ಸಚಿನ್ 'ಮಾರುತಿ 800' to ಕಂಗನಾ 'BMW':ಸೆಲೆಬ್ರೆಟಿಗಳ ಮೊದಲ ಕಾರು ಯಾವುದು?
First Published Dec 6, 2020, 6:59 PM IST
ಪ್ರತಿಯೊಬ್ಬರಿಗೆ ಮೊದಲ ಕಾರು, ಮೊದಲ ಬೈಕ್, ಮೊದಲ ಫೋನ್ ಮೇಲೆ ಪ್ರೀತಿ ಹೆಚ್ಚು. ಇಷ್ಟೇ ಅಲ್ಲ ಅದೆಷ್ಟೇ ವರ್ಷಗಳು ಉರುಳಿದರೂ, ಅದೆಷ್ಟೋ ಹೊಸ ವಾಹನ ಮನೆ ಸೇರಿಕೊಂಡರು ಮೊದಲ ವಾಹನ, ಮೊದಲ ಫೋನ್ ನೆನಪುಗಳು ಹಚ್ಚ ಹಸುರಾಗಿರುತ್ತದೆ. ಹೀಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ಬಾಲಿವುಡ್ ಸೆಲೆಬ್ರೆಟಿಗಳ ಮೊದಲ ಕಾರು ಯಾವುದು? ಈ ಕುರಿತು ಮಾಹಿತಿ ಇಲ್ಲಿದೆ.

BMW ಇಂಡಿಯಾದ ರಾಯಭಾರಿಯಾಗಿರುವ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಬಳಿ ಹಲವು BMW ಕಾರುಗಳಿವೆ. ಆದರೆ ಸಚಿನ್ ಮೊದಲು ಖರೀದಿಸದ ಕಾರು ಮಾರುತಿ 800.

ಮಾರುತಿ 800 ಬಳಿಕ ಸಚಿನ್, ಚಾಂಪಿಯನ್ ರೇಸರ್ ಮೈಕಲ್ ಶುಮಾಕರ್ ನೀಡಿದ ಫೆರಾರಿ ಸೇರಿದಂತೆ ಹಲವು ಕಾರುಗಳ ಮಾಲೀಕರಾಗಿದ್ದಾರೆ. ಆದರೆ ಸಚಿನ್ ತಮ್ಮ ಮೊದಲ ಮಾರುತಿ 800 ಕಾರನ್ನು ಹುಡುಕಿಕೊಡುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?