ಒಂದು ಫಾರ್ಚುನರ್ ಮಾರಾಟವಾದರೆ ಸರ್ಕಾರಕ್ಕೆ 18 ಲಕ್ಷ ರೂ ಆದಾಯ, ಕಾರಿನ ಅಸಲಿ ಬೆಲೆ ಎಷ್ಟು?
ಅತೀ ದೊಡ್ಡ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಭಾರತ ಕೂಡ ಇದೆ. ಕಂಪನಿಗಳು ಹೊಸ ಹೊಸ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಉತ್ತಮ ಮಾರಾಟವನ್ನೂ ಕಾಣುತ್ತಿದೆ. ಆದರೂ ಕಂಪನಿಗಳು ಮಾತ್ರ ಹಲವು ಬಾರಿ ತೆರಿಗೆ ಕಡಿತ, ಆಮದು ಸುಂಕ ಕಡಿತಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದೆ. ಇದಕ್ಕೆ ಪ್ರಮುಖ ಕಾರಣ ಒಂದು ಕಾರು ಮಾರಾಟವಾದರೆ ಕಂಪನಿಗೆ ಸಿಗುವುದು ಜುಜುಬಿ ಮೊತ್ತ. ಆದರೆ ಸರ್ಕಾರ ಲಕ್ಷ ಲಕ್ಷ ರೂಪಾಯಿ ಆದಾಯಗಳಿಸುತ್ತಿದೆ.
ಮೇಕ್ ಇನ್ ಇಂಡಿಯಾ ಯೋಜನೆಯಡಿ ಕಾರು ಉತ್ಪಾದಿಸಿ ಮಾರಾಟ ಮಾಡಿದರೆ ಆಟೋಮೊಬೈಲ್ ಕಂಪನಿಗಳು ಬದುಕಿಕೊಳ್ಳಲಿದೆ. ಆದೇ ವಿದೇಶದಿಂದ ಆಮದು ಣಾಡಿ ಇಲ್ಲಿ ಜೋಡಣೆ ಮಾಡಿ ವಿತರಣೆ ಮಾಡಿದರೆ ಆಟೋಮೊಬೈಲ್ ಕಂಪನಿಗಳಿಗೇ ನಷ್ಟವೇ ಹೆಚ್ಚು. ಇದಕ್ಕೆ ಕಾರಣ ತೆರಿಗೆ
ಭಾರತದ ತೆರಿಗೆ ವ್ಯವಸ್ಥೆಯಲ್ಲಿ ಕಾರು ಐಷಾರಾಮಿ ವಸ್ತು. ಅದು ಮಾರುತಿ 800 ಆಗಿರಲಿ ಅಥವಾ ಬೆಂಜ್ ಆಗಿರಲಿ. ಹಲವು ಬಾರಿ ಆಟೋಮೊಬೈಲ್ ಕಂಪನಿಗಳು ಉತ್ತಮ ಮಾರಾಟ ದಾಖಲೆ ಹೊಂದಿದ್ದರೂ ಸರ್ಕಾರಕ್ಕೆ ತರಿಗೆ ಕಡಿತಗೊಳಿಸುವಂತೆ ಮನವಿ ಮಾಡಿದೆ.
ಟೋಯೋಟಾ ಫಾರ್ಚುನರ್ ಕಾರು ಭಾರತದಲ್ಲಿ ಬಹುಬೇಡಿಕೆಯ ಕಾರಾಗಿದೆ. ಇದರ ಆನ್ ರೋಡ್ ಬೆಲೆ ಸರಿಸುಮಾರು 44,27,000 ರೂಪಾಯಿ. ಫಾರ್ಚುನರ್ ಕಾರು ಮಾರಾಟವಾದರೆ ಟೋಯೋಟಾ ಕಂಪನಿ ಲಕ್ಷ ಲಕ್ಷ ರೂಪಾಯಿ ಆದಾಯ ಪಡೆಯಲಿದೆ ಅನ್ನೋ ಲೆಕ್ಕಾಚಾರ ತಪ್ಪು
ಫಾರ್ಚುನರ್ ಕಾರಿನ ಉತ್ಪಾದನಾ ವೆಚ್ಚ 26.67 ಲಕ್ಷ ರೂಪಾಯಿ. ಈ ಕಾರು ಮಾರಾಟಕ್ಕೆ ಸಿದ್ಧವಾದಾಗ ಇದರ ಮೇಲೆ ಶೇಕಡಾ 28 ರಷ್ಟು ಜಿಎಸ್‌ಟಿ ಸೇರಿಕೊಳ್ಳಲಿದೆ. ಈ ವೇಳೆ ಕಾರಿನ ಬೆಲೆ 34,13,760 ರೂಪಾಯಿ ಆಗಲಿದೆ.
ಇಷ್ಟೇ ಅಲ್ಲ ಶೇಕಡಾ 22 ಸೆಸ್ ತೆರಿಗೆ ಸೇರಿಕೊಂಡಾಗ ಕಾರಿನ ಬೆಲೆ 41,64,787 ರೂಪಾಯಿ ಆಗಲಿದೆ. ಇಷ್ಟಕ್ಕೆ ಮುಗಿದಿಲ್ಲ. ಇನ್ನು ರಿಜಿಸ್ಟ್ರೇಶನ್, ಗ್ರೀನ್ ಸೆಸ್ ಮೊತ್ತ ಕೂಡ ಸೇರಿಕೊಳ್ಳಲಿದೆ.ಇವೆಲ್ಲಾ ಸೇರಿದಾಗ ಕಾರಿನ ಬೆಲೆ 44,27,000 ರೂಪಾಯಿ.
ಜಿಎಸ್‌ಟಿ, ಸೆಸ್, ರಿಜಿಸ್ಟ್ರೇಶನ್ ಹಾಗೂ ಗ್ರೀನ್ ಸೆಸ್ ಮೂಲಕ ಸರ್ಕಾರ ಒಂದು ಟೋಯೋಟಾ ಫಾರ್ಚುನರ್ ಕಾರಿನಿಂದ ಸರಿಸುಮಾರು 18 ಲಕ್ಷ ರೂಪಾಯಿ ಆದಾಯ ಪಡೆಯಲಿದೆ.
ಇನ್ನು ಫಾರ್ಚುನರ್ ಕಾರು ಉತ್ಪಾದನೆ ಮಾಡಿ, ಜಾಹೀರಾತು, ಸಾಗಾಣೆ ಸಾರಿಗೆ ಸೇರಿದಂತೆ ಇತರ ವೆಚ್ಚಗಳನ್ನು ಕಂಪನಿ ಭರಿಸಿದ ಬಳಿಕ ಟೋಯೋಟಾ ಕಂಪನಿಗೆ ಒಂದು ಫಾರ್ಚನರ್ ಕಾರಿನಿಂದ ಬರವು ಆದಾಯ 45,000 ರೂಪಾಯಿಂದ 50,000 ರೂಪಾಯಿ ಮಾತ್ರ
ಕಂಪನಿ 45 ರಿಂದ 50 ಸಾವಿರ ರೂಪಾಯಿ ಆದಾಯ ಪಡೆದುಕೊಂಡರೆ ಟೋಯೋಟಾ ಕಾರು ಡೀಲರ್ಸ್ ಒಂದು ಫಾರ್ಚುನರ್ ಕಾರು ಮಾರಾಟವಾದರೆ 1 ಲಕ್ಷ ರೂಪಾಯಿ ಆದಾಯ ಪಡೆಯುತ್ತಾರೆ.