ಎದೆ ನಡುಗಿಸುವಂತಹ ಭಯಾನಕ ಹಾರರ್ ಥ್ರಿಲ್ಲರ್ ಸಿನಿಮಾಗಳು
ನೀವು ಒಟಿಟಿಯಲ್ಲಿ ನೋಡಲೇಬೇಕಾದ ಭಯಾನಕ ಸಿನಿಮಾಗಳ ಕುರಿತು ನಾವಿಲ್ಲಿ ಹೇಳುತ್ತಿದ್ದೇವೆ. ಈ ಸಿನಿಮಾಗಳು ಎದೆಯಲ್ಲಿ ನಡುಕವನ್ನು ಹುಟ್ಟಿಸುವುದಲ್ಲದೇ, ಸೀಟಿನ ತುದಿಯಲ್ಲಿ ಕುಳಿತು ಸಿನಿಮಾ ನೋಡುವಂತೆ ಮಾಡುತ್ತೆ. ಅಂತಹ ಸಿನಿಮಾಗಳು ಯಾವುವು ಅನ್ನೋದನ್ನು ನೋಡೋಣ.

404: ಎರರ್ ನಾಟ್ ಫೌಂಡ್ (YouTube)
404: ಎರರ್ ನಾಟ್ ಫೌಂಡ್ ಸೈಕಾಲಜಿಕಲ್ ಥ್ರಿಲ್ಲರ್ ಆಗಿದ್ದು, ಪ್ರವಾಲ್ ರಾಮನ್ ನಿರ್ದೇಶಿಸಿದ್ದಾರೆ. ಇಮಾದ್ ಶಾ, ನಿಶಿಕಾಂತ್ ಕಾಮತ್ ಮತ್ತು ಟಿಸ್ಕಾ ಚೋಪ್ರಾ ನಟಿಸಿರುವ ಈ ಚಿತ್ರದಲ್ಲಿ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ಕೋಣೆಗೆ ಹೋಗುತ್ತಾನೆ, ಅಲ್ಲಿ ಹಿಂದೆ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದ, ಆ ವಿದ್ಯಾರ್ಥಿಯ ಆತ್ಮದಿಂದ ಅಲ್ಲಿ ಏನೆಲ್ಲಾ ಘಟನೆಗಳು ನಡೆಯುತ್ತೆ ಅನ್ನೋದೆ ಕಥೆ.
ಭೂತಕಾಲಂ(Sony LIV)
ಭೂತಕಾಲಂ ರಾಹುಲ್ ಸದಾಶಿವನ್ ನಿರ್ದೇಶನದ ಮಲಯಾಳಂ ಮನೋವೈಜ್ಞಾನಿಕ ಭಯಾನಕ ಚಿತ್ರವಾಗಿದ್ದು, ಶೇನ್ ನಿಗಮ್ ಮತ್ತು ರೇವತಿ ನಟಿಸಿದ್ದಾರೆ. ಅನ್ವರ್ ರಶೀದ್ ಮತ್ತು ಶೇನ್ ನಿಗಮ್ ನಿರ್ಮಿಸಿದ ಇದು ಜನವರಿ 21, 2022 ರಂದು ಸೋನಿಲೈವ್ನಲ್ಲಿ ಪ್ರಥಮ ಪ್ರದರ್ಶನಗೊಂಡು ವಿಮರ್ಶಾತ್ಮಕ ಮೆಚ್ಚುಗೆಗೆ ಪಾತ್ರವಾಯಿತು. ರೇವತಿ ತನ್ನ ಅಭಿನಯಕ್ಕಾಗಿ ಅತ್ಯುತ್ತಮ ನಟಿಗಾಗಿ ತನ್ನ ಮೊದಲ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು.
ಯು ಟರ್ನ್ (Netflix)
ನ್ಯೂಸ್ ರಿಪೋರ್ಟರ್ ಒಬ್ಬಳು ವಿಲಕ್ಷಣ ಕೊಲೆ ಪ್ರಕರಣದಲ್ಲಿ ಪ್ರಮುಖ ಶಂಕಿತಳಾಗುತ್ತಾಳೆ ಮತ್ತು ಯುವ ಪೊಲೀಸ್ ಒಬ್ಬರ ನೆರವಿನಿಂದ ಹೇಗೆ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿ ಕೊಲೆ ಹೇಗೆ ನಡೆಯುತ್ತೆ ಅನ್ನೋದನ್ನು ತಿಳಿದುಕೊಳ್ಳುತ್ತಾರೆ ಅನ್ನೋದು ಕಥೆ.
ಲಪಚಪ್ಪಿ (Zee 5)
ವಿಶಾಲ್ ಫ್ಯೂರಿಯಾ ಅವರ ಮರಾಠಿ ಭಯಾನಕ ಚಿತ್ರ ಲಪಚಪ್ಪಿ , ಗರ್ಭಿಣಿ ಮಹಿಳೆಯೊಬ್ಬಳು ಕಾಣದ ಶಕ್ತಿಯಿಂದ ಪಲಾಯನ ಮಾಡುವ ನಂತರ ಅಂತಿಮವಾಗಿ ಅವಳ ಕಥೆ ಏನಾಗುತ್ತೆ ಅನ್ನೋದೆ ಕಥೆ.
ತುಂಬದ್ (Prime Video)
ತುಂಬದ್ ಹಿಂದಿ ಜಾನಪದ ಹಾರರ್ ಚಿತ್ರವಾಗಿದ್ದು, ಮಹಾರಾಷ್ಟ್ರದ ತುಂಬದ್ ಗ್ರಾಮದಲ್ಲಿ ಅಡಗಿರುವ ನಿಧಿಯನ್ನು ಹುಡುಕುವ ವಿನಾಯಕ್ ರಾವ್ ಅವರ ಅನ್ವೇಷಣೆಯ ಕಥೆ ಇದಾಗಿದೆ.
ಕೊಥನೋಡಿ (Sony Live)
ಕೊಥನೋಡಿಯು ಲಕ್ಷ್ಮಿನಾಥ್ ಬೆಜಬರೋವಾ ಅವರ ಅಸ್ಸಾಮಿ ಜಾನಪದ ಕಥೆಗಳ ಸಂಗ್ರಹವಾದ ಬುರ್ಹಿ ಆಯಿರ್ ಸಾಧು ಕಥೆಯಿಂದ ಸ್ಫೂರ್ತಿ ಪಡೆದಿದೆ, ತೇಜಿಮೋಲಾ, ಚಂಪಾವತಿ, ಓ ಕುವೊರಿ ಮತ್ತು ತವೊರ್ ಕ್ಸಾಧು ಎಂಬ ನಾಲ್ಕು ಕಥೆಗಳನ್ನು ಸೇರಿ ಮಾಡಿದಂತಹ ಕಥೆ ಇದಾಗಿದೆ.
ವಾಸ್ತು ಶಾಸ್ತ್ರ (MX Player/ Youtube)
ವಾಸ್ತು ಶಾಸ್ತ್ರವು ರಾಮ್ ಗೋಪಾಲ್ ವರ್ಮಾ ನಿರ್ಮಿಸಿರುವ ಹಿಂದಿ ಹಾರರ್ ಚಿತ್ರವಾಗಿದ್ದು, ಇದರಲ್ಲಿ ಪೀಯಾ ರಾಯ್ ಚೌಧರಿ, ಸುಶ್ಮಿತಾ ಸೇನ್ ಮತ್ತು ಜೆ.ಡಿ.ಚಕ್ರವರ್ತಿ ನಟಿಸಿದ್ದಾರೆ.
ಕಾಲ್ (Netflix)
ಈ ಚಲನಚಿತ್ರವು ತನಿಖಾಧಿಕಾರಿಗಳು ಮತ್ತು ಬೇಟೆಗಾರರು ಎರಡು ಗುಂಪುಗಳ ಸುತ್ತ ಸುತ್ತುತ್ತದೆ, ಕಾಡಿನಲ್ಲಿ ಅವರನ್ನು ಯಾವುದೋ ಒಂದು ಕೆಟ್ಟ ಶಕ್ತಿ ಹಿಂಭಾಲಿಸುತ್ತಿದೆ ಅನ್ನೋದನ್ನು ಇವರು ತಿಳಿದುಕೊಳ್ಳುತ್ತಾರೆ. ಇದು ರೋಚಕವಾದ ಥ್ರಿಲ್ಲರ್ ಕಥೆಯಾಗಿದೆ.