- Home
- Automobile
- Car News
- ಥಾರ್ ರಾಕ್ಸ್, ಬೊಲೆರೋ ಸೇರಿ ಮಹೀಂದ್ರ ಕಾರುಗಳಿಗೆ 2.5 ಲಕ್ಷ ರೂ ಡಿಸ್ಕೌಂಟ್, ಈ ತಿಂಗಳು ಮಾತ್ರ
ಥಾರ್ ರಾಕ್ಸ್, ಬೊಲೆರೋ ಸೇರಿ ಮಹೀಂದ್ರ ಕಾರುಗಳಿಗೆ 2.5 ಲಕ್ಷ ರೂ ಡಿಸ್ಕೌಂಟ್, ಈ ತಿಂಗಳು ಮಾತ್ರ
ಮಹೀಂದ್ರ ಆ್ಯಂಡ್ ಮಹೀಂದ್ರ ಮೇ ತಿಂಗಳ ಡಿಸ್ಕೌಂಟ್ ಘೋಷಿಸಿದೆ. ಮಹೀಂದ್ರ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಇದೀಗ ಭರ್ಜರಿ 2.5 ಲಕ್ಷ ರೂವರಗೆ ಡಿಸ್ಕೌಂಟ್ ನೀಡಿದೆ. ಡಿಸ್ಕೌಂಟ್ ಬಳಿಕ ಮಹೀಂದ್ರ ಕಾರು ಬೆಲೆ ಎಷ್ಟು?

ಮಹೀಂದ್ರ ಕಾರುಗಳಿಗೆ ಮೇ ತಿಂಗಳ ಆಫರ್
ಭಾರತದಲ್ಲಿ ಮಹೀಂದ್ರ ಅತೀ ದೊಡ್ಡ ಕಾರು ಉತ್ಪಾದಕ ಸಂಸ್ಥೆಗಳಲ್ಲೊಂದು. ಸೇಫ್ಟಿ, ವಿನ್ಯಾಸ, ಪರ್ಫಾಮೆನ್ಸ್ ಸೇರಿದಂತೆ ಹಲವು ವಿಭಾಗದಲ್ಲಿ ಮಹೀಂದ್ರ ಕಾರುಗಳು ಜನರನ ಮನಸ್ಸು ಗೆದ್ದಿದೆ. ಹೀಗಾಗಿ ಮಹೀಂದ್ರ ಕಾರುಗಳಿಗೆ ಭಾರಿ ಬೇಡಿಕೆ ಇದೆ. ಇದೀಗ ಮಹೀಂದ್ರ ಆಯ್ದ ಕಾರುಗಳಿಗೆ ಮೇ ತಿಂಗಳ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ.

ಮಹೀಂದ್ರ ಥಾರ್ ರಾಕ್ಸ್ ಡಿಸ್ಕೌಂಟ್
ಮಹೀಂದ್ರ ಥಾರ್ ರಾಕ್ಸ್ ಕಾರು ಮಾರಾಟದಲ್ಲೂ ದಾಖಲೆ ಬರೆದಿದೆ. ಇದೀಗ ಥಾರ್ ರಾಕ್ಸ್ ಕಾರಿಗೆ 1.10 ಲಕ್ಷ ರೂಪಾಯಿ ಡಿಸ್ಕೌಂಟ್ ಘೋಷಿಸಲಾಗಿದೆ. ಈ ಪೈಕಿ 85,000 ರೂಪಾಯಿ ಕ್ಯಾಶ್ ಡಿಸ್ಕೌಂಟ್ ಲಹಾಗೂ 25,000 ರೂಪಾಯಿ ವರೆಗೆ ಆ್ಯಕ್ಸಸರಿ ಡಿಸ್ಕೌಂಟ್ ನೀಡಲಾಗಿದೆ.ಇದೀಗ ರಾಕ್ಸ್ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ.
ಮಹೀಂದ್ರ XUV400 ಇವಿ ಕಾರು ಡಿಸ್ಕೌಂಟ್
ಮಹೀಂದ್ರ ಎಲೆಕ್ಟ್ರಿಕ್ ಕಾರುಗಳ ಪೈಕಿ XUV400 EV ಕಾರಿನ ಮೇಲೆ ಬರೋಬ್ಬರಿ 2.5 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಮಹೀಂದ್ರ ಕಾರಿನ ಮತ್ತೊಂದು ಆಕರ್ಷಕ ಇವಿ XEV 9e ಮೇಲೆ 1.14 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.
ಮಹೀಂದ್ರ XUV 3XO, ಸ್ಕಾರ್ಪಿಯೋ ಮೇಲೂ ಡಿಸ್ಕೌಂಟ್
ಮಹೀಂದ್ರ XUV 3XO ಕಾರಿನ ಮೇಲೆ ಒಟ್ಟು 80 ಸಾವಿರ ಡಿಸ್ಕೌಂಟ್ ನೀಡಲಾಗಿದೆ ಈ ಪೈಕಿ 40 ಸಾವಿರ ರೂಪಾಯಿ ಕ್ಯಾಶ್ ಡಿಸ್ಕೌಂಟ್, 20 ಸಾವಿರ ರೂಪಾಯಿ ಆ್ಯಕ್ಸಸರಿ ಡಿಸ್ಕೌಂಟ್ ನೀಡಲಾಗಿದೆ. ಇತ್ತ ಸಾರ್ಪಿಯೋ ಮೇಲೆ ಒಟ್ಟು 50,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ.
ಮಹೀಂದ್ರ ಬೊಲೆರೋ ಡಿಸ್ಕೌಂಟ್
ಮಹೀಂದ್ರ ಬೊಲೆರೋ ಕಾರಿಗೆ 25,000 ರೂಪಾಯಿ ಕ್ಯಾಶ್ ಡಿಸ್ಕೌಂಟ್ ಹಾಗೂ ಎಕ್ಸ್‌ಚೇಂಜ್ ಆಫರ್ ನೀಡಲಾಗಿದೆ. ಆಯ್ದ ಕಾರುಗಳ ಮೇಲೆ ಈ ತಿಂಗಳು ಡಿಸ್ಕೌಂಟ್ ಆಫರ್ ಇರಲಿದೆ. ಈ ತಿಂಗಳು ಬುಕ್ ಮಾಡುವ ಗ್ರಾಹಕರು ಈ ಆಫರ್ ಸದುಪಯೋಗ ಪಡಿಸಿಕೊಳ್ಳಬಹುದು.
ಸೂಚನೆ: ಆಫರ್ ಬಗ್ಗೆ ಹತ್ತಿರದ ಡೀಲರ್ ಸಂಪರ್ಕಿಸಿ ಖಚಿತಪಡಿಸಿಕೊಳ್ಳಿ, ರಾಜ್ಯದಿಂದ ರಾಜ್ಯ, ನಗರದಿಂದ ನಗರಕ್ಕೆ ಆಫರ್ ಬದಲಾಗುವ ಸಾಧ್ಯತೆ ಇದೆ.

