ಅಘೋರಿ ಸಾಧುವಾಗಿ ಕಾಣಿಸಿಕೊಳ್ಳಲಿದ್ದಾರೆ ನಟ ಅಲ್ಲು ಅರ್ಜುನ್!
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಾಲಕೃಷ್ಣ ಜೊತೆ ಹೇಳಿದ್ದ ಮಾತು ನಿಜ ಆಗ್ತಿದೆ ಅನ್ಸುತ್ತೆ. ಅಖಂಡ ಸಿನಿಮಾದಲ್ಲಿ ಬಾಲಯ್ಯ ಮಾಡಿದ ಪಾತ್ರ ನನಗೂ ಮಾಡಬೇಕು ಅಂತ ಬನ್ನಿ ಹೇಳಿದ್ದರು. ಈಗ ಅಘೋರನಾಗಿ ಕಾಣಿಸಿಕೊಳ್ಳಲಿದ್ದಾರಂತೆ ಅಲ್ಲು ಅರ್ಜುನ್. ಡೈರೆಕ್ಟರ್ ಯಾರು ಗೊತ್ತಾ?

ಅಲ್ಲು ಅರ್ಜುನ್ ಅಘೋರಿ ಪಾತ್ರ ಮಾಡುತ್ತಾರೆ ಎಂದು ಶಾಕ್ ಆಗ್ಬೇಡಿ. ಯಾವ ಪಾತ್ರ ಬೇಕಾದರೂ ಸಲೀಸಾಗಿ ಮಾಡೋ ಹೀರೋ ಅಂತ ಅಲ್ಲು ಅರ್ಜುನ್ ಈಗಾಗಲೇ ಪ್ರೂವ್ ಮಾಡಿಕೊಂಡಿದ್ದಾರೆ. ಪುಷ್ಪ ಸಿನಿಮಾಗಳಿಂದ ಅಲ್ಲು ಅರ್ಜುನ್ ಎಂತಹ ಪಾತ್ರವನ್ನೂ ಮಾಡುತ್ತಾರೆ ಎಂದು ಇಡೀ ದೇಶಕ್ಕೆ ಗೊತ್ತಾಗಿದೆ. ಬಾಲಿವುಡ್‌ನಲ್ಲೂ ಅಲ್ಲು ಅರ್ಜುನ್ ಕ್ರೇಜ್ ಜೋರಾಗಿದೆ.
ಅಲ್ಲು ಅರ್ಜುನ್
ಅಲ್ಲು ಅರ್ಜುನ್ ಪಾತ್ರಕ್ಕಾಗಿ ಏನು ಬೇಕಾದ್ರೂ ಮಾಡ್ತಾರೆ. ಎಷ್ಟೇ ದೊಡ್ಡ ರಿಸ್ಕ್ ಆದ್ರೂ ಯೋಚನೆ ಮಾಡದೆ ಮಾಡ್ತಾರೆ. ಈಗಲೂ ಅದನ್ನೇ ಮಾಡ್ತಿದ್ದಾರಂತೆ. ಪುಷ್ಪರಾಜ್ ಆಗಿ ಎಷ್ಟು ಕಷ್ಟಪಟ್ಟರು ಅಂತ ಎಲ್ಲರಿಗೂ ಗೊತ್ತು. ಈಗ ಅಘೋರ ಪಾತ್ರದಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಳ್ಳಲಿದ್ದಾರಂತೆ.
ಡೈರೆಕ್ಟರ್ ಯಾರು ಗೊತ್ತಾ..? ಅದೇ ತ್ರಿವಿಕ್ರಮ್ ಶ್ರೀನಿವಾಸ್. ಮಾತುಗಾರ ತ್ರಿವಿಕ್ರಮ್ ಜೊತೆ ಮುಂದಿನ ಸಿನಿಮಾದಲ್ಲಿ ಅಘೋರ ಪಾತ್ರ ಮಾಡ್ತಿದ್ದಾರಂತೆ ಅಲ್ಲು ಅರ್ಜುನ್. ಲುಕ್ ಟೆಸ್ಟ್ ಕೂಡ ಆಗಿದೆ ಅಂತ ಗೊತ್ತಾಗಿದೆ.
ಅಲ್ಲು ಅರ್ಜುನ್ ಅಘೋರ ಪಾತ್ರದ ಫ್ಯಾನ್ ಮೇಡ್ ಪೋಸ್ಟರ್‌ಗಳು ನೆಟ್‌ನಲ್ಲಿ ವೈರಲ್ ಆಗ್ತಿವೆ. ಅಘೋರನನ್ನ ಚೆನ್ನಾಗಿ ತೋರಿಸ್ತಾ ಪೋಸ್ಟರ್ ಹಾಕ್ತಿದ್ದಾರೆ. ಇಲ್ಲಿ ಒಂದು ಟ್ವಿಸ್ಟ್ ಇದೆ. ಈ ಪಾತ್ರದ ಬಗ್ಗೆ ಆಸಕ್ತಿ ಇದೆ ಅಂತ ಅಲ್ಲು ರ್ಜುನ್ ಅವರು ಹಿರಿಯ ನಟ ಬಾಲಕೃಷ್ಣ ಅವರ ಬಳಿ ಹೇಳಿದ್ದರು.
ಅನ್‌ಸ್ಟಾಪಬಲ್ ಸೀಸನ್ 3ರಲ್ಲಿ ಅಲ್ಲು ಅರ್ಜುನ್, ನಾನು ಅಖಂಡ 3 ಮಾಡ್ತೀನಿ, ನೀವು ಪುಷ್ಪ 3 ಮಾಡಿ ಅಂತ ಬಾಲಯ್ಯಗೆ ಆಫರ್ ಕೊಟ್ಟಿದ್ದರು. ಅಘೋರ ಪಾತ್ರದ ಬಗ್ಗೆ ಆಸಕ್ತಿ ಇರುವುದರಿಂದ, ಅದಕ್ಕೆ ತಯಾರಿ ನಡೆಸುತ್ತೇನೆ ಎಂದು ಹೇಳಿದ್ದರು. ಇದೀಗ ಅಲ್ಲು ಅರ್ಜುನ್ ಲುಕ್ ಟೆಸ್ಟ್ ಕೂಡ ಮುಗಿದಿದೆ. ಪ್ರಿ-ಪ್ರೊಡಕ್ಷನ್ ಕೆಲಸ ಜೋರಾಗಿದೆ.
ಈ ವರ್ಷದ ದ್ವಿತೀಯಾರ್ಧದಲ್ಲಿ ಶೂಟಿಂಗ್ ಶುರು ಮಾಡಿ, ಮುಂದಿನ ವರ್ಷದ ಬೇಸಿಗೆ ವೇಳೆಗೆ ರಿಲೀಸ್ ಮಾಡೋ ಪ್ಲಾನ್ ಇದೆ ಅಂತ ಹೇಳ್ತಿದ್ದಾರೆ. ಅನಿರುದ್ ಮ್ಯೂಸಿಕ್ ಡೈರೆಕ್ಟರ್ ಅಂತ ತ್ರಿವಿಕ್ರಮ್ ಅಂದುಕೊಂಡಿದ್ದಾರಂತೆ. ಸುಮಾರು 500 ಕೋಟಿ ಬಜೆಟ್‌ನಲ್ಲಿ ಸಿನಿಮಾ ಮಾಡ್ತಿದ್ದಾರಂತೆ.
ಇಂಥ ಪ್ರಯೋಗ ಮಾಡೋದ್ರಲ್ಲಿ ಅಲ್ಲು ಅರ್ಜುನ್ ಯಾವಾಗಲೂ ಮುಂದೆ ಇರುತ್ತಾರೆ. ಪುಷ್ಪ 2 ಸಿನಿಮಾದಲ್ಲಿ ಗಂಗಮ್ಮ ಜಾತ್ರೆಯಲ್ಲಿ ಬನ್ನಿ ಸೀರೆ ಉಟ್ಕೊಂಡು ಅಮ್ಮನವರ ಗೆಟಪ್‌ನಲ್ಲಿ ಎಷ್ಟು ಸದ್ದು ಮಾಡಿದ್ರು ಅಂತ ಎಲ್ಲರಿಗೂ ಗೊತ್ತು. ಅಘೋರ ಪಾತ್ರದಲ್ಲಿ ಇನ್ನೂ ಏನು ಮಾಡ್ತಾರೋ ಅಂತ ಫ್ಯಾನ್ಸ್ ಕಾಯ್ತಿದ್ದಾರೆ. ಈ ವಿಷಯದಲ್ಲಿ ನಿಜ ಎಷ್ಟು ಅಂತ ಗೊತ್ತಿಲ್ಲ, ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.