- Home
- Automobile
- Car News
- ಕೈಗೆಟುಕುವ ದರದ ಮಾರುತಿ ಸುಜುಕಿ ಎಲೆಕ್ಟ್ರಿಕ್ ವಿಟಾರಾ ಕಾರು ಡಿ.2ಕ್ಕೆ ಬಿಡುಗಡೆ, 500KM ಮೈಲೇಜ್
ಕೈಗೆಟುಕುವ ದರದ ಮಾರುತಿ ಸುಜುಕಿ ಎಲೆಕ್ಟ್ರಿಕ್ ವಿಟಾರಾ ಕಾರು ಡಿ.2ಕ್ಕೆ ಬಿಡುಗಡೆ, 500KM ಮೈಲೇಜ್
ಕೈಗೆಟುಕುವ ದರದ ಮಾರುತಿ ಸುಜುಕಿ ಎಲೆಕ್ಟ್ರಿಕ್ ವಿಟಾರಾ ಕಾರು ಡಿ.2ಕ್ಕೆ ಬಿಡುಗಡೆ, 500KM ಮೈಲೇಜ್ ನೀಡಲಿದೆ. ಹಲವು ವಿಶೇಷತೆ, ಆಕರ್ಷಕ ವಿನ್ಯಾಸದ ಮಾರುತಿ ಸುಜುಕಿಯ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಮೋಡಿ ಮಾಡಲು ಸಜ್ಜಾಗಿದೆ.

ಭಾರತದಲ್ಲಿ ಮಾರುತಿ ಸುಜುಕಿ ಎಲೆಕ್ಟ್ರಿಕ್ ಕಾರು
ಭಾರತದಲ್ಲಿ ಗರಿಷ್ಠ ಮಾರಾಟ ಹಾಗೂ ಅತೀ ಹೆಚ್ಚು ಮಾರುಕಟ್ಟೆ ಪಾಲು ಹೊಂದಿರುವ ಕಾರು ಮಾರುತಿ ಸುಜುಕಿ. ಆದರೆ ಎಲೆಕ್ಟ್ರಿಕ್ ಕಾರುಗಳ ಪೈಕಿ ಟಾಟಾ ಮೋಟಾರ್ಸ್ ಸೇರಿದಂತೆ ಇತರ ಇವಿ ಕಾರುಗಳು ಭಾರತದ ಮಾರುಕಟ್ಟೆ ಆಕ್ರಮಿಸಿಕೊಂಡಿದೆ. ಹಲವು ಪ್ರಯತ್ನಗಳ ಬಳಿಕ ಇದೀಗ ಮಾರುತಿ ಸುಜುಕಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಭರ್ಜರಿಯಾಗಿ ಎಂಟ್ರಿಕೊಡುತ್ತಿದೆ.
ಡಿ.2ಕ್ಕೆ ಇ ವಿಟಾರಾ ಕಾರಿನ ಮೋಡಿ
ಭಾರತದಲ್ಲಿ ಮಾರುತಿ ಸುಜುಕಿ ಇ ವಿಟಾರ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ಡಿಸೆಂಬರ್ 2ರಂದು ಇ ವಿಟಾರ ಕಾರು ಬಿಡುಗಡೆಯಾಗುತ್ತಿದೆ. ಹಲವು ವಿಶೇಷತೆಗಳ ಈ ಕಾರು ಕೈಗೆಟುಕುವ ದರದಲ್ಲಿ ಬಿಡುಗಡೆಯಾಗುತ್ತಿದೆ. ಜೊತೆಗೆ ಅತ್ಯಾಕರ್ಷಕ ವಿನ್ಯಾಸ, ಹಲವು ಬಣ್ಣದಲ್ಲಿ ಲಭ್ಯವಿದೆ.
ಗರಿಷ್ಠ ಮೈಲೇಜ್
ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಇ ವಿಟಾರಾ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ ಗರಿಷ್ಠ 500 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ. 49kWh ಹಾಗೂ 61kWh ಬ್ಯಾಟರಿ ಪ್ಯಾಕ್ ಆಯ್ಕೆಗಳು ಲಭ್ಯವಿದೆ. BEV ಪ್ಲಾಟ್‌ಫಾರ್ಮ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಇ ವಿಟಾರ ಕಾರು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ.
ಡ್ಯುಯೆಲ್ ಟೋನ್ ಥೀಮ್
ಮಾರುತಿ ಸುಜುಕಿಯ ಎಲೆಕ್ಟ್ರಿಕ್ ಕಾರು ಹೊಸ ಅವತಾರದಲ್ಲಿ ರಸ್ತೆಗೆ ಇಳಿಯುತ್ತಿದೆ. ಡ್ಯುಯೆಲ್ ಟೋನ್ ಥೀಮ್, LED ಹೆಡ್‌ಲ್ಯಾಂಪ್ಸ್, 3 ಪಾಯಿಂಟ್ಸ್ ಮ್ಯಾಟ್ರಿಕ್ಸ್ LED DRLs, 18 ಇಂಚಿನ ಅಲೋಯ್ ವ್ಹೀಲ್, LED ಟೈಲ್ ಲ್ಯಾಂಪ್ಸ್ ಸೇರಿದಂತೆ ಪ್ರಮುಖ ಫೀಚರ್ಸ್‌ಗಳಿಂದ ಇ ವಿಟಾರಾ ಕಾರಿನ ಆಕರ್ಷಣೆ ಹೆಚ್ಚಾಗಿದೆ.
ಡ್ಯುಯೆಲ್ ಟೋನ್ ಥೀಮ್
ಇ ವಿಟಾರ ಕಾರಿನ ಬೆಲೆ
ಮಾರುತಿ ಸುಜುಕಿಯ ಹೊಸ ಇ ವಿಟಾರ ಕಾರಿನ ಬೆಲೆ ಬಹಿರಂಗ ಮಾಡಿಲ್ಲ. ಆದರೆ ಮೂಲಗಳ ಪ್ರಕಾರ 18 ಲಕ್ಷ ರೂಪಾಯ ಆಸುಪಾಸಿನಲ್ಲಿರಲಿದೆ ಎಂದು ಅಂದಾಜಿಸಲಾಗಿದೆ. ಸುಲಭ ಚಾರ್ಜಿಂಗ್ ಹಾಗೂ ಅತೀ ವೇಗದ ಚಾರ್ಜಿಂಗ್ ಆಯ್ಕೆ ನೀಡಲಾಗಿದೆ. ಇದರಿಂದ ಗ್ರಾಹಕರು ಚಾರ್ಜಿಂಗ್‌ಗಾಗಿ ಹೆಚ್ಚಿನ ಸಮಯ ಕಾಯಬೇಕಿಲ್ಲ.