ಹಾಲಿವುಡ್‌ಗೆ ಕಾಲಿಟ್ಟ ಬಿಂದಾಸ್ ಬ್ಯೂಟಿ ದಿಶಾ ಪಟಾನಿ: ಫೋಟೋ ವೈರಲ್!
ಕಡುಗಪ್ಪು ಉಡುಗೆಯಲ್ಲಿ ದಿಶಾ ಮಾದಕವಾಗಿ ಕಾಣುತ್ತಿದ್ದಾರೆ. ದಿಶಾ ಪಟಾನಿ ನಟನೆಯ ‘ವೆಲ್‌ಕಂ ಟು ಜಂಗಲ್’ ಸಿನಿಮಾ ಈ ವರ್ಷಾಂತ್ಯದಲ್ಲಿ ತೆರೆಗೆ ಬರಲಿದೆ.

ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಅಂತಲೇ ಹೆಸರಾದ ಬಾಲಿವುಡ್ ನಟಿ ದಿಶಾ ಪಟಾನಿ ಇದೀಗ ಹಾಲಿವುಡ್‌ನತ್ತ ಪ್ರಯಾಣ ಬೆಳೆಸಿದ್ದಾರೆ. ಖ್ಯಾತ ಹಾಲಿವುಡ್ ನಟ, ನಿರ್ದೇಶಕ ಕೆವಿನ್ ಸ್ಪೇಸಿ ನಿರ್ದೇಶನದ ಸೂಪರ್ ನ್ಯಾಚುರಲ್ ಆ್ಯಕ್ಷನ್ ಥ್ರಿಲ್ಲರ್‌ನಲ್ಲಿ ದಿಶಾ ನಾಯಕಿ ಪಾತ್ರದಲ್ಲಿ ನಟಿಸಲಿದ್ದಾರೆ.
2004ರಲ್ಲಿ ತೆರೆಕಂಡ ‘ಬಿಯಾಂಡ್ ದ ಸೀ’ ಸಿನಿಮಾ ನಂತರ ಕೆವಿನ್ ನಿರ್ದೇಶಿಸುತ್ತಿರುವ ಚಿತ್ರವಾದ ಕಾರಣ ಇದರ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಇನ್ನೊಂದೆಡೆ ಈ ಸಿನಿಮಾ ಸೆಟ್‌ನದು ಎನ್ನಲಾದ ದಿಶಾ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ.
ಇದರಲ್ಲಿ ಕಡುಗಪ್ಪು ಉಡುಗೆಯಲ್ಲಿ ದಿಶಾ ಮಾದಕವಾಗಿ ಕಾಣುತ್ತಿದ್ದಾರೆ. ದಿಶಾ ಪಟಾನಿ ನಟನೆಯ ‘ವೆಲ್‌ಕಂ ಟು ಜಂಗಲ್’ ಸಿನಿಮಾ ಈ ವರ್ಷಾಂತ್ಯದಲ್ಲಿ ತೆರೆಗೆ ಬರಲಿದೆ.
ಎಂ.ಎಸ್ ಧೋನಿ, ಕಲ್ಕಿ 2598 ಎಡಿ, ಕಂಗುವ, ಭಾಗೀ 2 ಸಿನಿಮಾಗಳಲ್ಲಿ ದಿಶಾ ನಟಿಸಿದ್ದಾರೆ. `ವೆಲ್‌ಕಮ್ ಟು ದಿ ಜಂಗಲ್’ ಚಿತ್ರ ಈ ವರ್ಷದ ಅಂತ್ಯದಲ್ಲಿ ತೆರೆ ಕಾಣಲಿದೆ. ಈ ಸಿನಿಮಾದ ರಿಲೀಸ್ ಬಗ್ಗೆ ಡೇಟ್ ಅನೌನ್ಸ್ ಮಾಡಬೇಕಿದೆ.
ಸಿನಿಮಾಗಳಲ್ಲಿ ಅಲ್ಲದೇ ತನ್ನ ಹಾಟ್ ಬ್ಯೂಟಿ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಬೆಳೆಸಿಕೊಳ್ಳುವಲ್ಲಿ ದಿಶಾ ಮುಂಚೂಣಿಯಲ್ಲಿದ್ದಾರೆ. ಅದಕ್ಕೆ ಆಗಾಗ್ಗೆ ಸೋಶಿಯಲ್ ಮೀಡಿಯಾಗೆ ಬೆಂಕಿ ಹೆಚ್ಚುವಂತಹ ಫೋಟೊಗಳನ್ನ ಹಂಚಿಕೊಳ್ತಾರೆ. ಸದ್ಯ ಹಾಲಿವುಡ್‌ನಲ್ಲಿ ಗೆದ್ದು ಬೀಗ್ತಾರಾ? ಎಂಬುದನ್ನು ಕಾದುನೋಡಬೇಕಿದೆ.