MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Automobile
  • Car News
  • ಹೊಸ ರೆನಾಲ್ಟ್ ಕ್ವಿಡ್ ಫೇಸ್‌ಲಿಪ್ಟ್ ಕಾರು ಜುಲೈ 3ಕ್ಕೆ ಲಾಂಚ್, ಕೇವಲ 4.3 ಲಕ್ಷ ರೂ.ಗೆ ಲಭ್ಯ

ಹೊಸ ರೆನಾಲ್ಟ್ ಕ್ವಿಡ್ ಫೇಸ್‌ಲಿಪ್ಟ್ ಕಾರು ಜುಲೈ 3ಕ್ಕೆ ಲಾಂಚ್, ಕೇವಲ 4.3 ಲಕ್ಷ ರೂ.ಗೆ ಲಭ್ಯ

ಜನಸಾಮಾನ್ಯರ ಕಾರು ಎಂದೇ ಗುರುತಿಸಿಕೊಂಡಿರುವ ರೆನಾಲ್ಟ್ ಕ್ವಿಡ್ ಇದೀಗ ಫೇಸ್‌ಲಿಫ್ಟ್ ವರ್ಶನ್ ಬಿಡುಗಡೆ ಮಾಡುತ್ತಿದೆ. ಹೊಸ ಕ್ವಿಡ್ ಕಾರಿನಲ್ಲಿ 5 ಅಪ್‌ಡೇಟ್‌ಗಳಿವೆ. ಜೊತೆಗೆ ಬೆಲೆಯೂ ಇತರ ಸಣ್ಣ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಪ್ರತಿಸ್ಪರ್ಧೆ ನೀಡುವಂತಿದೆ.

2 Min read
Author : Chethan Kumar
Published : Jun 28 2026, 04:10 PM IST
Share this Photo Gallery
  • FB
  • TW
  • Linkdin
  • Whatsapp
16
ಹಲವು ಹೊಸತನಗಳೊಂದಿಗೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್
Image Credit : Google

ಹಲವು ಹೊಸತನಗಳೊಂದಿಗೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್

ರೆನಾಲ್ಟ್ ಇತ್ತೀಚೆಗೆ ಡಸ್ಟರ್ ಕಾರು ರೀಲಾಂಚ್ ಮಾಡಿ ಭಾರಿ ಸದ್ದು ಮಾಡಿದೆ. ಇದೀಗ ಜನಸಾಮಾನ್ಯರ ಕಾರಾಗಿ ಗುರುತಿಸಿಕೊಂಡಿರುವ ಕ್ವಿಡ್ ಕಾರನ್ನು ಹೊಸ ರೂಪದಲ್ಲಿ ಬಿಡುಗಡೆ ಮಾಡುತ್ತಿದೆ. ಸಣ್ಣ ಕಾರುಗಳಲ್ಲಿ ಮಾರುತಿ ಸುಜುಕಿ ಪ್ರಾಬಲ್ಯಕ್ಕೆ ಶಾಕ್ ಕೊಟ್ಟ ಕಾರು ರೆನಾಲ್ಟ್ ಕ್ವಿಡ್. ಇದೀಗ ಹಲವು ಹೊಸತನಗಳೊಂದಿಗೆ, ಅತೀ ಕಡಿಮೆ ಬೆಲೆಯಲ್ಲಿ ಕ್ವಿಡ್ ಫೇಸ್‌ಲಿಫ್ಟ್ ಕಾರು ಬಿಡುಗಡೆಯಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಜುಲೈ 3ಕ್ಕೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್ ಲಾಂಚ್
Image Credit : our own

ಜುಲೈ 3ಕ್ಕೆ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್ ಲಾಂಚ್

ಜುಲೈ 3ರಂದು ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್ ಕಾರು ಬಿಡುಗಡೆಯಾಗುತಿದೆ.ಪ್ರಮುಖವಾಗಿ ಕ್ಲೂಸ್ಡ್ ಆಫ್ ಗ್ರಿಲ್ ಡಿಸೈನ್, ವೈ ಶೇಪ್ ಡಿಆರ್‌ಎಲ್, ವೈ ಶೇಪ್ ಟೈಲ್‌ಲ್ಯಾಂಪ್, ಫ್ರಂಟ್ ಹಾಗೂ ರೇರ್ ಬಂಪರ್‌ಗೆ ಹೊಸ ವಿನ್ಯಾಸ, ಹೊಸ ಶೈಲಿಯ ಅಲಾಯ್ ವ್ಹೀಲ್ಸ್, ಎಲ್‌ಇಡಿ ಹೆಡ್‌ಲ್ಯಾಂಪ್ಸ್ ಸೇರಿದಂತೆ ಹಲವು ಮಹತ್ವದ ಬದಲಾವಣೆ ಈ ಕಾರಿನಲ್ಲಿದೆ.

Related Articles

Related image1
Skoda Kylaq Car: ಕೈಗೆಟಕುವ ಬೆಲೆಯೆಂದು 'ಸ್ಕೋಡಾ ಕೈಲಾಕ್' ಕಾರು ಬುಕಿಂಗ್‌ಗೂ ಮುನ್ನ ಈ ರಹಸ್ಯ ತಿಳಿಯಿರಿ!
Related image2
ಕೈಗೆಟುಕುವ ರೆನಾಲ್ಟ್ ಕೈಗರ್ ಕಾರಿನ ಬೆಲೆ 1.46 ಲಕ್ಷ ರೂ ಇಳಿಕೆ, 2026ರ ಹೊಸ ಮಾಡೆಲ್ ಖರೀದಿ ಸುಲಭ
36
ಕಾರಿನ ಕ್ಯಾಬಿನ್ ಸೇರಿದಂತೆ ಇತರ ಫೀಚರ್ ಅಪ್‌ಡೇಟ್
Image Credit : our own

ಕಾರಿನ ಕ್ಯಾಬಿನ್ ಸೇರಿದಂತೆ ಇತರ ಫೀಚರ್ ಅಪ್‌ಡೇಟ್

ಕಾರಿನ ಡ್ಯಾಶ್‌ಬೋರ್ಡ್ ರಿಡಿಸೈನ್ ಮಾಡಲಾಗಿದೆ. 10 ಇಂಚಿನ ಇನ್ಫೊಟೈನ್ಮೆಂಟ್ ಸಿಸ್ಟಮ್, ಸಂಪೂರ್ಣ ಡಿಜಿಟಲ್ ಇನ್ಸ್‌ಸ್ಟ್ರುಮೆಂಟ್ ಕ್ಲಸ್ಟರ್, ನೂತನ ಸ್ಟೀರಿಂಗ್ ವ್ಹೀಲ್, ಆಕರ್ಷಕ ಸೀಟುಗಳು ಸೇರಿದಂತೆ ಹಲವು ಹೊಸತನಗಳು ಈ ಕಾರಿನಲ್ಲಿದೆ. ಇದೇ ಕಾರಣದಿಂದ ಇದೀಗ ಹೊಸ ಕ್ವಿಡ್‌ಗಾಗಿ ಹಲವು ಗ್ರಾಹಕರು ಕಾಯುತ್ತಿದ್ದಾರೆ.

46
ಕ್ವಿಡ್ ಫೇಸ್‌ಲಿಫ್ಟ್ ಕಾರಿನ ಬೆಲೆ
Image Credit : stockPhoto

ಕ್ವಿಡ್ ಫೇಸ್‌ಲಿಫ್ಟ್ ಕಾರಿನ ಬೆಲೆ

ಹೊಸ ರೆನಾಲ್ಟ್ ಕ್ವಿಡ್ ಫೇಸ್‌ಲಿಫ್ಟ್ ಕಾರಿನ ಬೆಲೆ 4.30 ಲಕ್ಷ - 5.88 ಲಕ್ಷ ರೂಪಾಯಿಂದ ಆರಂಭಗೊಳ್ಳುವ ಸಾಧ್ಯತೆ ಇದೆ. ಸದ್ಯಕ್ಕೆ ಬೆಲೆ ಹಾಗೂ ಫೀಚರ್ ಕುರಿತ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಸದ್ಯ ಮಾರುಕಟ್ಟೆಯಲ್ಲಿರುವ ಕ್ವಿಡ್ ಕಾರಿಗೂ ಬಿಡುಗಡೆಯಾಗಲಿರುವ ಕ್ವಿಡ್ ಫೇಸ್‌ಲಿಫ್ಟ್ ಕಾರಿನ ಬೆಲೆಯಲ್ಲಿ ಕೆಲ ವ್ಯತ್ಯಾಸಗಳಾಗುವ ಸಾಧ್ಯತೆ ಇದೆ.

56
ಮಾರುತಿ ಕೆ10, ಸೆಲೆರಿಯೋ ಕಾರಿಗೆ ಪ್ರತಿಸ್ಪರ್ಧಿ
Image Credit : Google

ಮಾರುತಿ ಕೆ10, ಸೆಲೆರಿಯೋ ಕಾರಿಗೆ ಪ್ರತಿಸ್ಪರ್ಧಿ

ರೆನಾಲ್ಡ್ ಕ್ವಿಡ್ ಫೇಸ್‌ಲಿಫ್ಟ್ ಕಾರು ಈಗಾಗಲೇ ಭಾರಿ ಕುತೂಹಲ ಮೂಡಿಸಿದೆ. ಮಾರುಕಟ್ಟೆಯಲ್ಲಿರುವ ಮಾರುತಿ ಕೆ10 ಹಾಗೂ ಮಾರುತಿ ಸೆಲೆರಿಯೋ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಕ್ವಿಡ್ ಹೊಸ ರೂಪದಲ್ಲಿ ಭಾರಿ ಬೇಡಿಕೆ ಪಡೆದುಕೊಳ್ಳುವ ಸಾಧ್ಯತೆ ಇದೆ. ಇದರ ವಿನ್ಯಾಸ, ಕಾಂಪಾಕ್ಟ್ ಹ್ಯಾಚ್‌ಬ್ಯಾಕ್ ಶೈಲಿ ಸೇರಿದಂತೆ ಹಲವು ಕಾರಣಗಳಿಂದ ಕ್ವಿಡ್ ಫೇಸ್‌ಲಿಪ್ಟ್ ಜನಸಾಮಾನ್ಯರ ಮನ ಗೆಲ್ಲಲಿದೆ.

66
ಕ್ವಿಡ್ ಎಂಜಿನ್ ಹಾಗೂ ಪರ್ಫಾಮೆನ್ಸ್
Image Credit : Google

ಕ್ವಿಡ್ ಎಂಜಿನ್ ಹಾಗೂ ಪರ್ಫಾಮೆನ್ಸ್

ಕ್ವಿಡ್ ಫೇಸ್‌ಲಿಫ್ಟ್ ಕಾರಿನ ಎಂಜಿನ್‌ನಲ್ಲಿ ಹೆಚ್ಚಿನ ಬದಲಾವಣೆಯಾಗುವ ಸಾಧ್ಯತೆ ಇಲ್ಲ. ಸದ್ಯ ಕ್ವಿಡ್ ಕಾರಿನಲ್ಲಿರುವ 1.0 ಲಿಟರ್, 3 ಸಿಲಿಂಡರ್, ನ್ಯಾಚುರಲ್ ಆ್ಯಸ್ಪೈರ್ಡ್ ಪೆಟ್ರೋಲ್ ಎಂಜಿನ್ ಇರಲಿದೆ. 5 ಸ್ಪೀಡ್ ಮ್ಯಾನ್ಯುಯೆಲ್ ಹಾಗೂ 5 ಸ್ಪೀಡ್ ಎಎಂಟಿ ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿರಲಿದೆ. 6 ಏರ್‌ಬ್ಯಾಗ್ ಸ್ಟಾಂಡರ್ಡ್ ಮಾಡುವ ಸಾಧ್ಯತೆ ಇದೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಕಾರುಗಳು
ಆಟೋಮೊಬೈಲ್
ಭಾರತ

Latest Videos
Recommended Stories
Recommended image1
Most Used Car In India: ದೇಶದಲ್ಲಿ ಅತಿ ಹೆಚ್ಚು ಜನ ಖರೀದಿಸೋ ಸೆಕೆಂಡ್ ಹ್ಯಾಂಡ್ ಕಾರು ಯಾವುದು ಗೊತ್ತಾ?
Recommended image2
ಆಫ್-ರೋಡಿಂಗ್ ಪ್ರಿಯರಿಗೆ ಹಬ್ಬದ ಸುದ್ದಿ; ರಗಡ್ ಲುಕ್, ಪವರ್‌ಫುಲ್ ಬಾಡಿಯೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡ್ತಿವೆ 3 ಹೊಸ ದೈತ್ಯ SUV
Recommended image3
ಆಡಿ ಮತ್ತು ಪೋರ್ಷೆ ತಯಾರಿಕಾ ಕಂಪೆನಿ ವೋಕ್ಸ್‌ವ್ಯಾಗನ್‌ನಲ್ಲಿ 1ಲಕ್ಷ ನೌಕರರ ವಜಾ!: 4 ಕಾರ್ಖಾನೆಗಳ ಮುಚ್ಚಲು ನಿರ್ಧಾರ!
Related Stories
Recommended image1
Skoda Kylaq Car: ಕೈಗೆಟಕುವ ಬೆಲೆಯೆಂದು 'ಸ್ಕೋಡಾ ಕೈಲಾಕ್' ಕಾರು ಬುಕಿಂಗ್‌ಗೂ ಮುನ್ನ ಈ ರಹಸ್ಯ ತಿಳಿಯಿರಿ!
Recommended image2
ಕೈಗೆಟುಕುವ ರೆನಾಲ್ಟ್ ಕೈಗರ್ ಕಾರಿನ ಬೆಲೆ 1.46 ಲಕ್ಷ ರೂ ಇಳಿಕೆ, 2026ರ ಹೊಸ ಮಾಡೆಲ್ ಖರೀದಿ ಸುಲಭ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved