- Home
- Automobile
- Car News
- ಸ್ವಿಫ್ಟ್, ವ್ಯಾಗನ್ಆರ್, ಬ್ರೆಜಾ ಅಲ್ಲ, ಮಾರುತಿ ಸುಜುಕಿ ಈ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು
ಸ್ವಿಫ್ಟ್, ವ್ಯಾಗನ್ಆರ್, ಬ್ರೆಜಾ ಅಲ್ಲ, ಮಾರುತಿ ಸುಜುಕಿ ಈ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು
ಸ್ವಿಫ್ಟ್, ವ್ಯಾಗನ್ಆರ್, ಬ್ರೆಜಾ ಅಲ್ಲ, ಮಾರುತಿ ಸುಜುಕಿ ಈ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು, ಸೆಪ್ಟೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿಯಲ್ಲಿ ಗರಿಷ್ಠ ಮಾರಾಟ ಕಾರುಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಪಡೆದಿದೆ. ಇದರ ಬೆಲೆ 6.25 ಲಕ್ಷ ರೂ ಮಾತ್ರ.

ಮಾರುತಿ ಸುಜುಕಿ ಕಾರು ದಾಖಲೆ
ಮಾರುತಿ ಸುಜುಕಿ ಕಾರು ದಾಖಲೆ
ಜಿಎಸ್‌ಟಿ ಕಡಿತದ ಬಳಿಕ ಭಾರತದಲ್ಲಿ ಕಾರು ಮಾರಾಟದಲ್ಲಿ ದಾಖಲೆ ಸೃಷ್ಟಿಯಾಗಿದೆ. ಹೊಸ ಕಾರು ಖರೀದಿ ಸಂಖ್ಯೆ ಹೆಚ್ಚಾಗಿದೆ. ವಿಶೇಷ ಅಂದರೆ ಬಹುತೇಕ ಎಲ್ಲಾ ತಿಂಗಳಲ್ಲಿ ವ್ಯಾಗನ್ಆರ್, ಬ್ರೆಜಾ, ಸ್ವಿಫ್ಟ್ ಕಾರುಗಳು ಮಾರಾಟದಲ್ಲಿ ಮೊದಲ ಸ್ಥಾನದಲ್ಲಿರುತ್ತಿತ್ತು. ಆದರೆ ಸೆಪ್ಟೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ ಕಾರು ಮಾರಾಟದಲ್ಲಿ ದಾಖಲೆ ಸೃಷ್ಟಿಯಾಗಿದೆ. ಬ್ರೆಜಾ, ವ್ಯಾಗನ್ಆರ್, ಸ್ವಿಫ್ಟ್, ಬಲೆನೋ ಕಾರುಗಳನ್ನು ಮಾರುತಿ ಸುಜುಕಿಯ ಈ ಕಾರು ಹಿಂದಿಕ್ಕಿದೆ.
ಮಾರುತಿ ಸ್ವಿಫ್ಟ್ ಡಿಸೈರ್‌ಗೆ ಮುಗಿಬಿದ್ದ ಗ್ರಾಹಕರು
ಮಾರುತಿ ಸ್ವಿಫ್ಟ್ ಡಿಸೈರ್‌ಗೆ ಮುಗಿಬಿದ್ದ ಗ್ರಾಹಕರು
ಸೆಪ್ಟೆಂಬರ್ ತಿಂಗಳಲ್ಲಿ ಗ್ರಾಹಕರು ಮಾರುತಿ ಸಿಫ್ಟ್ ಡಿಸೈರ್ ಕಾರು ಖರೀದಿಗೆ ಮುಗಿಬಿದ್ದಿದ್ದಾರೆ. 2024ರ ಮಾಡೆಲ್ ಡಿಸೈರ್ ಕಾರು ಹಲವು ಬದಲಾವಣೆಯೊಂದಿಗೆ ಲಾಂಚ್ ಆಗಿತ್ತು. ಆಕರ್ಷಕ ವಿನ್ಯಾಸ, ಫೀಚರ್ ಮಾತ್ರವಲ್ಲ, ಈ ಕಾರು ಮಾರುತಿ ಸುಜುಕಿಯ ಮೊದಲ 5 ಸ್ಟಾರ್ ಸುರಕ್ಷತೆಯ ಕಾರಾಗಿದೆ. ಹೀಗಾಗಿ ಇದೀಗ ಜನರು ಡಿಸೈರ್ ಕಾರು ಖರೀದಿಗೆ ಮುಗಿಬಿದ್ದಿದ್ದಾರೆ.
ಸೆಪ್ಟೆಂಬರ್ ತಿಂಗಲ್ಲಿ 20 ಸಾವಿರ ಡಿಸೈರ್ ಕಾರು ಮಾರಾಟ
ಸೆಪ್ಟೆಂಬರ್ ತಿಂಗಲ್ಲಿ 20 ಸಾವಿರ ಡಿಸೈರ್ ಕಾರು ಮಾರಾಟ
ಸೆಪ್ಟೆಂಬರ್ ತಿಂಗಳಲ್ಲಿ ಮಾರುತಿ ಡಿಸೈರ್ ಕಾರು 20,038 ಕಾರುಗಳು ಮಾರಾಟವಾಗಿದೆ. 2024ರ ಸೆಪ್ಟೆಂಬರ್ ತಿಂಗಳಲ್ಲಿ ಇದೇ ಡಿಸೈರ್ ಕಾರು 10853 ಕಾರು ಮಾರಾಟವಾಗಿತ್ತು. ಈ ಮೂಲಕ ಶೇಕಡಾ 84.63ರಷ್ಟು ಪ್ರಗತಿ ಸಾಧಿಸಿದೆ. ಮಾರುತಿ ಕಾರುಗಳ ಪೈಕಿ ಸ್ವಿಫ್ಟ್ ಕಾರು 15,547 ಕಾರುಗಳು ಮಾರಾಟವಾಗುವ ಮೂಲಕ ಎರಡನೇ ಸ್ಥಾನ ಪಡೆದುಕೊಂಡಿದೆ.
ಸೆಪ್ಟೆಂಬರ್ ತಿಂಗಳ ಮಾರುತಿ ಸುಜುಕಿ ಕಾರು ಮಾರಾಟ
ಸೆಪ್ಟೆಂಬರ್ ತಿಂಗಳ ಮಾರುತಿ ಸುಜುಕಿ ಕಾರು ಮಾರಾಟ
ಮಾರುತಿ ಸುಜುಕಿ ಡಿಸೈರ್: 20,038
ಮಾರುತಿ ಸುಜುಕಿ ಸ್ವಿಫ್ಟ್ :15,547
ಮಾರುತಿ ಸುಜುಕಿ ವ್ಯಾಗನ್ಆರ್ : 15,338
ಮಾರುತಿ ಸುಜುಕಿ ಫ್ರಾಂಕ್ಸ್ : 13,767
ಮಾರುತಿ ಸುಜುಕಿ ಬಲೆನೋ : 13,173
ಮಾರುತಿ ಸುಜುಕಿ ಎರ್ಟಿಗಾ : 12,115
ಮಾರುತಿ ಸುಜುಕಿ ಬ್ರೆಜಾ :10,173
ಸೆಪ್ಟೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ
ಸೆಪ್ಟೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ
ಸೆಪ್ಟೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ ಗರಿಷ್ಠ ಮಾರಾಟ ದಾಖಲೆ ಬರೆದಿದೆ. ಒಟ್ಟು 1,32,821 ಕಾರುಗಳು ಮಾರಾಟವಾಗಿದೆ. ವಿಶೇಷ ಅಂದರೆ ಇತ್ತೀಚೆಗೆ ಬಿಡುಗಡೆಯಾದ ಮಾರುತಿ ಸುಜುಕಿ ವಿಕ್ಟೋರಿಸ್ ಕಾರು 4,261 ಕಾರು ಮಾರಾಟವಾಗಿದೆ. ವಿಕ್ಟೋರಿಸ್ ಕಾರು ಕೂಡ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದಿದೆ.