- Home
- Entertainment
- Cine World
- ಲೆಹಂಗಾ ತೊಟ್ಟು ಸ್ವಿಮ್ಮಿಂಗ್ ಪೂಲ್‌ನಲ್ಲಿ ಕೂತು ತಾವರೆ ಹೂವು ಹಿಡಿದ ಕಣ್ಸನ್ನೆ ಬೆಡಗಿ ಪ್ರಿಯಾ!
ಲೆಹಂಗಾ ತೊಟ್ಟು ಸ್ವಿಮ್ಮಿಂಗ್ ಪೂಲ್‌ನಲ್ಲಿ ಕೂತು ತಾವರೆ ಹೂವು ಹಿಡಿದ ಕಣ್ಸನ್ನೆ ಬೆಡಗಿ ಪ್ರಿಯಾ!
ಕಣ್ಸನ್ನೆ ಮೂಲಕವೇ ಪಡ್ಡೆ ಹುಡುಗರ ಮನಸು ಕದ್ದ ‘ಓರು ಅಡಾರ್ ಲವ್’ ಚಿತ್ರದ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಹೊಸ ಬೋಲ್ಡ್ ಫೋಟೋಗಳ ಮೂಲಕ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ.

ಆಕರ್ಷಕವಾಗಿ ಕಣ್ಣು ಹೊಡೆದು ರಾತ್ರೋ ರಾತ್ರಿ ಫೇಮಸ್ ಆದ ಚೆಲುವೆ ಕೇರಳದ ಪ್ರಿಯಾ ಪ್ರಕಾಶ್ ವಾರಿಯರ್. ಅದಾದ ಮೇಲೆ 2018ರ ಕೊನೆಯಲ್ಲಿ ನಿಂತು ಭಾರತದಲ್ಲಿ ಯಾರು ಹೆಚ್ಚಾಗಿ ಹುಡುಕಾಡಲ್ಪಟ್ಟ ವ್ಯಕ್ತಿ ಎಂದು ಗೂಗಲ್ ಹಾಕಿದ ಪ್ರಶ್ನೆಗೆ ಸಿಕ್ಕ ಉತ್ತರವೂ ಇದೇ ಪ್ರಿಯಾ ಪ್ರಕಾಶ್ ವಾರಿಯರ್.
ಕಣ್ಸನ್ನೆ ಮೂಲಕವೇ ಪಡ್ಡೆ ಹುಡುಗರ ಮನಸು ಕದ್ದ ‘ಓರು ಅಡಾರ್ ಲವ್’ ಚಿತ್ರದ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಹೊಸ ಬೋಲ್ಡ್ ಫೋಟೋಗಳ ಮೂಲಕ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ.
ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಲೆಹಂಗಾ ತೊಟ್ಟು ಸ್ವಿಮ್ಮಿಂಗ್ ಪೂಲ್‌ನಲ್ಲಿ ಕೂತು ತಾವರೆ ಹೂವು ಹಿಡಿದು ಪೋಸ್ ಕೊಟ್ಟಿದ್ದಾರೆ ಈ ಮಲಯಾಳಿ ಕುಟ್ಟಿ. ಪ್ರಿಯಾ ಪ್ರಕಾಶ್ ವಾರಿಯರ್ ನಾಯಕಿಯಾಗಿ ನಟಿಸಿರುವ ಕನ್ನಡದ ‘ವಿಷ್ಣುಪ್ರಿಯ’ ಸಿನಿಮಾ ಇನ್ನೂ ತೆರೆಗೆ ಬಂದಿಲ್ಲ.
ಬೆಳ್ಳಿತೆರೆಯನ್ನು ಅಲುಗಾಡಿಸಲೆಂದೇ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಈ ಬ್ಯೂಟಿಗೆ ಸೌತ್ ನಲ್ಲಿ ಒಂದೂ ಹಿಟ್ ಚಿತ್ರ ಸಿಗದೇ ಕಂಗಾಲಾಗಿದ್ದಾರೆ. ಹಾಗಾಗಿಯೇ ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಪದೇ ಪದೇ ಹೊಸ ಪೋಟೋಗಳನ್ನು ಶೇರ್ ಮಾಡುತ್ತಲೇ ಇದ್ದಾರೆ.
ಸಿನಿ ಇಂಡಸ್ಟ್ರಿಗೆ ಹೊಸ ಹೀರೋಯಿನ್‌ಗಳ ಎಂಟ್ರಿ ಸಂಖ್ಯೆ ಹೆಚ್ಚುತ್ತಲೇ ಇರುವಾಗ ಹಿಟ್ ಚಿತ್ರಗಳಿಲ್ಲದ ಪ್ರಿಯಾ ಪ್ರಕಾಶ್ ವಾರಿಯರ್ಗೆ ಅವಕಾಶಗಳು ಕಡಿಮೆಯಾಗುತ್ತಿವೆ. ಇದರೊಂದಿಗೆ, ಅವರು Instagram ನಲ್ಲಿ ಸಕ್ರಿಯರಾಗಿದ್ದು, ಯಾವಾಗಲೂ ತಮ್ಮ ಫಾಲೋವರ್ಸ್ ಜೊತೆಗೆ ಸಂಪರ್ಕದಲ್ಲಿರುತ್ತಾರೆ.
ಪ್ರಿಯಾ ಪ್ರಕಾಶ್ ಅವರು ಸೆನ್ಸೇಷನಲ್ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿರುವುದು ಇದೇ ಮೊದಲಲ್ಲ. ಹಲವಾರು ಸಲ ನಟಿ ತಮ್ಮ ಫೋಟೋಶೂಟ್ ಮೂಲಕ ನೆಟ್ಟಿಗರ ಮನಸು ಗೆದ್ದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.