MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Automobile
  • Car News
  • ಕರ್ನಾಟಕಕ್ಕೆ ಲಗ್ಗೆ ಇಟ್ಟ ಟೆಸ್ಲಾ: ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಮೊದಲ ಎಕ್ಸ್‌ಪೀರಿಯೆನ್ಸ್ ಸೆಂಟರ್ ಆರಂಭ

ಕರ್ನಾಟಕಕ್ಕೆ ಲಗ್ಗೆ ಇಟ್ಟ ಟೆಸ್ಲಾ: ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಮೊದಲ ಎಕ್ಸ್‌ಪೀರಿಯೆನ್ಸ್ ಸೆಂಟರ್ ಆರಂಭ

ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಟೆಸ್ಲಾ ತನ್ನ ಮೊದಲ 'ಎಕ್ಸ್‌ಪೀರಿಯೆನ್ಸ್ ಸೆಂಟರ್' ಅನ್ನು ಉದ್ಘಾಟಿಸಿದೆ. ಈ ಸಂದರ್ಭದಲ್ಲಿ, 61.99 ಲಕ್ಷ ರೂ. ಆರಂಭಿಕ ಬೆಲೆಯ ಹೊಸ 'ಮಾಡೆಲ್ ವೈಎಲ್' ಎಸ್‌ಯುವಿಯನ್ನು ಬಿಡುಗಡೆ ಮಾಡಿದ್ದು, ಗ್ರಾಹಕರಿಗೆ ವಾಹನಗಳ ನೇರ ಅನುಭವ ಪಡೆಯುವ ಅವಕಾಶ ಕಲ್ಪಿಸಿದೆ.

2 Min read
Author : Gowthami K
Published : May 14 2026, 04:29 PM IST
Share this Photo Gallery
  • FB
  • TW
  • Linkdin
  • Whatsapp
15
ಆರಂಭಿಕ ಬೆಲೆ 61.99 ಲಕ್ಷ ರೂ
Image Credit : Asianet News

ಆರಂಭಿಕ ಬೆಲೆ 61.99 ಲಕ್ಷ ರೂ

ಬೆಂಗಳೂರು : ಭಾರತದ ಸಿಲಿಕಾನ್ ವ್ಯಾಲಿ ಖ್ಯಾತಿಯ ಬೆಂಗಳೂರಿನ ಐಟಿ ಹಬ್ ವೈಟ್‌ಫೀಲ್ಡ್‌ನಲ್ಲಿ ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ಟೆಸ್ಲಾ ತನ್ನ ಚೊಚ್ಚಲ 'ಎಕ್ಸ್‌ಪೀರಿಯೆನ್ಸ್ ಸೆಂಟರ್' ಅನ್ನು ಇಂದು ಗುರುವಾರ ಉದ್ಘಾಟಿಸಿದೆ. ಈ ಮೂಲಕ ಕರ್ನಾಟಕದ ವಾಹನ ಪ್ರಿಯರಿಗೆ ಟೆಸ್ಲಾ ಕಾರುಗಳ ಭವ್ಯ ಅನುಭವವನ್ನು ನೇರವಾಗಿ ಒದಗಿಸಲಿದೆ. ಇದೇ ಸಂದರ್ಭದಲ್ಲಿ ಬಹುನಿರೀಕ್ಷಿತ ಮೂರು ಸಾಲುಗಳ, ಆರು ಸೀಟು ಸಾಮರ್ಥ್ಯದ ಹೊಸ ಟೆಸ್ಲಾ 'ಮಾಡೆಲ್ ವೈಎಲ್' ಎಸ್‌ಯುವಿಯನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಇದರ ಆರಂಭಿಕ ಬೆಲೆ 61.99 ಲಕ್ಷ ರೂ.ಗಳಾಗಿದೆ.

Add Asianetnews Kannada as a Preferred SourcegooglePreferred
25
ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಹೆಚ್ಚುತ್ತಿರುವ ಒಲವು
Image Credit : Asianet News

ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಹೆಚ್ಚುತ್ತಿರುವ ಒಲವು

ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾಗುವ ವಾಹನಗಳ ಸಾಲಿನಲ್ಲಿರುವ ಮಾಡೆಲ್ ವೈನೊಂದಿಗೆ, ಈ ಹೊಸ ಮಾಡೆಲ್ ವೈಎಲ್ ಅನ್ನು ಗ್ರಾಹಕರು ಇಂದಿನಿಂದ ಇಲ್ಲಿ ವೀಕ್ಷಿಸಬಹುದಾಗಿದೆ. ಕರ್ನಾಟಕದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಹೆಚ್ಚುತ್ತಿರುವ ಒಲವನ್ನು ಗಮನದಲ್ಲಿಟ್ಟುಕೊಂಡು, ಟೆಸ್ಲಾ ಕಂಪನಿಯು ವೈಟ್‌ಫೀಲ್ಡ್‌ನಲ್ಲಿ ಮಾರಾಟದ ನಂತರದ ಸೇವಾ ಕೇಂದ್ರವನ್ನೂ ಆರಂಭಿಸುವುದಾಗಿ ಪ್ರಕಟಿಸಿದೆ. ಇದು ಬೆಂಗಳೂರಿನ ಗ್ರಾಹಕರಿಗೆ ವಾಹನ ನಿರ್ವಹಣೆಯ ಅತ್ಯುತ್ತಮ ಅನುಭವವನ್ನು ನೀಡಲಿದೆ.

Related Articles

Related image1
ಒಂದೇ ಚಾರ್ಜ್‌ಗೆ 681ಕಿ.ಮೀ ರೇಂಜ್‌, ಟೆಸ್ಲಾ ಹೊಸ ಕಾರು ಭಾರತಕ್ಕೆ ಲಗ್ಗೆ! ಐಷಾರಾಮಿ SUV ಮಾರುಕಟ್ಟೆಯಲ್ಲಿ ಸಂಚಲನ
Related image2
ಬೆಂಗಳೂರು ಮಾರುಕಟ್ಟೆಗೆ ಎಂಟ್ರಿಕೊಟ್ಟ ಅಮೆರಿಕ ಟೆಸ್ಲಾ ಕಾರು, ಕೇವಲ 22 ಸಾವಿರ ರೂ.ಗೆ ಬುಕಿಂಗ್
35
ಕಣ್ಮನ ಸೆಳೆದ ಹೊಸ ಮಾಡೆಲ್ ವೈಎಲ್
Image Credit : Asianet News

ಕಣ್ಮನ ಸೆಳೆದ ಹೊಸ ಮಾಡೆಲ್ ವೈಎಲ್

ಕೌಟುಂಬಿಕ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿರುವ ಈ ಎಸ್‌ಯುವಿ ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 681 ಕಿ.ಮೀವರೆಗೆ ಚಲಿಸುವ ಸಾಮರ್ಥ್ಯ ಹೊಂದಿದೆ. ಕೇವಲ 5.0 ಸೆಕೆಂಡುಗಳಲ್ಲಿ 0 ಯಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳಲಿದ್ದು, 2,539 ಲೀಟರ್‌ಗಳಷ್ಟು ವಿಶಾಲವಾದ ಕಾರ್ಗೋ ಸ್ಪೇಸ್ ಹೊಂದಿದೆ. ಇದರ 3 ಸಾಲಿನ ವಿನ್ಯಾಸವು ಪ್ರಯಾಣಿಕರಿಗೆ ಆರಾಮದಾಯಕ ಹೆಡ್‌ರೂಮ್ ಮತ್ತು ಲೆಗ್‌ರೂಮ್ ಒದಗಿಸಿ, ವಿಶಿಷ್ಟ ಪ್ರಯಾಣದ ಅನುಭವವನ್ನು ನೀಡುತ್ತದೆ.

45
ಅತ್ಯಾಧುನಿಕ ಸುರಕ್ಷತೆ ಮತ್ತು ಸೂಪರ್ ಚಾರ್ಜಿಂಗ್
Image Credit : Asianet News

ಅತ್ಯಾಧುನಿಕ ಸುರಕ್ಷತೆ ಮತ್ತು ಸೂಪರ್ ಚಾರ್ಜಿಂಗ್

ಸುರಕ್ಷತೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿರುವ ಮಾಡೆಲ್ ವೈಎಲ್, ಜಾಗತಿಕ ಮಟ್ಟದಲ್ಲಿ ಎನ್‌ಎಚ್‌ಟಿಎಸ್‌ಎ (NHTSA), ಯೂರೋ ಎನ್‌ಸಿಎಪಿ, ಮತ್ತು ಎಎನ್‌ಸಿಎಪಿ ಸೇರಿದಂತೆ ಪ್ರತಿಷ್ಠಿತ ಸಂಸ್ಥೆಗಳಿಂದ ಅತಿಹೆಚ್ಚಿನ 5 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿದೆ.

ಟೆಸ್ಲಾ ಸೂಪರ್‌ಚಾರ್ಜಿಂಗ್ ತಂತ್ರಜ್ಞಾನದ ಮೂಲಕ ಕೇವಲ 15 ನಿಮಿಷಗಳ ಚಾರ್ಜಿಂಗ್‌ನಿಂದ 288 ಕಿ.ಮೀ ಕ್ರಮಿಸಬಹುದಾಗಿದೆ. "ಪ್ಲಗ್ ಇನ್, ಚಾರ್ಜ್ ಅಂಡ್ ಗೋ" ಪರಿಕಲ್ಪನೆಯೊಂದಿಗೆ ದೂರದ ಪ್ರಯಾಣವನ್ನು ಇದು ಸುಲಭಗೊಳಿಸಲಿದ್ದು, ಭಾರತದಲ್ಲಿ ಮನೆಗಳಲ್ಲಿಯೇ ಚಾರ್ಜ್ ಮಾಡಿಕೊಳ್ಳುವ ಸೌಲಭ್ಯವನ್ನೂ ಸಹ ಒದಗಿಸಲಾಗುತ್ತಿದೆ.

55
ಈ ಜಾಗದಲ್ಲಿ ಟೆಸ್ಲಾ ಕಾರಿನ ಪ್ರತ್ಯಕ್ಷ ಅನುಭವ
Image Credit : Asianet News

ಈ ಜಾಗದಲ್ಲಿ ಟೆಸ್ಲಾ ಕಾರಿನ ಪ್ರತ್ಯಕ್ಷ ಅನುಭವ

ಗ್ರಾಹಕರು ಮಹದೇವಪುರ, ವೈಟ್‌ಫೀಲ್ಡ್ ಮುಖ್ಯ ರಸ್ತೆಯಲ್ಲಿರುವ 'ವಿಆರ್ ಬೆಂಗಳೂರು' ಮಾಲ್‌ನಲ್ಲಿರುವ ಟೆಸ್ಲಾ ಕೇಂದ್ರಕ್ಕೆ ಭೇಟಿ ನೀಡಿ ಕಾರಿನ ಪ್ರತ್ಯಕ್ಷ ಅನುಭವ ಪಡೆದುಕೊಳ್ಳಬಹುದು. ಬೆಂಗಳೂರಿನ ಜೊತೆಗೆ ಮುಂಬೈ, ದೆಹಲಿ ಮತ್ತು ಗುರುಗ್ರಾಮದಲ್ಲೂ ಟೆಸ್ಲಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಆಟೋಮೊಬೈಲ್
ಕಾರುಗಳು
ಬೆಂಗಳೂರು
ಸುದ್ದಿ
ತಂತ್ರಜ್ಞಾನ

Latest Videos
Recommended Stories
Recommended image1
Nissan Service Camp: ನಿಸ್ಸಾನ್ ಕಾರ್ ಮಾಲೀಕರೇ ಗಮನಿಸಿ, ನಿಮಗೊಂದು ಸಮ್ಮರ್ ಸರ್ಪ್ರೈಸ್!
Recommended image2
ಥಾರ್ ರಾಕ್ಸ್, ಬೊಲೆರೋ ಸೇರಿ ಮಹೀಂದ್ರ ಕಾರುಗಳಿಗೆ 2.5 ಲಕ್ಷ ರೂ ಡಿಸ್ಕೌಂಟ್, ಈ ತಿಂಗಳು ಮಾತ್ರ
Recommended image3
ಹೊಸ ಕಾರು ಖರೀದಿಸುವ ಪ್ಲಾನ್ ಇದ್ಯಾ? ಮೇ 2026ರ ವಿವಿಧ ಬ್ಯಾಂಕುಗಳ ಸಾಲದ ಬಡ್ಡಿದರ ಮತ್ತು ಇಎಂಐ ವಿವರ ಇಲ್ಲಿದೆ!
Related Stories
Recommended image1
ಒಂದೇ ಚಾರ್ಜ್‌ಗೆ 681ಕಿ.ಮೀ ರೇಂಜ್‌, ಟೆಸ್ಲಾ ಹೊಸ ಕಾರು ಭಾರತಕ್ಕೆ ಲಗ್ಗೆ! ಐಷಾರಾಮಿ SUV ಮಾರುಕಟ್ಟೆಯಲ್ಲಿ ಸಂಚಲನ
Recommended image2
ಬೆಂಗಳೂರು ಮಾರುಕಟ್ಟೆಗೆ ಎಂಟ್ರಿಕೊಟ್ಟ ಅಮೆರಿಕ ಟೆಸ್ಲಾ ಕಾರು, ಕೇವಲ 22 ಸಾವಿರ ರೂ.ಗೆ ಬುಕಿಂಗ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved