MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Jobs
  • Central Government Jobs
  • ಭಾರತೀಯ ರೈಲ್ವೇಯಲ್ಲಿ ಉದ್ಯೋಗ ಅವಕಾಶ, ಡಿ ಗ್ರೂಪ್ ಹುದ್ದೆಗೆ ಅರ್ಜಿ ಅಹ್ವಾನಿಸಿದ RRB

ಭಾರತೀಯ ರೈಲ್ವೇಯಲ್ಲಿ ಉದ್ಯೋಗ ಅವಕಾಶ, ಡಿ ಗ್ರೂಪ್ ಹುದ್ದೆಗೆ ಅರ್ಜಿ ಅಹ್ವಾನಿಸಿದ RRB

ಭಾರತೀಯ ರೈಲ್ವೇಯಲ್ಲಿ ಉದ್ಯೋಗ ಅವಕಾಶ, ಜನವರಿ 31 ರಿಂದ ಅರ್ಜಿ ಅಹ್ವಾನ ಆರಂಭಗೊಂಡಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 2, 2026. ಅರ್ಜಿ ಶುಲ್ಕ ಎಷ್ಟು, ಸಲ್ಲಿಕೆ ಹೇಗೆ? ಇಲ್ಲಿದೆ.

2 Min read
Author : Chethan Kumar
Published : Jan 31 2026, 06:43 PM IST
Share this Photo Gallery
  • FB
  • TW
  • Linkdin
  • Whatsapp
15
ಭಾರತೀಯ ರೈಲ್ವೇಯಲ್ಲಿ ಉದ್ಯೋಗ
Image Credit : iSTOCK

ಭಾರತೀಯ ರೈಲ್ವೇಯಲ್ಲಿ ಉದ್ಯೋಗ

ಭಾರತೀಯ ರೈಲ್ವೇ ದೇಶದ ಅತೀ ದೊಡ್ಡ ಸಂಸ್ಥೆ. ಅತೀ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿದ ವಿಶ್ವದ ಮುಂಚೂಣಿ ಸಂಸ್ಥೆಗಳಲ್ಲಿ ಭಾರತಯ ರೈಲ್ವೇ ಕೂಡ ಒಂದು. ಇದೀಗ ಭಾರತೀಯ ರೈಲ್ವೇ ಖಾಲಿ ಹುದ್ದೆಗ ಭರ್ತಿ ಮಾಡಲು ಪ್ರಕ್ರಿಯೆ ಆರಂಭಿಸಿದೆ. ಸದ್ಯ ರೈಲ್ವೇ ರಿಕ್ರೂಟ್‌ಮೆಂಟ್ ಬೋರ್ಡ್ ಡಿ ಗ್ರೂಪ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

25
21,997 ಹುದ್ದೆ ಭರ್ತಿಗೆ ಅರ್ಜಿ ಅಹ್ವಾನ
Image Credit : Getty

21,997 ಹುದ್ದೆ ಭರ್ತಿಗೆ ಅರ್ಜಿ ಅಹ್ವಾನ

ಡಿ ಗ್ರೂಪ್‌ನಲ್ಲಿರುವ ಬರೋಬ್ಬರಿ 21,997 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನಿಸಲಾಗಿದೆ. ಆಸಕ್ತರು ಹಾಗೂ ಅರ್ಹರು ಇಂದಿನಿಂದ (ಜ.31,2026) ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 2, 2026. ರೈಲ್ವೇ ಇಲಾಖೆ ಇತರ ಎಲ್ಲಾ ಉದ್ಯೋಗಕ್ಕೆ ಬಂದಿರುವಂತೆ ಈ ಬಾರಿಯೂ 10 ಲಕ್ಷ ಅರ್ಜಿಗಳು ಸಲ್ಲಿಕೆ ನಿರೀಕ್ಷೆಯಲ್ಲಿದೆ.

Related Articles

Related image1
Indian Railways: ರೈಲಿನಲ್ಲಿ ಬಿಳಿ ಬೆಡ್‌ಶೀಟ್‌ಗಳನ್ನೇ ಯಾಕೆ ಕೊಡ್ತಾರೆ, ಅದರ ಹಿಂದಿನ ರಹಸ್ಯ ಇದೇ..
Related image2
Indian Railways: ಆಹಾರ ಪ್ರಿಯ ಪ್ರಯಾಣಿಕರಿಗೆ ಭಾರತೀಯ ರೈಲ್ವೆಯಿಂದ ಸಿಹಿಯಾದ ಸುದ್ದಿ
35
ಅರ್ಜಿ ಸಲ್ಲಿಕೆ ಹೇಗೆ? ಶುಲ್ಕ ಎಷ್ಟು?
Image Credit : iSTOCK

ಅರ್ಜಿ ಸಲ್ಲಿಕೆ ಹೇಗೆ? ಶುಲ್ಕ ಎಷ್ಟು?

ರೈಲ್ವೇ ಇಲಾಖೆಯ ಡಿ ಗ್ರೂಪ್ ಹುದ್ದಿಗೆ ಅರ್ಜಿ ಸಲ್ಲಿಸಲು ಆಸಕ್ತರು ರೈಲ್ವೇ ಇಲಾಖೆ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು. rrbapply.gov.in. ವೆಬ್‌ಸೈಟ್ ಮೂಲಕ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಕೆ ಮಾಡಬೇಕು. ಜೊತೆಗೆ ಶುಲ್ಕ ಪಾವತಿಸಬೇಕು. ಒಬಿಸಿ ಕೆಟಗರಿಗೆ ರೂಪಾಯಿ 500 ಹಾಗೂ EWS ಕೆಟಗರಿ ಅಡಿಯಲ್ಲಿ ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು 400 ರೂಪಾಯಿ ಪಾವತಿಸಬೇಕು. ಈ ಮೊತ್ತವನ್ನು ಸಿಬಿಟಿ ಪರೀಕ್ಷೆ ವೇಳೆ ರಿಫಂಡ್ ಮಾಡಲಾಗುತ್ತದೆ. ಇನ್ನು ಎಸ್‌ಸಿ, ಎಸ್‌ಟಿ, ಇಬಿಸಿ ಕೆಟಗರಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ರೂಪಾಯಿ 250 ರೂಪಾಯಿ ಶುಲ್ಕ ನಿಗದಿ ಮಾಡಲಾಗಿದೆ.

45
ಆಯ್ಕೆ ಪ್ರಕ್ರಿಯೆ
Image Credit : iSTOCK

ಆಯ್ಕೆ ಪ್ರಕ್ರಿಯೆ

ಡಿ ಗ್ರೂಪ್ ಹುದ್ದೆಗಳ ಆಯ್ಕೆ ಪ್ರಕ್ರಿಯೆ ಆರಂಭದಲ್ಲಿ ರೈಲ್ವೇ ಇಲಾಖೆ ಸಲ್ಲಿಕೆಯಾದ ಅರ್ಜಿಗಳಲ್ಲಿ ಅರ್ಹ ಅರ್ಜಿಗಳನ್ನು ಶಾರ್ಟ್ ಲಿಸ್ಟ್ ಮಾಡಿ ಸಿಬಿಟಿ ಪರೀಕ್ಷೆಗೆ ಆಹ್ವಾನ ನೀಡಲಿದೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಫಿಸಿಕಲ್ ಟೆಸ್ಟ್ (ದೈಹಿಕ ಪರೀಕ್ಷೆ) ನಡೆಯಲಿದೆ. ಬಳಿಕ ಡಾಕ್ಯುಮೆಂಟ್ ಪರೀಶೀಲನೆ, ಮೆಡಿಕಲ್ ಪರೀಕ್ಷೆಗಳು ನಡೆಯಲಿದೆ.

55
ಸಿಬಿಟಿ ಪರೀಕ್ಷೆ
Image Credit : our own

ಸಿಬಿಟಿ ಪರೀಕ್ಷೆ

ಸಿಬಿಟಿ ಪರೀಕ್ಷೆಯಲ್ಲಿ ಬರೆಯಲು ಸಮಯ 90 ನಿಮಿಷ. 100 ಪ್ರಶ್ನೆಗಳ ಪರೀಕ್ಷೆ ಇದಾಗಿದೆ. 25 ಪ್ರಶ್ನೆ ಜನರಲ್ ಸೈನ್ಸ್, 25 ಪ್ರಶ್ನೆ ಗಣಿತ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳು ಇರಲಿದೆ. ತಪ್ಪು ಉತ್ತರಕ್ಕೆ ಅಂಕ ಮೈನಸ್ ಆಗಲಿದೆ. ಕನಿಷ್ಟ ಪಾಸ್ ಅಂಕ ಶೇಕಡಾ 40. ಇನ್ನು EWS,ಒಬಿಸಿ, ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳ ಪಾಸ್ ಅಂಕ ಶೇಕಡಾ 30.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಭಾರತೀಯ ರೈಲ್ವೆ
ರೈಲು
ಉದ್ಯೋಗಗಳು

Latest Videos
Recommended Stories
Recommended image1
10ನೇ ತರಗತಿ ಪಾಸ್ ಆದವರಿಗೆ ಸೆಂಟ್ರಲ್ ಗೌರ್ನಮೆಂಟ್ ಜಾಬ್‌ , ಪರೀಕ್ಷೆ ಇಲ್ದೆ ನೇಮಕಾತಿ
Recommended image2
ಭಾರತೀಯ ರೈಲ್ವೆ ಇಲಾಖೆಯ ಭರ್ಜರಿ ಉದ್ಯೋಗ, ಬರೋಬ್ಬರಿ 22,000 ಸಹಾಯಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ
Recommended image3
ವೃತ್ತಿಜೀವನಕ್ಕೆ ಹೊಸ ತಿರುವು, ಪ್ರಸಾರ ಭಾರತಿಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿ, 50000 ರೂ ವರೆಗೆ ವೇತನ!
Related Stories
Recommended image1
Indian Railways: ರೈಲಿನಲ್ಲಿ ಬಿಳಿ ಬೆಡ್‌ಶೀಟ್‌ಗಳನ್ನೇ ಯಾಕೆ ಕೊಡ್ತಾರೆ, ಅದರ ಹಿಂದಿನ ರಹಸ್ಯ ಇದೇ..
Recommended image2
Indian Railways: ಆಹಾರ ಪ್ರಿಯ ಪ್ರಯಾಣಿಕರಿಗೆ ಭಾರತೀಯ ರೈಲ್ವೆಯಿಂದ ಸಿಹಿಯಾದ ಸುದ್ದಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved