ಪದ್ಮ ಪ್ರಶಸ್ತಿ ಪಡೆದು ಸಂಭ್ರಮಿಸಿದ ನಟ ಅಜಿತ್ ಕುಮಾರ್ ದಿಢೀರ್ ಆಸ್ಪತ್ರೆಗೆ ದಾಖಲು
ನಟ ಅಜಿತ್ ಕುಮಾರ್ ದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಪದ್ಮ ಭೂಷಣ ಪ್ರಶಸ್ತಿ ಸ್ವೀಕರಿಸಿ ಚೆನ್ನೈಗೆ ಮರಳಿದ ವೇಳೆ ಗಾಯಗೊಂಡಿದ್ದಾರೆ. ಪರಿಣಾಮ ನಟ ಅಜಿತ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಸ್ಪತ್ರೆಗೆ ದಾಖಲಾದ ಅಜಿತ್ ಕುಮಾರ್ : ತಮಿಳು ಸಿನಿಮಾದಲ್ಲಿ ಮುಂಚೂಣಿಯ ಮಾಸ್ ನಟ ಅಜಿತ್ ಕುಮಾರ್. ಇತ್ತೀಚೆಗೆ ಬಿಡುಗಡೆಯಾಗ 'ಗುಡ್ ಬ್ಯಾಡ್ ಅಗ್ಲಿ' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 250 ಕೋಟಿ ರೂ.ಗಿಂತ ಹೆಚ್ಚು ಗಳಿಕೆ ಕಂಡಿತು. ಅಜಿತ್ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರ 'ಗುಡ್ ಬ್ಯಾಡ್ ಅಗ್ಲಿ'. ಚಿತ್ರಗಳ ಯಶಸ್ಸು, ಮತ್ತೊಂದು ಭಾರತದ ಉನ್ನತ ಪ್ರಶಸ್ತಿ ಪಡೆದಿರುವ ಅಜಿತ್ ದಿಢೀರ್ ಆಸ್ಪತ್ರೆ ದಾಖಲಾಗಿದ್ದಾರೆ.
ಅಜಿತ್‌ಗೆ ಪದ್ಮ ಭೂಷಣ ಪ್ರಶಸ್ತಿ
ಪದ್ಮ ಭೂಷಣ ಪ್ರಶಸ್ತಿ ಪಡೆದ ಅಜಿತ್
ಅಜಿತ್ ಸಿನಿಮಾ ಸಾಧನೆಗಾಗಿ ಕಳೆದ ಜನವರಿಯಲ್ಲಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಘೋಷಿಸಲಾಯಿತು. ಈ ಹಿನ್ನೆಲೆಯಲ್ಲಿ, ಏಪ್ರಿಲ್ 28 ರಂದು ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಅಜಿತ್‌ಗೆ ಪದ್ಮ ಭೂಷಣ ಪ್ರಶಸ್ತಿ ನೀಡಲಾಯಿತು. ಇದಕ್ಕಾಗಿ ಕುಟುಂಬದೊಂದಿಗೆ ದೆಹಲಿಗೆ ತೆರಳಿದ್ದ ನಟ ಅಜಿತ್ ಕುಮಾರ್ ನಿನ್ನೆ ಚೆನ್ನೈಗೆ ಮರಳಿದರು. ವಿಮಾನ ನಿಲ್ದಾಣದಲ್ಲಿ ಅಜಿತ್‌ಗೆ ಉತ್ಸಾಹಭರಿತ ಸ್ವಾಗತ ದೊರಕಿತು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಸಿದ್ದ ಕಾರಣ ಅಜಿತ್ ಕುಮಾರ್ ಆಸ್ಪತ್ರೆ ದಾಖಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಜಿತ್, ಶಾಲಿನಿ
ಅಜಿತ್ ಆಸ್ಪತ್ರೆಗೆ ದಾಖಲು
ನಟ ಅಜಿತ್ ಕುಮಾರ್ ಪತ್ನಿ ಜೊತೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಪದ್ಮ ಭೂಷಣ ಪ್ರಶಸ್ತಿ ವಿಜೇತ ಅಜಿತ್ ನೋಡಲು ಅಭಿನಂದನೆ ಸಲ್ಲಿಸಲು ಕಿಕ್ಕಿರಿದು ಅಭಿಮಾನಿಗಳು ಸೇರಿದ್ದರು. ನಟ ಅಜಿತ್ ಹೊರಬರುತ್ತಿದ್ದಂತೆ ಅಬಿಮಾನಿಗಳು ಮುತ್ತಿಗೆ ಹಾಕಿದ್ದಾರೆ. ಇದರಿಂದ ಅಜಿತ್ ಕಾಲಿಗೆ ಕಾಯವಾಗಿದೆ. ಕಾರ್ ರೇಸ್ ವೇಳೆ ಗಾಯಗೊಂಡಿದ್ದ ಕಾಲಿಗೆ ಮತ್ತೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅಜಿತ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿದೆ.