ದುಬೈ ಮೂಲದ ಉದ್ಯಮಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೀರ್ತಿ ಸುರೇಶ್
ನಟಿ ಕೀರ್ತಿ ಸುರೇಶ್ ಆಂಟನಿ ಥಟ್ಟಿಲ್ ಅವರನ್ನು ವಿವಾಹವಾಗಿದ್ದಾರೆ. ದುಬೈ ಮೂಲದ ಉದ್ಯಮಿ ಆಂಟನಿ ಜೊತೆ ಹಿಂದೂ ಸಂಪ್ರದಾಯದಂತೆ ಕೀರ್ತಿ ಸುರೇಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆ ಸಮಾರಂಭ ಗೋವಾದಲ್ಲಿ ನಡೆದಿದೆ.
ನಟಿ ಕೀರ್ತಿ ಸುರೇಶ್ ಸೋಶಿಯಲ್ ಮೀಡಿಯಾದಲ್ಲಿ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆಂಟನಿ ಥಟ್ಟಿಲ್ ಜೊತೆ ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕೀರ್ತಿ ಸುರೇಶ್ ಕಾಲಿಟ್ಟಿದ್ದಾರೆ.
ಕೀರ್ತಿ ಸುರೇಶ್ ಪತಿ ಆಂಟನಿ ಥಟ್ಟಿಲ್ ದುಬೈ ಮೂಲದ ಉದ್ಯಮಿಯಾಗಿದ್ದಾರೆ. ಆಂಟನಿ ಅವರು ಕೊಚ್ಚಿಯಲ್ಲಿ ಹಲವಾರು ರೆಸಾರ್ಟ್‌ಗಳನ್ನು ನಡೆಸುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಕೀರ್ತಿ ಸುರೇಶ್ ಅವರ ಮದುವೆ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆಮಂತ್ರಣ ಪತ್ರದಲ್ಲಿ ಕೀರ್ತಿ ಸುರೇಶ್ ಪೋಷಕರಾದ ಜಿ. ಸುರೇಶ್ ಕುಮಾರ್ ಮತ್ತು ಮೇನಕಾ ಸುರೇಶ್ ಸಹಿ ಹಾಕಿದ್ದರು.
ನವೆಂಬರ್‌ನಲ್ಲಿ ತಿರುಪತಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೀರ್ತಿ ಸುರೇಶ್ ಮದುವೆ ಬಗ್ಗೆ ಮಾತನಾಡಿದ್ದರು. ಮುಂದಿನ ತಿಂಗಳು ಮದುವೆಯಾಗುತ್ತಿದ್ದು, ಇಂದು ತಿರುಪತಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡಿದ್ದೇನೆ. ನನ್ನ ಮದುವೆ ಗೋವಾದಲ್ಲಿ ನಡೆಯಲಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದರು.
ಗೆಳೆಯ ಆಂಟನಿ ಥಟ್ಟಿಲ್ ಜೊತೆಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ತಾವು ರಿಲೇಶನ್‌ಶಿಪ್‌ನಲ್ಲಿರೋ ವಿಷಯವನ್ನು ರಿವೀಲ್ ಮಾಡಿದ್ದಾರೆ. ಕೀರ್ತಿ ಸುರೇಶ್ ಮತ್ತು ಆಂಟನಿ ಥಟ್ಟಿಲ್ 15 ವರ್ಷಗಳಿಂದ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂದು ವರದಿಯಾಗಿದೆ
ಮಹಾನಟಿ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಕೀರ್ತಿ, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಫು ಮೂಡಿಸಿದ್ದು, ಇವರು ನಡೆದು ಬಂದ ಹಾದಿಯೂ ಮುಳ್ಳಿನ ಹಾಸಿಗೆಯಾಗಿತ್ತು. ಇದೀಗ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಿರ್ಮಾಪಕ ಸುರೇಶ್ ಮೆನನ್ - ನಟಿ ಮೇನಕಾ ದಂಪತಿ ಪುತ್ರಿ ಕೀರ್ತಿ ಸುರೇಶ್. ಗೀತಾಂಜಲಿ ಎನ್ನುವ ಮಲೆಯಾಳಂ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರುಕಡಿಮೆ ಅವಧಿಯಲ್ಲಿಯೇ ಮುಂಚೂಣಿಯ ನಟಿಯಾಗಿ ಬೆಳೆದ ಅವರು ವಿಜಯ್ ಜೊತೆಗೆ ಭೈರವ, ಸರ್ಕಾರ್ ಚಿತ್ರಗಳಲ್ಲಿ ನಟಿಸಿದ್ದಾರೆ.