ಪ್ರತಿ ದಿನ ಹೊಸ ಸೀರೆ ಉಡುತ್ತಾರೆ ಈ ನಟಿ, ಈ ಸ್ಯಾರಿಗಾಗಿಯೇ ಇದೆ ಪ್ರತ್ಯೇಕ ಮನೆ!
ನಟಿ ನಳಿನಿ ಪ್ರತಿ ದಿನ ಹೊಸ ಸೀರೆ ಉಡುತ್ತಾರೆ. ಅಂದರೆ 356 ದಿನ 365 ಸೀರೆ. ಹಳೇ ಸೀರೆ ಇಡಲು ಪ್ರತ್ಯೇಕ ಮನೆ ಇದೆ. ಈ ವಿಶೇಷ ನಟಿಯ ಫ್ಯಾಶನ್ ಜಗತ್ತಿನ ಒಳನೋಟ ಇಲ್ಲಿದೆ.
ಸೀರೆ ಪ್ರಿಯೆ ನಳಿನಿ
ಮಹಿಳೆಯರಿಗೆ ಸೀರೆ ಅದೆಷ್ಟಿದ್ದರೂ ಸಾಕಾಗುವುದಿಲ್ಲ ಅನ್ನೋ ಮಾತಿದೆ. ಹುಟ್ಟು ಹಬ್ಬ, ಹಬ್ಬ, ವಿಶೇಷ ದಿನ, ಕಾರ್ಯಕ್ರಮ, ಹೊಸ ವರ್ಷ ಹೀಗೆ ಪ್ರತಿ ವಿಶೇಷ ಸಂದರ್ಭದಲ್ಲಿ ಹೊಸ ಹೊಸ ಸೀರೆ, ಬಟ್ಟೆ ಖರೀದಿಸುವುದು ಸಾಮಾನ್ಯ. ವರ್ಷಕ್ಕೆ 10, 20, ಕೆಲವರರು 30 ಸೀರೆಗಳನ್ನು ಖರೀದಿಸುತ್ತಾರೆ. ಆದರೆ ಖ್ಯಾತ ನಟಿ ನಳಿನಿ ದಿನಾ ಹೊಸ ಸೀರೆ ಉಡುತ್ತಾರೆ. ಒಂದು ಬಾರಿ ಉಟ್ಟ ಸೀರೆ ಮತ್ತೆ ಉಡೋದಿಲ್ಲ ಅಂತ ಅವರೇ ಹೇಳಿದ್ದಾರೆ.
ಕೆಲವು ರಿಯಾಲಿಟಿ ಶೋಗಳಲ್ಲಿ 5000 ಸೀರೆ ಇದೆ, ತಿಂಗಳಿಗೆ 5 ಸೀರೆ ತಗೋತೀವಿ ಅಂತ ಹೇಳೋರನ್ನೆಲ್ಲ ಮೀರಿಸಿಬಿಟ್ಟಿದ್ದಾರೆ ನಟಿ ನಳಿನಿ. ಕಾರಣ ನಳಿನಿ ದಿನಕ್ಕೊಂದರಂತೆ 365 ದಿನ 365 ಹೊಸ ಸೀರೆ ಉಡುತ್ತಾರೆ. ನಳಿಗೆ ಹೊಸ ಸೀರೆ ಉಡುವುದೇ ಆನಂದ. ಒಮ್ಮೆ ಉಟ್ಟ ಸೀರೇ ಮೇಲೆ ಪ್ರೀತಿ ಇಲ್ಲ ಎಂದಲ್ಲಾ. ಆದರೆ ಹೊಸ ಸೀರೆ ಉಡುವುದೇ ಇವರ ಪದ್ಧತಿ.
ಇತ್ತೀಚಿನ ಸಂದರ್ಶನವೊಂದರಲ್ಲಿ, ನಳಿನಿ ಪ್ರತಿದಿನ ಹೊಸ ಸೀರೆ ಉಡುತ್ತೇನೆ ಎಂದು ಹೇಳಿದ್ದಾರೆ. ಒಮ್ಮೆ ಉಟ್ಟ ಸೀರೆಯನ್ನು ಮತ್ತೆ ಉಡುವುದಿಲ್ಲವಂತೆ. ಉಟ್ಟ ಸೀರೆಗಳನ್ನು ಇಡಲು ಪ್ರತ್ಯೇಕ ಮನೆಯೇ ಇದೆಯಂತೆ. ನನ್ನ ಮಕ್ಕಳು ಸಹ ನಿಮಗೆ ಸೀರೆ ಬೇಕಾ, ಕೊಡಲಾ ಅಂತ ಕೇಳ್ತಾರೆ ಅಂತ ಹೇಳಿದ್ದಾರೆ. ಇವರ ಈ ಮನೆಯಲ್ಲಿ ಒಮ್ಮೆ ಉಟ್ಟ ಸೀರೆಗಳ ರಾಶಿಯೇ ಇದೆ. ಈ ಪೈಕಿ ಹಲವು ಸೀರೆಗಳನ್ನು ಇತರರಿಗೆ ನೀಡಿದ್ದಾರೆ. ಆದರೂ ಸಾವಿರಕ್ಕೂ ಹೆಚ್ಚು ಸೇರಿಗೆಳು ಇವರ ಈ ಪ್ರತ್ಯೇಕ ಮನೆಯಲ್ಲಿದೆ.
ನಳಿನಿ ಮತ್ತು ರಾಮರಾಜನ್ ವಿಚ್ಛೇದನ
1980 ರಲ್ಲಿ ಬಿಡುಗಡೆಯಾದ 'ಒತ್ತೈಯಡಿ ಚಿತ್ರದ ಮೂಲಕ ನಟಿ ನಳಿನಿ ಪರಿಚಿತರಾದರು. ನಂತರ ಓಂ ಶಕ್ತಿ, ಉದಿರ್ ಉಳ್ಳವರೈ ಉಷಾ, ಶರಣಾಲಯಂ, ಮನೈವಿ ಸೊಲ್ಲೇ ಮಂತ್ರಂ ಮುಂತಾದ ಚಿತ್ರಗಳಲ್ಲಿ ನಟಿಸಿದರು. ನಟ ರಾಮರಾಜನ್ ಅವರನ್ನು ಪ್ರೀತಿಸಿ 1987 ರಲ್ಲಿ ಮದುವೆಯಾದ ನಳಿನಿ, ನಂತರ ಚಿತ್ರರಂಗದಿಂದ ದೂರವಾದರು. ಅವರಿಗೆ ಅರುಣಾ ಮತ್ತು ಅರುಣ್ ಎಂಬ ಅವಳಿ ಮಕ್ಕಳಿದ್ದಾರೆ. ನಂತರ ರಾಮರಾಜನ್ ಅವರೊಂದಿಗೆ ಭಿನ್ನಾಭಿಪ್ರಾಯದಿಂದ ವಿಚ್ಛೇದನ ಪಡೆದರು.
ರಾಮರಾಜನ್ ಮತ್ತು ನಳಿನಿ ಜೋಡಿ
ವಿಚ್ಛೇದನವಾದರೂ ಇಬ್ಬರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇಬ್ಬರ ನಡುವೆ ಉತ್ತಮ ತಿಳುವಳಿಕೆ ಮತ್ತು ಸ್ನೇಹ ಇದೆ ಎಂದು ನಳಿನಿ ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ. ಇಂದಿಗೂ ರಾಮರಾಜನ್ ಅವರನ್ನು ಪ್ರೀತಿಸುತ್ತೇನೆ ಎಂದೂ ಹೇಳುತ್ತಾರೆ.
ನಟಿ ನಳಿನಿ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದರೂ, ಧಾರಾವಾಹಿಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಹಲವು ಧಾರವಾಹಿಗಳಲ್ಲಿ ನಟಿ ಸಕ್ರಿಯವಾಗಿದ್ದಾರೆ. ನಳಿನಿಯನ್ನು ಪ್ರತಿ ದಿನ ಹೊಸ ಹೊಸ ಸೀರೆಯಲ್ಲಿ ನೋಡುವುದೇ ಚೆಂದ ಎಂದು ಆಪ್ತರು ಹೇಳುತ್ತಾರೆ.