ಭಾರತದಲ್ಲಿ ಗೇರ್ ಇಲ್ಲದ ಕಾರುಗಳಿಗೆ ಬೇಡಿಕೆ ಹೆಚ್ಚಳ; ಆಟೋಮ್ಯಾಟಿಕ್ ಕಾರು ಕೊಳ್ಳಲು ಈ ಕಂಪನಿ ಬೆಸ್ಟ್!
ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಆಟೋಮ್ಯಾಟಿಕ್ ಕಾರುಗಳ ಬೇಡಿಕೆ ಒಮ್ಮೆಲೆ ಹೆಚ್ಚಾಗಿದೆ. ಇದಕ್ಕೆ ಹಲವು ಕಾರಣಗಳಿವೆ. ಗೇರ್ ಬದಲಾಯಿಸುವುದರಿಂದ ಮುಕ್ತಿ ಸಿಗುತ್ತದೆ ಎಂಬುದು ಒಂದು ಪ್ರಮುಖ ಕಾರಣ.
ಆಟೋಮ್ಯಾಟಿಕ್ ಕಾರು
2020 ರಲ್ಲಿ ಒಟ್ಟು ಕಾರು ಮಾರಾಟದಲ್ಲಿ ಆಟೋಮ್ಯಾಟಿಕ್ ಕಾರುಗಳ ಪಾಲು ಶೇ.16 ರಷ್ಟಿತ್ತು. ಈಗ ಶೇ.26ಕ್ಕೆ ಏರಿದೆ ಎಂದು ಜಾಟೋ ಡೈನಾಮಿಕ್ಸ್ ವರದಿ ಹೇಳುತ್ತದೆ.
AMT ಕಾರು
ನಗರಗಳಲ್ಲಿ ಬ್ರೇಕ್ ಮತ್ತು ಆಕ್ಸಿಲರೇಟರ್ ಒತ್ತಿದರೆ ಓಡುವ ಕಾರುಗಳಿಗೆ ಬೇಡಿಕೆ ಹೆಚ್ಚಿದೆ. ಇವುಗಳೇ ಆಟೋಮ್ಯಾಟಿಕ್ ಕಾರುಗಳು. ಗೇರ್ ಬದಲಾಯಿಸಬೇಕಿಲ್ಲ.
AMT ಕಾರು
ಆಟೋಮ್ಯಾಟಿಕ್ ಕಾರುಗಳು ಟ್ರಾಫಿಕ್ ಜಾಮ್ ಕಡಿಮೆ ಮಾಡುತ್ತವೆ. 20 ಪ್ರಮುಖ ನಗರಗಳಲ್ಲಿ ಮಾರಾಟವಾಗುವ ಪ್ರತಿ ಮೂರು ಕಾರುಗಳಲ್ಲಿ ಒಂದು ಆಟೋಮ್ಯಾಟಿಕ್ ಕಾರು ಎಂದು ಜಾಟೋ ಡೈನಾಮಿಕ್ಸ್ ವರದಿ ಹೇಳುತ್ತದೆ.
AMT ಕಾರು
ಆಟೋಮ್ಯಾಟಿಕ್ ಕಾರುಗಳ ಬೇಡಿಕೆ ಹೆಚ್ಚುತ್ತಿರುವುದರಿಂದ ಮಾರುತಿ, ಟೊಯೋಟಾ, ಮಹೀಂದ್ರಾ, ಟಾಟಾ, ಹುಂಡೈ ಮತ್ತು ನಿಸ್ಸಾನ್ ಕಂಪನಿಗಳು 83 ಮಾದರಿಯ ಆಟೋಮ್ಯಾಟಿಕ್ ಕಾರುಗಳನ್ನು ಬಿಡುಗಡೆ ಮಾಡಿವೆ.
AMT ಕಾರು
ಹೋಂಡಾ ಕಂಪನಿಯು CVT ಟ್ರಾನ್ಸ್ಮಿಷನ್ ತಂತ್ರಜ್ಞಾನವನ್ನು ಪರಿಚಯಿಸಿದೆ. AMT ಟ್ರಾನ್ಸ್ಮಿಷನ್ ನಲ್ಲಿ ಕ್ಲಚ್ ಇರುತ್ತದೆ. CVT ಯಲ್ಲಿ ಸೆನ್ಸಾರ್ ಕ್ಲಚ್ ಕೆಲಸ ಮಾಡುತ್ತದೆ. CVT ಕಾರುಗಳು AMT ಗಿಂತ ಸುಗಮವಾಗಿ ಚಲಿಸುತ್ತವೆ.