ಭಾರತಕ್ಕೆ ಬರಲಿವೆ 7 ಸೀಟರ್ ಫ್ಯಾಮಿಲಿ ಕಾರುಗಳು: ಇಲ್ಲಿದೆ ನೋಡಿ ಬ್ರ್ಯಾಂಡ್ ಡಿಟೇಲ್ಸ್!
ಸೆವೆನ್ ಸೀಟರ್ ಫ್ಯಾಮಿಲಿ ಕಾರುಗಳು: ಇಂಡಿಯಾದಲ್ಲಿ SUV ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ತಮ್ಮ ಮಾರುಕಟ್ಟೆ ಸ್ಥಾನವನ್ನು ಬಲಪಡಿಸಿಕೊಳ್ಳಲು ಮಾರುತಿ ಸುಜುಕಿ, ಹ್ಯುಂಡೈ, ಮಹೀಂದ್ರಾ, ಟೊಯೊಟಾ ಮುಂತಾದ ಪ್ರಮುಖ ಕಂಪನಿಗಳು ಈ ವರ್ಷ SUV ವಿಭಾಗದಲ್ಲಿ ಹೊಸ ಮಾಡೆಲ್‌ಗಳನ್ನು ಬಿಡುಗಡೆ ಮಾಡಲಿವೆ. 2025 ರಲ್ಲಿ ಬರಲಿರುವ ಮೊದಲ ನಾಲ್ಕು 7 ಸೀಟರ್ SUV ಗಳು, ಫ್ಯಾಮಿಲಿ ಕಾರುಗಳ ಬಗ್ಗೆ ವಿವರಗಳು ಇಲ್ಲಿವೆ.

7 ಸೀಟರ್ ಮಾರುತಿ ಗ್ರಾಂಡ್ ವಿಟಾರಾ:
ಮಾರುತಿ ಸುಜುಕಿ ಈ ವರ್ಷ ಈ-ವಿಟಾರಾ, ಫ್ರಾಂಕ್ಸ್ ಹೈಬ್ರಿಡ್, ಗ್ರಾಂಡ್ ವಿಟಾರಾ ಆಧಾರದ ಮೇಲೆ 7 ಸೀಟರ್ SUV ಸೇರಿದಂತೆ ಮೂರು ಮುಖ್ಯವಾದ ಲಾಂಚ್‌ಗಳನ್ನು ಪ್ಲಾನ್ ಮಾಡ್ತಿದೆ. 7 ಸೀಟರ್ ಗ್ರಾಂಡ್ ವಿಟಾರಾ ಅದರ 5 ಸೀಟರ್ ವೆರ್ಷನ್‌ನಲ್ಲಿರುವ ಫೀಚರ್ಸ್‌ನಲ್ಲೇ ಮಾರ್ಕೆಟ್‌ಗೆ ಬರಲಿದೆ. ಆದ್ರೆ ಇದು ಉದ್ದವಾಗಿರುತ್ತೆ. ಹೆಚ್ಚುವರಿ ಸೀಟ್ಗಳನ್ನ ಹೊಂದಿರುತ್ತೆ. ರೀಡಿಜೈನ್ ಮಾಡಿದ ಬಂಪರ್‌ಗಳು, ಹೊಸ ಅಲಾಯ್ ವೀಲ್ಸ್, ಅಪ್‌ಡೇಟ್ ಮಾಡಿದ ಹೆಡ್‌ಲ್ಯಾಂಪ್, ಟೈಲ್‌ಲ್ಯಾಂಪ್ ಕ್ಲಸ್ಟರ್‌ಗಳಂತಹ ಸಣ್ಣ ಕಾಸ್ಮೆಟಿಕ್ ಬದಲಾವಣೆಗಳು ಕೂಡ ಇರುತ್ತದೆ.
7 ಸೀಟರ್ ಟೊಯೊಟಾ ಹೈರೈಡರ್
ಮಾರುತಿ ಸುಜುಕಿ ತರಹವೇ ಟೊಯೊಟಾ ಕೂಡ ಈ ವರ್ಷದ ಕೊನೆಯಲ್ಲಿ 3 ಹೈರೈಡರ್ ವೆರ್ಷನ್ ಕಾರು ಬಿಡುಗಡೆ ಮಾಡ್ತಿದೆ. 7 ಸೀಟರ್ ಟೊಯೊಟಾ ಹೈರೈಡರ್‌ನ ಡಿಸೈನ್, ಸ್ಟೈಲಿಂಗ್ ಅದರ 5 ಸೀಟರ್ ವರ್ಷನ್‌ನಂತೆಯೇ ಇರುತ್ತದೆ. ಇದು ಉತ್ತಮ ಮೆಟೀರಿಯಲ್ ಕ್ವಾಲಿಟಿ, ಫಿಟ್, ಫಿನಿಶಿಂಗ್‌ನೊಂದಿಗೆ ಬರುತ್ತೆ. ಪವರ್ಗಾಗಿ 1.5L K15C ಪೆಟ್ರೋಲ್ ಮೈಲ್ಡ್ ಹೈಬ್ರಿಡ್, 1.5L ಅಟ್ಕಿನ್ಸನ್ ಸೈಕಲ್ ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್‌ಗಳನ್ನು ಈ ಕಾರಲ್ಲಿ ಫಿಟ್ ಮಾಡ್ತಿದ್ದಾರೆ.
ಇದನ್ನೂ ಓದಿ: ಭಾರತದ ಬಡಜನರ ಕಾರು: ಕೇವಲ ₹₹4.23 ಲಕ್ಷಕ್ಕೆ 6 ಏರ್‌ಬ್ಯಾಗ್‌ಗಳ ಕಾರು ಲಭ್ಯ!
ಮಹೀಂದ್ರಾ XUV700 ಫೇಸ್‌ಲಿಫ್ಟ್: ಮಹೀಂದ್ರಾ XUV700 ಭಾರತದಲ್ಲಿ ಹೆಚ್ಚಾಗಿ ಮಾರಾಟವಾಗುವ SUV ಗಳಲ್ಲಿ ಒಂದು. ಈಗ ಈ SUV 2025 ದ್ವಿತೀಯಾರ್ಧದಲ್ಲಿ ದೊಡ್ಡ ಮಿಡ್‌ಲೈಫ್ ಅಪ್‌ಡೇಟ್‌ನೊಂದಿಗೆ ಬರಲಿದೆ. ಈ ಫೇಸ್‌ಲಿಫ್ಟ್ ಕಾರಲ್ಲಿ ಕೂಡ XUV700 ಇಂಜಿನ್ ಸೆಟಪ್ ಇರುತ್ತೆ. ಆದ್ರೆ ಉತ್ತಮ ಸ್ಟೈಲಿಂಗ್, ಇಂಟೀರಿಯರ್ ಬದಲಾಗೋ ಸಾಧ್ಯತೆ ಇದೆ.
ಈ ಕಾರಲ್ಲಿ 16 ಸ್ಪೀಕರ್ ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಮ್, ಹೆಡ್ ಅಪ್ ಡಿಸ್‌ಪ್ಲೇ, ಟ್ರಿಪಲ್ ಸ್ಕ್ರೀನ್ ಸೆಟಪ್ ಸೇರಿದಂತೆ ಕೆಲವು ಹೈ-ಎಂಡ್ ಫೀಚರ್‌ಗಳು ಇರುತ್ತೆ. 6 ಸ್ಪೀಡ್ ಮ್ಯಾನ್ಯುವಲ್, 6 ಸ್ಪೀಡ್ ಆಟೋಮ್ಯಾಟಿಕ್ ಅನ್ನೋ ಎರಡು ಗೇರ್‌ಬಾಕ್ಸ್ ಆಪ್ಷನ್‌ಗಳೊಂದಿಗೆ 2.0L ಟರ್ಬೋ ಪೆಟ್ರೋಲ್, 2.2L ಡೀಸೆಲ್ ಇಂಜಿನ್‌ಗಳೊಂದಿಗೆ ಮಹೀಂದ್ರಾ XUV700 ಫೇಸ್‌ಲಿಫ್ಟ್ ಕೆಲಸ ಮಾಡುತ್ತೆ.
ಮಹೀಂದ್ರಾ XEV 7e: ಮಹೀಂದ್ರಾ ಅಂಡ್ ಮಹೀಂದ್ರಾ 2025 ಕೊನೆಯ ಹೊತ್ತಿಗೆ XUV700 ಎಲೆಕ್ಟ್ರಿಕ್ ವೆರ್ಷನ್ ಕೂಡ ಬಿಡುಗಡೆ ಮಾಡುತ್ತೆ. ಈ ಎಲೆಕ್ಟ್ರಿಕ್ SUV ಹೆಸರು 'ಮಹೀಂದ್ರಾ XEV 7e' ಆಗಿರುತ್ತೆ ಅಂತ ಮಾಹಿತಿ ಇದೆ. ಇದರಲ್ಲಿ 59kWh, 79kWh ಬ್ಯಾಟರಿ ಪ್ಯಾಕ್ ಇರುತ್ತೆ. ಸಣ್ಣ ಬ್ಯಾಟರಿ ಪ್ಯಾಕ್ ಆದ್ರೆ 542 ಕಿ.ಮೀ. ದೊಡ್ಡ ಬ್ಯಾಟರಿ ಪ್ಯಾಕ್ ವೆಹಿಕಲ್ ಆದ್ರೆ ಫುಲ್ ಚಾರ್ಜ್ ಮೇಲೆ 656 ಕಿ.ಮೀ. ಪ್ರಯಾಣಿಸಬಲ್ಲದು. ಈ ಕಾರಲ್ಲಿ ಆಲ್ ವೀಲ್ ಡ್ರೈವ್ ಸಿಸ್ಟಮ್ ಕೂಡ ಇರುತ್ತೆ ಅಂತ ಮಾಹಿತಿ.
ಇದನ್ನೂ ಓದಿ: ಆಟೋಮ್ಯಾಟಿಕ್ ಅಥವಾ ಮ್ಯಾನುವಲ್ ಗೇರ್ ಕಾರು; ಯಾವುದು ಹೆಚ್ಚು ಮೈಲೇಜ್ ಕೊಡುತ್ತದೆ?