ಬಹುಬೇಡಿಕೆಯ ನಿಸಾನ್ ಮ್ಯಾಗ್ನೈಟ್ ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟ!

First Published Jan 19, 2021, 10:06 PM IST

ಭಾರತದಲ್ಲಿ ಸಬ್ ಕಾಂಪಾಕ್ಟ್ SUV ಕಾರುಗಳ ಪೈಕಿ ಭಾರಿ ಸಂಚಲನ ಸೃಷ್ಟಿಸಿರುವ ನಿಸಾನ್ ಮ್ಯಾಗ್ನೈಟ್ ಕಾರು, ದಿನದಿಂದ ದಿನಕ್ಕೆ ತನ್ನ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ. ಕೈಗೆಟುಕುವ ದರ, ಅತ್ಯಾಕರ್ಷಕ ಸೇರಿದಂತೆ ಹಲವು ಕಾರಣಗಳಿಂದ ಮ್ಯಾಗ್ನೈಟ್‌ನತ್ತ ಕಾರು ಪ್ರಿಯರು ಆಕರ್ಷಿತರಾಗುತ್ತಿದ್ದಾರೆ. ಇದೀಗ ಮ್ಯಾಗ್ನೈಟ್ ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟಗೊಂಡಿದೆ.