Suman death news: ಸುಮನ್ ನಿಧನ ಸುದ್ದಿ ಸುಳ್ಳು, ಯಾರೀ ಕೆಲಸ ಮಾಡಿದ್ದು?
ಶ್ರದ್ಧಾಂಜಲಿ ಫೋಟೋ ಮತ್ತು ವಿಡಿಯೋ ವೈರಲ್ ಮಾಡುತ್ತಿರುವವರಿಗೆ ಪಾಠ ಕಲಿಸಿದ ಹಿರಿಯ ನಟ ಸುಮನ್
ಕನ್ನಡ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿರುವ ನಟ ಸುಮನ್ ನಿಧನ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಯೂಟ್ಯೂಬ್ ಚಾನೆಲ್‌ವೊಂದು ನಟ ಸುಮನ್ ನಿಧನ ಎಂದು ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋ ಸ್ವತಃ ಸುಮನ್ ಕಣ್ಣಿಗೆ ಬಿದ್ದು ಗರಂ ಆಗಿದ್ದಾರೆ.
ನಾನು ಆರೋಗ್ಯವಾಗಿದ್ದೀನಿ ಏನೂ ಸಮಸ್ಯೆ ಆಗಿಲ್ಲ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ಬಗ್ಗೆ ಕ್ರಮ ಕೈಗೊಳ್ಳುವೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
1999ರಲ್ಲಿ ರಾಜಕೀಯಕ್ಕೆ ಕಾಲಿಟ್ಟ ಸುಮನ್ ಸಿರಿಶಾರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರಿಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ.
'ನಾನು ಬದುಕಿದ್ದೇನೆ ಹಾಗೂ ಆರೋಗ್ಯವಾಗಿದ್ದೇನೆ' ಎಂದಿದ್ದಾರೆ ಸುಮನ್. ವೀಕ್ಷಣೆ ಪಡೆಯಲು ಈ ರೀತಿ ಒಬ್ಬರ ಜೀವನ ಹಾಳು ಮಾಡುವುದು ತುಂಬಾನೇ ತಪ್ಪು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
63 ವರ್ಷದ ಸುಮನ್ ತಮ್ಮ ವೃತ್ತಿ ಜೀವನದಲ್ಲಿ ಸುಮಾರು 150 ಸಿನಿಮಾಗಳನ್ನು ಮಾಡಿದ್ದಾರೆ. ಪ್ರಮುಖ ಪಾತ್ರ, ವಿಲನ್ ಪಾತ್ರ, ಪೋಷಕ ಪಾತ್ರ...ಡಿಫರೆಂಟ್ ಡಿಫರೆಂಟ್ ಆಗಿ ಸಿನಿ ರಸಿಕರನ್ನು ಮನೋರಂಜಿಸಿದ್ದಾರೆ.