ಟಾಟಾಗೆ ಠಕ್ಕರ್, ₹10 ಲಕ್ಷದೊಳಗಿನ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ ಸ್ಕೋಡಾ!
ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪ್ರಮುಖ ಕಾರು ತಯಾರಕ ಸ್ಕೋಡಾ ಇದೀಗ ಭಾರತದಲ್ಲಿ 10 ಲಕ್ಷ ರೂಪಾಯಿ ಒಳಗಿನ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜಾಗಿದೆ.
ಸ್ಕೋಡಾ ಇವಿ ಕಾರ್
ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚುತ್ತಿರುವ ಈ ಸಮಯದಲ್ಲಿ, ಸ್ಕೋಡಾ ಕಂಪನಿಯು ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಕಾರನ್ನು (EV) ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಹೊಸ ಎಲೆಕ್ಟ್ರಿಕ್ ಕಾರ್ ಕುಶಾಕ್ SUV ಶೈಲಿಯಲ್ಲೇ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಸ್ಕೋಡಾ ಕಂಪನಿಯ ಔರಂಗಾಬಾದ್ ಕಾರ್ಖಾನೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸುವ ಗುರಿ ಇಟ್ಟುಕೊಂಡಿದೆ.
ಸ್ಕೋಡಾ ಇವಿ ಕಾರ್
ಸ್ಕೋಡಾ ಕಂಪನಿಯು ನೀತಿ ನವೀಕರಣಗಳನ್ನು, CAFE 3 ನಿಯಮಗಳು ಮತ್ತು EV ಮತ್ತು ಹೈಬ್ರಿಡ್ ತೆರಿಗೆಯ ಬಗ್ಗೆ ಸರ್ಕಾರದ ನಿಲುವನ್ನು ಮತ್ತು ಉತ್ಪಾದನೆಗೆ ಅನುಮತಿ ನೀಡುವ ಬಗ್ಗೆ ನಿಗಾ ವಹಿಸುತ್ತಿದೆ. EV ಎಲೆಕ್ಚ್ರಿಕ್ ಕಾರುಗಳನ್ನು ಭಾರತದಲ್ಲೇ ಉತ್ಪಾದಿಸಲು ಕಾನೂನು ಪ್ರಕ್ರಿಯೆ, ಸರ್ಕಾರದ ಅನುಮತಿ ಸೇರಿದಂತೆ ಹಲವು ವಿಚಾರಗಳ ಕುರಿತು ಸ್ಕೋಡಾ ಚರ್ಚಿಸುತ್ತಿದೆ.
ಸ್ಕೋಡಾ ಇವಿ ಕಾರ್
ಸ್ಥಳೀಕರಣದ ಮಹತ್ವ
ಸ್ಕೋಡಾ ಕೈಗೆಟುಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಗೆ ಕಾರು ಲಭ್ಯವಾಗುವ ಕಾರಣ ವಹಿವಾಟು ವಿಸ್ತರಿಸಲು ಸಾಧ್ಯವಾಗುತ್ತದೆ.
ಸ್ಥಳೀಕರಣದ ಮೇಲೆ ಕೇಂದ್ರೀಕರಿಸುವ ಮೂಲಕ, ಸ್ಕೋಡಾ ವೆಚ್ಚವನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ, ಇದು EV ಯನ್ನು ವಿಶಾಲ ಮಾರುಕಟ್ಟೆಗೆ ಕೈಗೆಟುಕುವಂತೆ ಮಾಡುತ್ತದೆ.
ಸ್ಕೋಡಾ ಇವಿ ಕಾರ್
ಭಾರತ ಸ್ಕೋಡಾಗೆ ಪ್ರಮುಖ ಮಾರುಕಟ್ಟೆ
ಭಾರತವು ಸ್ಕೋಡಾಗೆ ಜಾಗತಿಕವಾಗಿ ಉತ್ತಮ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಕಂಪನಿಯು ಅನಗತ್ಯ ಅಪಾಯಗಳನ್ನು ತೆಗೆದುಕೊಳ್ಳಲು ಸಿದ್ಧವಿಲ್ಲ. ಅಳೆದು ತೂಗಿ ತನ್ನ ಬ್ರ್ಯಾಂಡ್ ವ್ಯಾಲ್ಯೂ ಉಳಿಸಿಕೊಂಡು ಕಾರುಗಳನ್ನು ನೀಡಲು ಸಜ್ಜಾಗಿದೆ.
ಸ್ಕೋಡಾ ಇವಿ ಕಾರ್
ಸ್ಕೋಡಾದ ಕೈಗೆಟುಕುವ ಬೆಲೆಯ EV 2027 ರ ನಂತರ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕಂಪನಿಯು EV ವಿಭಾಗದಲ್ಲಿ ಎರಡು ಪ್ರೀಮಿಯಂ ಕಾರುಗಳನ್ನು - Enyaq EV ಮತ್ತು Elroq SUV ಗಳನ್ನು ಪರಿಚಯಿಸಲಿದೆ.
ಸ್ಕೋಡಾ ಇವಿ ಕಾರ್
ಮಾರುಕಟ್ಟೆ ಪ್ರವೃತ್ತಿಗಳು
ನಿರೀಕ್ಷಿತ ಕುಶಾಕ್ ಗಾತ್ರದ EV ಮಾರುಕಟ್ಟೆ ಪ್ರವೃತ್ತಿಗಳಿಗೆ ಹೊಂದಿಕೆಯಾಗುತ್ತದೆ. ಏಕೆಂದರೆ ಭಾರತೀಯರು ದೊಡ್ಡ ಕಾರುಗಳನ್ನು ಖರೀದಿಸುವತ್ತ ಒಲವು ತೋರುತ್ತಿದ್ದಾರೆ.
ಸ್ಕೋಡಾ ಇವಿ ಕಾರ್
ಸ್ಕೋಡಾದ ಕೈಗೆಟುಕುವ ಬೆಲೆಯ EV ಬಿಡುಗಡೆಯಾಗುವ ಹೊತ್ತಿಗೆ, ಕುಶಾಕ್ ಎರಡು-ಮೂರು ಸಾಲು ಸೀಟು ಆಯ್ಕೆ ಕಾರನ್ನು ಬಿಡುಗಡೆ ಮಾಡಲಿದೆ. ಇದು ವಿಶಾಲ ಮಾರುಕಟ್ಟೆಯನ್ನು ಆಕರ್ಷಿಸತ್ತದೆ. ಜೊತೆಗೆ ಎಲೆಕ್ಟ್ರಿಕ್ SUV ಯನ್ನು ತಯಾರಿಸಲು ಸ್ಕೋಡಾಗೆ ಉತ್ತಮ ವೇದಿಕೆ ಕಲ್ಪಿಸಲಿದೆ.
ಸ್ಕೋಡಾ ಇವಿ ಕಾರ್
ಮಾರುತಿ ಸುಜುಕಿ, ಟಾಟಾ, ಮಹೀಂದ್ರಾ, ಟೊಯೋಟಾ, MG, ಹೋಂಡಾ, ಹ್ಯುಂಡೈ ಮತ್ತು ಕಿಯಾ ಮುಂತಾದ ಸ್ಥಾಪಿತ ಕಂಪನಿಗಳೊಂದಿಗೆ ಸ್ಕೋಡಾ ಸ್ಪರ್ಧಿಸುತ್ತದೆ. ಮಧ್ಯಮ ಗಾತ್ರದ EV ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ನಿರೀಕ್ಷೆಯಿದೆ.