ಶೇ.95ರಷ್ಟು ಜನರು 'BMW' ತಪ್ಪಾಗಿ ಉಚ್ಚಾರಣೆ; ಸಮೀಕ್ಷೆಯಿಂದ ಬಹಿರಂಗ!
First Published Feb 15, 2021, 2:56 PM IST
BMW ಕಾರು ಯಾರಿಗೆ ತಾನೇ ಗೊತ್ತಿಲ್ಲ. ಐಷಾರಾಮಿ, ದುಬಾರಿ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಹೇಳಿಮಾಡಿಸಿದ ಕಾರು. ಗರಿಷ್ಠ ಸುರಕ್ಷತೆ, ಹತ್ತು ಹಲವು ಫೀಚರ್ಸ್ ಸೇರಿದಂತೆ ಹಲವು ವಿಶೇಷತೆಗಳಿವೆ. ಆದರೆ ಜರ್ಮನಿಯ ಈ ಬಿಎಂಡಬ್ಲ್ಯೂ ಕಾರನ್ನು ಶೇಕಡಾ 95 ರಷ್ಟು ಮಂದಿ ತಪ್ಪಾಗಿ ಉಚ್ಚಾರಣೆ ಮಾಡುತ್ತಾರೆ. ಹಾಗಾದರೆ ಸರಿಯಾದ ಉಚ್ಚಾರಣೆ ಏನು?

ದುಬಾರಿ ಬಿಎಂಡಬ್ಲ್ಯೂ ಕಾರು ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಜನಪ್ರಿಯವಾಗಿದೆ. ಐಷಾರಾಮಿ ಕಾರಾಗಿರುವ BMW ಆಕರ್ಷಕ, ಅತ್ಯಾಧುನಿಕ ಫೀಚರ್ಸ್ ಹೊಂದಿರುವ ಕಾರಾಗಿದೆ.

ಆದರೆ ಶೇಕಡಾ 95 ರಷ್ಟು ಮಂದಿ BMW ಕಾರಿನ ಉಚ್ಚಾರಣೆಯನ್ನು ತಪ್ಪಾಗಿ ಮಾಡುತ್ತಾರೆ ಎಂದು ಸಮೀಕ್ಷಾ ವರದಿಯೊಂದು ಅಧ್ಯಯನ ವರದಿಯನ್ನು ಬಹಿರಂಗ ಮಾಡಿದೆ.

ಇಂಗ್ಲೀಷ್ ಮೂರು ಅಕ್ಷರವನ್ನು ಸರಿಯಾಗಿ ಹೇಳಿದ್ದೇವೆ, ಇದರಲ್ಲಿ ತಪ್ಪೇಲ್ಲಿದೆ ಅನ್ನೋ ಗೊಂದಲ ಬಹುತೇಕರಲ್ಲಿ ಮೂಡುವುದು ಸಹಜ. ಇದಕ್ಕೆ ಈ ಸಮೀಕ್ಷಾ ವರದಿ ಸರಿಯಾದ ಉಚ್ಚಾರಣೆಯನ್ನು ಹೇಳಿದೆ.

BMW ಜರ್ಮನ್ ಮೂಲದ ಕಾರು. ನಾವಿದನ್ನು ಬಿ. ಎಂ.ಡಬ್ಲ್ಯೂ ಎಂದು ಎಚ್ಚರಿಸುತ್ತೇವೆ. ಆದರೆ ಈ ಉಚ್ಚಾರಣೆ ಜರ್ಮನಿಯ BMW ಹೆಸರಿ ಅನ್ವರ್ಥವಾಗುತ್ತಿಲ್ಲ.

BMW ಸರಿಯಾದ ಉಚ್ಚಾರಣೆ ಬಿ.ಎಂ.ವಿ. ಹೌದು BMW ಸರಿಯಾದ ಉಚ್ಚಾರಣೆ ಬಿಎಂವಿ ಹೊರತು ಬಿಎಂಡಬ್ಲೂ ಅಲ್ಲ ಎಂದು ಅಧ್ಯಯನ ವರದಿ ಹೇಳಿದೆ.

ಲಂಡನ್‌ನಲ್ಲಿ ಈ ಸರ್ವೆ ಮಾಡಲಾಗಿದೆ. 1,000 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಶೇಕಡಾ 95 ರಷ್ಟು ಮಂದಿ BMW ನಿಜವಾದ ಉಚ್ಚಾರಣೆ ಹೇಳಿಲ್ಲ.

ಭಾರತದಲ್ಲಿ ದುಬಾರಿ BMW ಕಾರಿನ ಬೆಲೆ ಸುಮಾರು 40 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತದೆ. ಬಿಎಂಡಬ್ಲ್ಯೂ ಸೆಡಾನ್, SUV ಸೇರಿದಂತೆ ಹಲವು ಕಾರುಗಳು ಭಾರತದಲ್ಲಿದೆ.