- Home
- Entertainment
- Cine World
- 25ನೇ ವಯಸ್ಸಲ್ಲಿ ಮದ್ವೆ, 12 ವರ್ಷ ಚಿಕ್ಕವನೊಂದಿಗೆ ಲವ್… ಈಗ ಮತ್ಯಾರದ್ದೋ ಜೊತೆ ಡೇಟಿಂಗ್… ಇದು ಮಲೈಕಾ ಅರೋರ ಲೈಫು!
25ನೇ ವಯಸ್ಸಲ್ಲಿ ಮದ್ವೆ, 12 ವರ್ಷ ಚಿಕ್ಕವನೊಂದಿಗೆ ಲವ್… ಈಗ ಮತ್ಯಾರದ್ದೋ ಜೊತೆ ಡೇಟಿಂಗ್… ಇದು ಮಲೈಕಾ ಅರೋರ ಲೈಫು!
ಮಲೈಕಾ ಅರೋರ ಲವ್ ಲೈಫ್ ತುಂಬಾ ಟ್ರಾಜಿಡಿಯೇ ಕಾಣಿಸ್ತಿದೆ, ಮದ್ವೆ, ಡಿವೋರ್ಸ್, ಲವ್, ಬ್ರೇಕಪ್ ಆದ್ರೂ ಜೀವನವನ್ನು ಸಖತ್ ಆಗಿ ಎಂಜಾಯ್ ಮಾಡ್ತಿದ್ದಾರೆ ನಟಿ ಮಲೈಕಾ ಅರೋರ.

ಬಾಲಿವುಡ್ ಅಂಗಳದಲ್ಲಿ ತಮ್ಮ ರಿಲೇಶನ್’ಶಿಪ್ ವಿಷ್ಯದಿಂದಲೇ ಹೆಚ್ಚು ಸದ್ದು ಮಾಡ್ತಿದ್ದ ನಟಿ ಅಂದ್ರೆ ಅದು ಮಲೈಕಾ ಅರೋರ (Malaika Arora). ಇತ್ತೀಚೆಗಷ್ಟೇ ಅರ್ಜುನ್ ಕಪೂರ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದ ನಟಿಯ ಲವ್ ಲೈಫ್ ತುಂಬಾನೆ ಕಾಂಪ್ಲೆಕ್ಸ್ ಆಗಿತ್ತು ಅಂದ್ರೆ ತಪ್ಪಾಗಲ್ಲ.
ನಟಿ ಮಲೈಕಾ ಅರೋರಾ ಆಗಾಗ್ಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಚರ್ಚೆಯಲ್ಲಿರುತ್ತಾರೆ. ಸೋಷಿಯಲ್ ಮೀಡಿಯಾದಿಂದ ಗಾಸಿಪ್ ಟೌನ್ ವರೆಗೆ, ನಟಿಯ ಬಗ್ಗೆ ಆಗಾಗ್ಗೆ ಕೆಲವು ಚರ್ಚೆಗಳು ನಡೆಯುತ್ತವೆ. ಮಲೈಕಾ ಮದುವೆ, ಡಿವೋರ್ಸ್, ಲವ್ ಬ್ರೇಕಪ್ ಎಲ್ಲವೂ ಚರ್ಚೆಯಾಗಿದ್ದ ವಿಷ್ಯಗಳೇ.
ನಟಿ, ಮಾಡೆಲ್, ಡ್ಯಾನ್ಸರ್ ಹಾಗೂ ವಿಜೆಯಾಗಿದ್ದ ಮಲೈಕಾ ಅರೋರ ಮದುವೆಯಾಗಿದ್ದು ಅರ್ಬಾಜ್ ಖಾನ್ (Arbaz Khan)ಅವರನ್ನು. ತಮ್ಮ 25ನೇ ವಯಸಲ್ಲಿ ಅಂದ್ರೆ 1998 ರಲ್ಲಿ ಈ ಜೋಡಿ ಮದುವೆಯಾಗಿತ್ತು. 2002 ರಲ್ಲಿ ಇವರಿಗೆ ಅರ್ಹಾನ್ ಖಾನ್ ಜನಿಸಿದ್ದರು. ಆದರೆ 19 ವರ್ಷದ ವೈವಾಹಿಕ ಜೀವನದ ನಂತರ ಹೊಂದಾಣಿಕೆ ವಿಷಯದಿಂದಾಗಿ ಈ ಜೋಡಿ ಬೇರ್ಪಟ್ಟಿತ್ತು.
ಇಬ್ಬರು ಡಿವೋರ್ಸ್ ಪಡೆದ ಅದೇ ವರ್ಷದಲ್ಲಿ ಅಂದ್ರೆ 2016 ರಲ್ಲಿ ಮಲೈಕಾ ಅರೋರಾ ತಮಗಿಂತ 12 ವರ್ಷ ಸಣ್ಣವರಾಗಿರುವ ಅರ್ಜುನ್ ಕಪೂರ್ (Arjun Kapoor) ಲವ್ವಲ್ಲಿ ಬಿದ್ದಿದ್ದರು ಮಲೈಕಾ. ಇವರಿಬ್ಬರು ಹೆಚ್ಚು ಚರ್ಚಿತ ಬಾಲಿವುಡ್ ಜೋಡಿಗಳಲ್ಲಿ ಒಬ್ಬರಾಗಿದ್ದಾರೆ.
ಆರಂಭದಲ್ಲಿ ಸಂಬಂಧವನ್ನು ಸೀಕ್ರೆಟ್ ಆಗಿಟ್ಟ ಈ ಜೋಡಿ, ನಂತರ ಸಾರ್ವಜನಿಕವಾಗಿ ಕೈ ಕೈ ಹಿಡಿದು, ತಿರುಗಾಡೋದಕ್ಕೆ ಶುರು ಮಾಡಿದ್ದರು. ಮಲೈಕಾ ಹೆಚ್ಚಾಗಿ ಅರ್ಜುನ್ ಕಪೂರ್ ಜೊತೆಗಿನ ಫೋಟೊಗಳನ್ನು ಸಹ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದರು. ಅರ್ಜುನ್ ಕಪೂರ್ ಹುಟ್ಟುಹಬ್ಬಕ್ಕೆ ವಿಶೇಷ ಫೊಟೊಗಳ ಮೂಲಕ ವಿಶ್ ಮಾಡಿದ್ದು ಇದೆ.
ಕಳೆದ ಎಂಟು ವರ್ಷಗಳಿಂದ ಜೋಡಿಯಾಗಿ ಕೈ ಕೈ ಹಿಡಿದು ಸುತ್ತಾಡುತ್ತಿದ್ದ ಈ ಜೋಡಿ. ಇದೀಗ ಎಂಟು ವರ್ಷದ ಬಳಿಕ ಬ್ರೇಕಪ್ ಮಾಡಿಕೊಂಡಿದ್ದಾರೆ. ಇಬ್ಬರ ಬ್ರೇಕಪ್ ಗೆ ಕಾರಣ ಏನು ಅನ್ನೋದು ತಿಳಿದು ಬಂದಿಲ್ಲ. ಆದರೆ ಇಬ್ಬರೂ ಬ್ರೇಕಪ್ ಬಗ್ಗೆ ಎಲ್ಲೂ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ರಿಲೇಶನ್’ಶಿಪ್ ಗೆ ಸಂಬಂಧಿಸಿದ ಪೋಸ್ಟ್ ಮಾಡ್ತಾನೆ ಇರ್ತಾರೆ.
ಇದೀಗ ಮಲೈಕಾ ಅರೋರಾ ಜೀವನದಲ್ಲಿ ಹೊಸ ವ್ಯಕ್ತಿ ಎಂಟ್ರಿ ಕೊಟ್ಟಂತೆ ಕಾಣಿಸ್ತಿದೆ. ಯಾಕಂದ್ರೆ ಕಲೆದ ಕೆಲವು ಸಮಯದಿಂದ ಮಲೈಕಾ ಅರೋರಾ, ಮಿಸ್ಟ್ರಿ ಮ್ಯಾನ್ (Mystery Man) ಜೊತೆ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಮಲೈಕಾ ಅರೋರಾ ಮುಂಬೈನಲ್ಲಿ ನಿಗೂಢ ವ್ಯಕ್ತಿ ಜೊತೆ ಕಾಣಿಸಿಕೊಂಡಿದ್ದಾರೆ. ಇಬ್ಬರು ಕೈ ಕೈ ಹಿಡಿದಿದ್ದರು. ಇದು ಸಹ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ ಮತ್ತು ಈ ಇಬ್ಬರ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಯಾರಿದು ಅನ್ನೋದರ ಬಗ್ಗೆ ಚರ್ಚೆ ನಡೆಯುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.