರಿಕೆಟರ್ಸ್‌ಗೂ ಒಂದು ರೀತಿಯ ನಂಟಿದೆ ಎನ್ನಬಹುದು.
ರಾಯ್ ಲಕ್ಷ್ಮಿ ಮತ್ತು ಧೋನಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದರಿಂದ ಗಾಸಿಪ್‌ಗಳು ಹೆಚ್ಚಾಗಿದ್ದವು. ಆದರೆ ನಾವಿಬ್ಬರೂ ಸ್ನೇಹಿತರು ಎಂದು ಈ ಜೋಡಿ ಹೇಳಿಕೊಂಡಿತ್ತು. ಬೆಳಗಾವಿ ಮೂಲದ ಲಕ್ಷ್ಮೀ ರಾಯ್ ಅವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಕೆಲವು ವರ್ಷಗಳಿಂದ ಅವರು ವರ್ಷಕ್ಕೆ ಒಂದರಂತೆ ಸಿನಿಮಾ ಮಾಡುತ್ತಿದ್ದಾರೆ.
ಧೋನಿ ಜೊತೆಗಿನ ಸಂಬಂಧವು ತಮ್ಮ ಮೇಲೆ ಒಂದು ಗಾಯದಂತೆ ಉಳಿದಿದೆ ಎಂದು ರಾಯ್ ಲಕ್ಷ್ಮಿ ಹೇಳಿದ್ದಾರೆ. ನನ್ನ ಮಕ್ಕಳ ಮುಂದೆಯೂ ಜನರು ಈ ಬಗ್ಗೆ ಮಾತಾಡ್ತಾರೆ ಎಂದು ಕಾಣುತ್ತದೆ ಎಂದು ರಾಯ್ ಲಕ್ಷ್ಮೀ ಈ ಹಿಂದೆ ಹೇಳಿದ್ದರು.
ರಾಯ್ ಲಕ್ಷ್ಮಿ ಮತ್ತು ಧೋನಿ ಸ್ನೇಹಪೂರ್ವಕವಾಗಿ ಬೇರ್ಪಟ್ಟಿದ್ದಾರೆ ಎಂದು ವರದಿಯಾಗಿದೆ. "ನಾವಿಬ್ಬರೂ ಬೇರೆ ಆಗಿದ್ದೇವೆ, ಅವರಿಗೆ ಮದುವೆಯಾಗಿದೆ" ಎಂದು ಅವರು ಈ ಹಿಂದಿನ ಸಂದರ್ಶನದಲ್ಲಿ ಹೇಳಿದ್ದರು. ಸದ್ಯ ರಾಯ್ ಲಕ್ಷ್ಮೀ ಅವರು ಟ್ರಾವೆಲಿಂಗ್ ಮಾಡುತ್ತಿದ್ದು, ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.