₹2 ಸಾವಿರದಲ್ಲಿ ನಿಮ್ಮದಾಗಿಸಿಕೊಳ್ಳಿ ದೇಶದ ಅತಿ ಕಡಿಮೆ ಬೆಲೆಯ PMV EaS-E ಕಾರ್; 160 km ಮೈಲೇಜ್ ಕೊಡುವ EV
ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ವಿದ್ಯುತ್ ವಾಹನ ತಯಾರಕ PMV ಎಲೆಕ್ಟ್ರಿಕ್ ದೇಶದಲ್ಲೇ ಅತ್ಯಂತ ಕಡಿಮೆ ಬೆಲೆಯ ಹೊಸ ವಿದ್ಯುತ್ ಕಾರನ್ನು ಬಿಡುಗಡೆ ಮಾಡಲಿದೆ.
PMV EaS-E ಕಾರ್
ದೇಶದ ಅತಿ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರ್ ಹೆಸರು ಹೇಳಿ ಅಂದ್ರೆ, ಮೊದಲು ನಿಮ್ಮ ನೆನಪಿಗೆ ಬರೋದು MG ಕಾಮೆಟ್ EV ಅಥವಾ ಟಾಟಾ ಟಿಯಾಗೊ EV. ಈ ಎರಡು ಕಾರುಗಳ ಬೆಲೆ ಕ್ರಮವಾಗಿ 7 ಲಕ್ಷ ಮತ್ತು 8 ಲಕ್ಷ ರೂ. ಈಗ ದೇಶದ ಅತಿ ಕಡಿಮೆ ಬೆಲೆಯ ಕಾರ್ ಇದಲ್ಲ ಅಂದ್ರೆ, ಇದಕ್ಕಿಂತ ಯಾವ ಕಾರ್ ಕಡಿಮೆ ಬೆಲೆಯದ್ದು ಅಂತ ನೀವು ಯೋಚಿಸುತ್ತೀರಿ.
ಈ ಕಾರನ್ನು ಮುಂಬೈ ಮೂಲದ ಸ್ಟಾರ್ಟ್-ಅಪ್ ಪರ್ಸನಲ್ ಮೊಬಿಲಿಟಿ ವೆಹಿಕಲ್ (PMV ಎಲೆಕ್ಟ್ರಿಕ್) ತಯಾರಿಸಿದೆ. ಇದರ ಹೆಸರು PMV EaS-E. ಈ ಎಲೆಕ್ಟ್ರಿಕ್ ಮೈಕ್ರೋಕಾರ್ ಬೆಲೆ ಸುಮಾರು 4 ರಿಂದ 5 ಲಕ್ಷ ರೂ. ವರೆಗೆ ಇರುತ್ತದೆ ಎಂದು ಕಂಪನಿ ತಿಳಿಸಿದೆ.
PMV EaS-E ಕಾರ್
ಇದು ಎರಡು ಸೀಟುಗಳ ವಿದ್ಯುತ್ ಕಾರ್. ಇದರ ಉದ್ದ ಕೇವಲ 2915 ಮಿ.ಮೀ. ಕೇವಲ 2000 ರೂ. ಟೋಕನ್ ಮೊತ್ತದೊಂದಿಗೆ ಬುಕಿಂಗ್ ಮಾಡಬಹುದು. ಒಮ್ಮೆ ಚಾರ್ಜ್ ಮಾಡಿದರೆ 160 ಕಿ.ಮೀ. ವರೆಗೆ ಚಲಿಸುತ್ತದೆ ಎಂದು ಕಂಪನಿ ಹೇಳಿದೆ.
ಕಂಪನಿ ಕಳೆದ 3 ವರ್ಷಗಳಿಂದ ಇದನ್ನು ಬುಕಿಂಗ್ ಮಾಡುತ್ತಿದೆ, ಆದರೆ ಇದರ ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಇದು ಮುಂದಿನ ವರ್ಷ ಅಂದರೆ 2025 ರೊಳಗೆ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
PMV EaS-E ವೈಶಿಷ್ಟ್ಯಗಳು
PMV EaS-E ಕಾರಿನ ವೈಶಿಷ್ಟ್ಯಗಳು
ಇದು ಸಣ್ಣ ಗಾತ್ರದ ವಿದ್ಯುತ್ ಕಾರ್, ಆದರೆ ಇದನ್ನು ಮೈಕ್ರೋ ವಿಭಾಗದಲ್ಲಿ ಇರಿಸಲಾಗಿದೆ. ಸಣ್ಣ ಜಾಗದಲ್ಲಿ ಎಲ್ಲಿ ಬೇಕಾದರೂ ಸುಲಭವಾಗಿ ಪಾರ್ಕ್ ಮಾಡಬಹುದು. ಟ್ರಾಫಿಕ್‌ನಲ್ಲಿ ಚಾಲನೆ ಮಾಡಲು EaS-E ಮೋಡ್ ಇದೆ. ಇದರಲ್ಲಿ ಡ್ರೈವಿಂಗ್ ಸೆನ್ಸ್ ಆಟೋ ಲಾಕ್ ಸೌಲಭ್ಯಗಳಿವೆ. ಈ ಕಾರಿನಲ್ಲಿ ಟ್ರಾನ್ಸ್‌ಮಿಷನ್‌ಗೆ ಕ್ಲಚ್, ಗೇರ್‌ಬಾಕ್ಸ್ ಇಲ್ಲ.
PMV EaS-E ಒಳಭಾಗ
ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಸ್ವಿಚ್ ಕಂಟ್ರೋಲ್ ಸ್ಟೀರಿಂಗ್ ಕಾರಿನ ಒಳಭಾಗದಲ್ಲಿದೆ. ಇದು ಕೇವಲ 2 ಪ್ರಯಾಣಿಕರ ಸೀಟುಗಳನ್ನು ಹೊಂದಿದೆ. ಕಾರಿಗೆ ಎರಡು ಬಾಗಿಲುಗಳಿವೆ. ಇದು ಬಜೆಟ್ ಸ್ನೇಹಿ ಕಾರ್, ಇದು ಕಡಿಮೆ ಶಕ್ತಿಯೊಂದಿಗೆ ದೀರ್ಘಾವಧಿಯ ಪ್ರಯಾಣವನ್ನು ಒದಗಿಸುತ್ತದೆ. ಇದರ ಮುಂಭಾಗ ಮತ್ತು ಹಿಂಭಾಗದಲ್ಲಿ ಎಲ್ಇಡಿ ಲೈಟ್ ವ್ಯವಸ್ಥೆ ಇದೆ. ಸುರಕ್ಷತೆ ಮತ್ತು ರಸ್ತೆಗಳಲ್ಲಿ ಉತ್ತಮ ಹಿಡಿತಕ್ಕಾಗಿ ಅಲಾಯ್ ವೀಲ್‌ಗಳಿವೆ.
PMV EaS-E ರಿಮೋಟ್ ವೈಶಿಷ್ಟ್ಯಗಳು
ಇದು ರಿಮೋಟ್ ಪಾರ್ಕಿಂಗ್ ಅಸಿಸ್ಟ್, ರಿಮೋಟ್ ಮೂಲಕ ನಿಯಂತ್ರಿಸಬಹುದಾದ AC, ಲೈಟ್, ವಿಂಡೋ ಮತ್ತು ಹಾರ್ನ್ ಅನ್ನು ಹೊಂದಿದೆ. ಇದನ್ನು OTA (ಓವರ್ ದಿ ಏರ್) ಮೂಲಕ ನವೀಕರಿಸಬಹುದು. ಇದರಿಂದಾಗಿ, ಇದು ಸಾಫ್ಟ್‌ವೇರ್ ನವೀಕರಣಗಳನ್ನು ಪಡೆಯುತ್ತದೆ.
ಅದೇ ಸಮಯದಲ್ಲಿ, ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗುತ್ತದೆ. ಕ್ರೂಸ್ ಕಂಟ್ರೋಲ್ ಜೊತೆಗೆ ರಿಜೆನೆರೇಟಿವ್ ಬ್ರೇಕಿಂಗ್ ಸಿಸ್ಟಮ್ ಇದೆ. ಇದರಲ್ಲಿ ದೊಡ್ಡ ವಿಂಡೋ ಗ್ಲಾಸ್‌ಗಳಿವೆ. ಇದನ್ನು 15-ಆಂಪಿಯರ್ ಸಾಕೆಟ್‌ನಿಂದ ಚಾರ್ಜ್ ಮಾಡಬಹುದು. ಇದರ ಚಾರ್ಜಿಂಗ್ ಸಮಯ ಸುಮಾರು 4 ಗಂಟೆಗಳು.