ಬಿಡುಗಡೆಯಾಗುತ್ತಿದೆ ಕಡಿಮೆ ಬೆಲೆಯ 7 ಸೀಟರ್ ಕಾರು, ಹೈಬ್ರಿಡ್-ಇವಿ ಮಾದರಿಯಲ್ಲಿ ಲಭ್ಯ
ಟೊಯೊಟಾ, ಮಾರುತಿ, ಕಿಯಾ, ರೆನಾಲ್ಟ್, ನಿಸ್ಸಾನ್‌ನಿಂದ 5 ಹೊಸ ಬಜೆಟ್ ಬೆಲೆಯ 7 ಸೀಟರ್ ಕಾರುಗಳು ಭಾರತೀಯ ಮಾರುಕಟ್ಟೆಗೆ ಬರಲಿವೆ. ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳನ್ನು ಹೊಂದಿರುವ ಈ ಕಾರುಗಳು ಸಾಮಾನ್ಯ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುತ್ತವೆ.

ಕಡಿಮೆ ಬೆಲೆಯಲ್ಲಿ 7 ಸೀಟರ್ ಕಾರುಗಳು! ಹೈಬ್ರಿಡ್, ಎಲೆಕ್ಟ್ರಿಕ್ ವೇರಿಯಂಟ್‌ಗಳಲ್ಲಿ
ದೊಡ್ಡ ಕಾರು ಅಂದರೆ 7 ಸೀಟರ್ ಕಾರುಗಳಿಗೆ ಭಾರತದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಬಹುತೇಕ ಕಂಪನಿಗಳು 7 ಸೀಟರ್ ಅಥವಾ ಎಂಪಿವಿ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಎಂಪಿವಿಗಳು ಅಥವಾ 7 ಸೀಟರ್ ಕುಟುಂಬ ಕಾರುಗಳು ಯಾವಾಗಲೂ ಅವುಗಳ ವಿಶಾಲವಾದ ಕ್ಯಾಬಿನ್‌ನಿಂದ ಫೇಮಸ್. ಟೊಯೊಟಾ ಇನ್ನೋವಾ ಕ್ರಿಸ್ಟಾ, ಮಾರುತಿ ಸುಜುಕಿ ಎರ್ಟಿಗಾ, ಕಿಯಾ ಕ್ಯಾರೆನ್ಸ್‌ನಂತಹ ಸೀಮಿತ ಆಯ್ಕೆಗಳಿವೆ.
ಕಡಿಮೆ ಬೆಲೆಯಲ್ಲಿ 7 ಸೀಟರ್ ಕಾರುಗಳು
ಮಾರುತಿ ಮಿನಿ ಎಂಪಿವಿ
ಮಾರುತಿ ಸುಜುಕಿ ಭಾರತಕ್ಕಾಗಿ ಹೊಸ ಮಿನಿ ಎಂಪಿವಿಯನ್ನು ತರಲು ಪ್ಲಾನ್ ಮಾಡುತ್ತಿದೆ. ಶೀಘ್ರದಲ್ಲೇ ಕಾನ್ಸೆಪ್ಟ್ ಅನಾವರಣಗೊಳ್ಳಲಿದೆ. ಈ ಕಾರು ಹೊಸ ಸಂಚಲನ ಸೃಷ್ಟಿಸುವ ಸಾಧ್ಯತೆ ಇದ.. ಕಾರಣ ಹೊಸ ಮಾರುತಿ ಕಾರುಗಳು ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಬರುತ್ತವೆ. ಮಾರುತಿ ಬ್ರ್ಯಾಂಡ್ ಬೆಲೆ ಯಾವತ್ತೂ ಜನಸಮಾನ್ಯರ ಬೆಲೆಯಾಗಿರುತ್ತದೆ.
ಕಿಯಾ ಕಾರುಗಳು
ಕಿಯಾ ಕ್ಯಾರೆನ್ಸ್ ಫೇಸ್‌ಲಿಫ್ಟ್ / ಕ್ಯಾರೆನ್ಸ್ ಇವಿ
ಕಿಯಾ ಕ್ಯಾರೆನ್ಸ್ ಫೇಸ್‌ಲಿಫ್ಟ್ 2025 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇದರಲ್ಲಿ ಹೊಸ ಅಲಾಯ್ ವೀಲ್‌ಗಳು ಇರಲಿವೆ. ಕಿಯಾ ಕ್ಯಾರೆನ್ಸ್ ಈಗಾಗಲೇ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಹೆಚ್ಚು ವಿಶಾಲವಾದ ಸ್ಥಳವಕಾಶ ಲಭ್ಯವಿದೆ. ಇದೀಗ ಕ್ಯಾರೆನ್ಸ್ ಫೇಸ್‌ಲಿಫ್ಟ್ ಹೊಸ ಫೀಚರ್ ಜೊತೆಗೆ ಬಿಡುಗಡಯಾಗುತ್ತಿದೆ.
ಹೆಚ್ಚು ಮೈಲೇಜ್ ನೀಡುವ ಕಾರುಗಳು
ರೆನಾಲ್ಟ್ ಟ್ರೈಬರ್ ಇವಿ
2025 ಅಥವಾ 2026 ರಲ್ಲಿ ಟ್ರೈಬರ್ ಕಾರಿನಲ್ಲಿ ರೆನಾಲ್ಟ್ ಇಂಡಿಯಾ ನವೀಕರಣ ನೀಡಲಿದೆ. ಹೊಸ ವಿನ್ಯಾಸದೊಂದಿಗೆ ಈ ಮಾಡೆಲ್ ಬರಲಿದೆ. ಭಾರತದಲ್ಲಿ ಲಭ್ಯವಿರುವ ಅತೀ ಕಡಿಮೆ ಬೆಲೆಯ 7 ಸೀಟರ್ ಕಾರು ಅನ್ನೋ ಹೆಗ್ಗಳಿಕೆಗೆ ಟ್ರೈಬರ್ ಪಾತ್ರವಾಗಿದೆ. ರೆನಾಲ್ಟ್ ಟ್ರೈಬರ್ ಕಾರು ಹೊಸ ರೂಪದಲ್ಲಿ ಬಿಡುಗಡೆಯಾಗುತ್ತಿದೆ.ಪ್ರಮುಖವಾಗಿ ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಮಾದರಿಯಲ್ಲಿ ಲಭ್ಯವಾಗಲಿದೆ.
ಕಡಿಮೆ ಬೆಲೆಯಲ್ಲಿ ಫ್ಯಾಮಿಲಿ ಕಾರುಗಳು
ನಿಸ್ಸಾನ್ ಎಲೆಕ್ಟ್ರಿಕ್ ಕಾರ್
ನಿಸ್ಸಾನ್ ಭಾರತೀಯ ಮಾರುಕಟ್ಟೆಗಾಗಿ ಎಂಪಿವಿಯನ್ನು ತರಲು ಪ್ಲಾನ್ ಮಾಡಿದೆ. ಇದು ರೆನಾಲ್ಟ್ ಟ್ರೈಬರ್ ಅನ್ನು ಆಧರಿಸಿದೆ. ಟ್ರೈಬರ್ ರೀತಿಯಲ್ಲಿ ನಿಸಾನ್ 7 ಸೀಟರ್ ಬಿಡುಗಡೆ ಮಾಡಲು ಸಜ್ಜಾಗಿದೆ. ಎಸ್‌ಯುವಿ ಕಾರುಗಳ ಪೈಕಿ ಮ್ಯಾಗ್ನೈಟ್ ಬಿಡುಗಡೆ ಮಾಡಿ ಗೆದ್ದಿರುವ ನಿಸಾನ್ ಇದೀಗ ಅದೇ ರೀತಿ ಕಡಿಮೆ ಬೆಲೆಯಲ್ಲಿ 7 ಸೀಟರ್ ಕಾರು ಬಿಡುಗಡೆ ಮಾಡಲಿದೆ.