ಮಾರುತಿ ಸುಜುಕಿ ವಿಕ್ಟೋರಿಸ್ ಕಾರಿನ ಬೆಲೆಯಲ್ಲಿ ಮಹತ್ವದ ಬದಲಾವಣೆ, ಇಲ್ಲಿದೆ ಹೊಸ ದರ ಪಟ್ಟಿ
ಮಾರುತಿ ಸುಜುಕಿ ವಿಕ್ಟೋರಿಸ್ ಕಾರಿನ ಬೆಲೆಯಲ್ಲಿ ಮಹತ್ವದ ಬದಲಾವಣೆ, ಇಲ್ಲಿದೆ ಹೊಸ ದರ ಪಟ್ಟಿ ಬಿಡುಗಡೆ ಮಾಡಿದೆ. ಮಾರುತಿ ಸುಜುಕಿ ವಿಕ್ಟೋರಿಸ್ ಕಾರಿಗೆ ಭಾರಿ ಬೇಡಿಕೆ ಹೆಚ್ಚಾಗಿರುವ ಕಾರಣ ಇದೀಗ ಬೆಲೆ ಪರಿಷ್ಕರಿಸಲಾಗಿದೆ.

ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ಬೆಲೆ ಪರಿಷ್ಕರಣೆ
ನವರಾತ್ರಿ ಹಾಗೂ ದೀಪಾವಳಿ ಹಬ್ಬಕ್ಕೆ ಮಾರುತಿ ಸುಜುಕಿ ದಾಖಲೆ ಪ್ರಮಾಣದಲ್ಲಿ ಕಾರು ಮಾರಾಟ ಮಾಡಿದೆ. ಈ ಪೈಕಿ ಇತ್ತೀಚೆಗೆ ಬಿಡುಗಡೆಯಾದ ವಿಕ್ಟೋರಿಸ್ ಕಾರು ಭಾರಿ ಬೇಡಿಕೆ ಪಡೆದಿದೆ. 5 ಸ್ಟಾರ್ ರೇಟಿಂಗ್, ಆಕರ್ಷಕ ವಿನ್ಯಾಸ, ಹೊಸ ಫೀಚರ್ ಸೇರಿದಂತೆ ಹಲವು ವಿಶೇಷತೆಗಳನ್ನು ಈ ಕಾರು ಹೊಂದಿಗೆ. ಬೇಡಿಕೆ ಹೆಚ್ಚಾಗುತ್ತಿದ್ದಂತೆ ಇದೀಗ ಮಾರುತಿ ಸುಜುಕಿ ವಿಕ್ಟೋರಿಸ್ ಕಾರಿನ ಬೆಲೆ ಏರಿಕೆಯಾಗಿದೆ.
ವಿಕ್ಟೋರಿಸ್ ಕಾರಿನ ಕೆಲ ಮಾಡೆಲ್ ಬೆಲೆ ಏರಿಕೆ
ಸೆಪ್ಟೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ಬಿಡುಗಡೆಯಾಗಿದೆ. ಬಳಿಕ ಭಾರಿ ಬುಕಿಂಗ್ ಪಡೆದುಕೊಂಡಿದೆ. ಇದೀಗ ವಿಕ್ಟೋರಿಸ್ ಕಾರುಗಳ ಪೈಕಿ ವಿಕ್ಟೋರಿಸ್ ZXi+ (O) ಸಿಕ್ಸ್ ಸ್ಪೀಡ್ ಮಾನ್ಯುಯೆಲ್ ಹಾಗೂ ZXi+ (O) ಆಟೋಮ್ಯಾಟಿಕ್ ಟ್ರಿಮ್ಸ್ ಕಾರುಗಳ ಬೆಲೆ ಏರಿಕೆ ಮಾಡಲಾಗಿದೆ. ಎರಡೂ ಕಾರುಗಳ ಮೇಲೆ 15,000 ರೂಪಾಯಿ ಏರಿಕೆಯಾಗಿದೆ.
ಮಾರುತಿ ವಿಕ್ಟೋರಿಸ್ ಕಾರಿನ ಬೆಲೆ ಎಷ್ಟು?
ಅತ್ಯಾಕರ್ಷಕ ಮಾರುತಿ ವಿಕ್ಟೋರಿಸ್ ಕಾರಿನ ಆರಂಭಿಕ ಬೆಲೆ 10.50 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಈ ಪೈಕಿ ZXi+ (O) ಮಾನ್ಯುಯೆಲ್ ಹಾಗೂ ZXi+ (O) ಆಟೋಮ್ಯಾಟಿಕ್ ಕಾರಿನ ಬೆಲೆ ಮಾತ್ರ ಏರಿಕೆಯಾಗಿದೆ. ಇನ್ನುಳಿದ ವೇರಿಯೆಂಟ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಮಾರುತಿ ವಿಕ್ಟೋರಿಸ್ ಕಾರಿನ ಬೆಲೆ
ಅಕ್ಟೋಬರ್ ಆರಂಭದಲ್ಲೇ 25,000 ಬುಕಿಂಗ್
ಸೆಪ್ಟೆಂಬರ್ ಅಂತ್ಯದಲ್ಲಿ ವಿಕ್ಟೋರಿಸ್ ಕಾರು ಬಿಡುಗಡೆಯಾಗಿದೆ. ಅಕ್ಟೋಬರ್ ಆರಂಭದ ವಾರದಲ್ಲೇ ವಿಕ್ಟೋರಿಸ್ 25,000 ಬುಕಿಂಗ್ ಕಂಡಿತ್ತು. ಈ ಮೂಲಕ ದಾಖಲೆ ಬರೆದಿತ್ತು. ಮಾರುತಿ ಸುಜುಕಿ ವಿಕ್ಟೋರಿಸ್ ಕಾರಿನಲ್ಲಿ LXi, VXi, ZXi, ZXi(O), ZXi+ ಹಾಗೂ ZXi+(O) ಟ್ರಿಮ್ ವೇರಿಯೆಂಟ್ ಕಾರುಗಳು ಲಭ್ಯವಿದೆ.
ಅಕ್ಟೋಬರ್ ಆರಂಭದಲ್ಲೇ 25,000 ಬುಕಿಂಗ್
ಪ್ರೀಮಿಯಂ ಎಸ್‌ಯುವಿ ಕಾರು
ಹ್ಯುಂಡೈ ಕ್ರೆಟಾ ಸೇರಿದಂತೆ ಪ್ರೀಮಿಯಂತ ಮಿಡ್ ಸೈಝ್ ಎಸ್‌ಯುವಿ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರುವ ವಿಕ್ಟೋರಿಸ್ ಕಾರು 10.1 ಇಂಚಿನ ಟಚ್‌ಸ್ಕ್ರೀನ್ ಇನ್ಫೈಟೈನ್ಮೆಂಟ್ ಸಿಸ್ಟಮ್, ವೈಯರ್‌ಲೆಸ್ ಆ್ಯಂಡ್ರಾಯ್ಡ್ ಅಟೋ ಹಾಗೂ ಆ್ಯಪಲ್ ಕಾರ್‌ಪ್ಲೇ 10.25 ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವೆಂಟಿಲೇಟೆಡ್ ಸೀಟ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಅಡಾಸ್ ಲೆವೆಲ್ 2 ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.
ಪ್ರೀಮಿಯಂ ಎಸ್‌ಯುವಿ ಕಾರು
ವಿಕ್ಟೋರಿಸ್ ಎಂಜಿನ್
ವಿಕ್ಟೋರಿಸ್ ಎರಡು ಎಂಜಿನ್ ವೇರಿಯೆಂಟ್ ಲಭ್ಯವಿದೆ. 1.5 ಲೀಟರ್ ನ್ಯಾಚುರಲ್ ಆಸ್ಪೈರ್ಡ್ ಪೆಟ್ರೋಲ್ ಹಾಗೂ 1.5 ಲೀಟರ್ ಸ್ಟ್ರಾಂಗ್ ಹೈಬ್ರಿಡ್. 1.5 ಲೀಟರ್ ಪೆಟ್ರೋಲ್ ಕಾರು 103 hp ಪವರ್ ಹಾಗೂ 139 Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. ಇತ್ತ 1.5 ಲೀಟರ್ ಹೈಬ್ರಿಡ್ ಕಾರು 92.5 hp ಪವರ್ ಹಾಗೂ 122 Nm ಟಾರ್ಕ್ ಸಾಮರ್ಥ್ಯ ಹೊಂದಿದಿದೆ.