ವ್ಹೀಲ್‌ಚೇರ್ ಬಳಸುವರಿಗಾಗಿ ಕೈಗೆಟುಕುವ ದರದಲ್ಲಿ ZEV ನ್ಯಾನೋ ಎಲೆಕ್ಟ್ರಿಕ್ ಕಾರು!
ವಿಶೇಷ ಚೇತನರಿಗಾಗಿ ನ್ಯಾನೋ ಎಲೆಕ್ಟ್ರಿಕ್ ಕಾರನ್ನು ವಿನ್ಯಾಸಗೊಳಿಸಲಾಗಿದೆ. ಈ ಕಾರು ವ್ಹೀಲ್‌ಚೇರ್ ಬಳಸುವರಿಗೆ ಸುರಕ್ಷಿತ ಹಾಗೂ ಆರಾಮದಾಯಕ ಪ್ರಯಾಣಕ್ಕಾಗಿ ಡಿಸೈನ್ ಮಾಡಲಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 96 ಕಿ.ಮೀ ಮೈಲೇಜ್ ನೀಡಲಿದೆ. ಇದರ ಬೆಲೆ ಹಾಗೂ ಫೀಚರ್ಸ್ ಮಾಹಿತಿ ಇಲ್ಲಿದೆ
ಎಲೆಕ್ಟ್ರಿಕ್ ಕಾರುಗಳಲ್ಲಿ ನ್ಯಾನೋ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಪ್ರಮುಖವಾಗಿ ಕಡಿಮೆ ಬೆಲೆ, ನಗರದಲ್ಲಿ ಸುಲಭ ಪ್ರಯಾಣ, ಸುಲಭ ಚಾರ್ಜಿಂಗ್ ಸೇರಿದಂತೆ ಹಲವು ಅನುಕೂಲಗಳು ಇದರಲ್ಲಿದೆ. ಇದೀಗ ವಿಶೇಷಚೇತನಿರಿಗೆ ಬಂದಿಗೆ ನ್ಯಾನೋ ಕಾರು.
ವಿಶೇಷಚೇತನರ ಪ್ರಯಾಣ ಅನುಕೂಲಕ್ಕಾಗಿ ಬಂದಿರುವ ನ್ಯಾನೋ ಎಲೆಕ್ಟ್ರಿಕ್ ಕಾರು ಭಾರಿ ಬೇಡಿಕೆ ಪಡೆಯುತ್ತಿದೆ. ಕಾರಣ ವ್ಹೀಲ್‌ಚೇರ್ ಬಳಸುವ ವಿಶೇಷಚೇತನರಿಗೆ ಈ ಕಾರು ಅತ್ಯಂತ ಉಪಯುಕ್ತವಾಗಿದೆ.
ಝೆವ್ ಆಟೋಮೊಟೀವ್ ಈ ಕಾರನ್ನು ಅಭಿವೃದ್ಧಪಡಿಸಿದೆ. ವ್ಹೀಲ್‌ಚೇರ್ ಬಳಸುವ ವಿಶೇಷಚೇತನರು, ಕಾರಿನ ಕಿ ಮೂಲ ಬೂಟ್ ಪ್ರೆಸ್ ಮಾಡಿದರೆ ಸಾಕು,ಹಿಂಭಾಗದ ಡೋರ್ ತೆರೆದುಕೊಳ್ಳುತ್ತದೆ.
ಹಿಂಭಾಗದ ಡೋರ್ ಜೊತೆಗೆ ಕೆಳಬಾಗದಲ್ಲಿ ಒಂದು ಬ್ರಿಡ್ಜ್ ಮ್ಯಾಟ್ ತೆರೆದುಕೊಳ್ಳಲಿದೆ. ಇದರ ಸಹಾಯದಿಂದ ವ್ಹೀಲ್‌ಚೇರ್ ಮೂಲಕ ನೇರವಾಗಿ ಕಾರಿನೊಳಗೆ ಪ್ರವೇಶ ಮಾಡಲು ಸಾಧ್ಯವಿದೆ.
ಈ ಕಾರು ಡ್ರೈವ್ ಮಾಡಲು ವ್ಹೀಲ್‌ಚೇರ್‌ನಿಂದ ಇಳಿಯಬೇಕಿಲ್ಲ. ವ್ಹೀಲ್‌ಚೇರ್ ಮೂಲಕ ಒಳಪ್ರವೇಶಿಸಿ ಬೆಲ್ಟ್ ಮೂಲಕ ಲಾಕ್ ಮಾಡಿಕೊಳ್ಳಬೇಕು. ಇತ್ತ ಬೂಟ್ ಬಟನ್ ಪ್ರೆಸ್ ಮಾಡಿದರೆ ಹಿಂಭಾಗದ ಬ್ರಿಡ್ಜ್ ಮ್ಯಾಟ್ ಹಾಗೂ ಡೋರ್ ಮಡಚಿಕೊಳ್ಳಲಿದೆ.
ಇದು ಸ್ಟೇರಿಂಗ್ ಕಾರು ಅಲ್ಲ. ಸ್ಕೂಟಿ ರೀತಿ ಹ್ಯಾಂಡಲ್ ಹೊಂದಿದೆ. ಸ್ಟಾರ್ಟ್ ಮಾಡಿ ಸ್ಕೂಟಿ ರೀತಿ ಚಲಾಯಿಸುವ ವಾಹನವಾಗಿದೆ.ಸುಲಭವಾಗಿ ಕಾರು ಹತ್ತಿ ಡ್ರೈವ್ ಮಾಡಬಹುದು.
ಪ್ರಮುಖವಾಗಿ ವ್ಹೀಲ್‌ಚೇರ್‌ನಲ್ಲಿರುವ ವಿಶೇಷ ಚೇತನರು ಯಾರ ಸಹಾಯವೂ ಇಲ್ಲದೆ ಪ್ರಯಾಣ ಮಾಡಬಹುದು. ವ್ಹೀಲ್‌ಚೇರ್‌ನಿಂದ ಇಳಿಯುವ ಅಗತ್ಯವಿಲ್ಲ, ಕಾರು ಹತ್ತಲು ಹರಸಾಹಸ ಪಡಬೇಕಿಲ್ಲ.
ಇದು ಫ್ರಾನ್ಸ್‌ನ ಝೆವ್ ಕಂಪನಿ ಅಭಿವೃದ್ಧಿಪಡಿಸಿದ ಕಾರಾಗಿದೆ. ಫ್ರಾನ್ಸ್‌ನಲ್ಲಿ ಇದರ ಬೆಲೆ 9,900 ಅಮೆರಿಕನ್ ಡಾಲರ್. ಭಾರತದಲ್ಲಿ ಇದು ಕೊಂಚ ದುಬಾರಿಯಾಗಲಿದೆ.