3.5 ಲಕ್ಷ ರೂಪಾಯಿಂದ 5 ಲಕ್ಷ ರೂ ಒಳಗೆ ಸಿಗಲಿದೆ ಅತ್ಯುತ್ತಮ ಕಾರು, ಇಲ್ಲಿದೆ ಲಿಸ್ಟ್!
ಭಾರತದ ಕಡಿಮೆ ಬೆಲೆ ಹಾಗೂ ಸಣ್ಣ ಕಾರುಗಳಿಗೆ ಭಾರಿ ಬೇಡಿಕೆ ಇದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಕೆಲ ಕಂಪನಿಗಳು ಕೈಗೆಟುಕುವ ದರದಲ್ಲಿ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಹೀಗೆ ಭಾರತದಲ್ಲಿ 3.5 ಲಕ್ಷ ರೂಪಾಯಿಂದ 5 ಲಕ್ಷ ರೂಪಾಯಿ ಒಳಗೆ ಲಭ್ಯವಿರುವ ಕಾರಿನ ವಿವರ ಇಲ್ಲಿದೆ
ಕಾರು ಖರೀದಿಸಬೇಕೆಂಬ ಮಧ್ಯಮ ವರ್ಗದ ಕನಸು ನನಸಾಗಿಸಲು ಸಣ್ಣ ಹಾಗೂ ಕೈಗೆಟುಕುವ ಬೆಲೆ ಕಾರುಗಳ ಮೊರೆ ಹೋಗುತ್ತಾರೆ. ಭಾರತದಲ್ಲಿ ಸಣ್ಣ ಕಾರು ಹಾಗೂ SUV ಕಾರುಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಹಲವು ಕಾರುಗಳು ಭಾರತದಲ್ಲಿ ಲಭ್ಯವಿದೆ.
ಭಾರತದಲ್ಲಿ 3.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಕಾರುಗಳು ಲಭ್ಯವಿದೆ. ಈ ಸಣ್ಣ ಕಾರುಗಳು ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಈ ಪೈಕಿ ಮಾರುತಿ ಅಲ್ಟೋ ಕಾರು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ.
ಮಾರುತಿ ಸುಜುಕಿ ಅಲ್ಟೋ ಕಾರಿನ ಆರಂಭಿಕ ಬೆಲೆ 3.53 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದು ಬೇಸ್ ಮಾಡೆಲ್ ಕಾರಾಗಿದೆ. ಹಲವು ಕುಟುಂಬಗಳ ಕಾರು ಕನಸು ನನಸು ಮಾಡಿದ ಹೆಗ್ಗಳಿಕೆ ಅಲ್ಟೋ ಕಾರಿಗೆ ಸಲ್ಲಲಿದೆ.
ಭಾರತದ ರಸ್ತೆ ಹಾಗೂ ಆರಾಮದಾಯಕ ಪ್ರಯಾಣಕ್ಕಾಗಿ ಎಸ್‌ಯುವಿ ಕಾರುಗಳ ಮೊರೆ ಹೋಗುತ್ತಾರೆ. ಆದರೆ ಮಧ್ಯಮ ವರ್ಗ ಕುಟುಂಬಕ್ಕೂ ಎಸ್‌ಯುವಿ ದುಬಾರಿಯಾಗಲಿದೆ. ಇದಕ್ಕೆ ಪರ್ಯಾವಾಗಿ ಮಾರುತಿ ಸುಜುಕಿ ಎಸ್ ಪ್ರೆಸ್ಸೋ ಕಾರು ಬಿಡುಗಡೆ ಮಾಡಿದೆ.
ಮಾರುಜಿ ಸುಜುಕಿ ಎಸ್‌ಪ್ರೆಸ್ಸೋ ಕಾರು ಮೈಕ್ರೋ ಎಸ್‌ಯುವಿ ಕಾರು. ಇದರ ಆರಂಭಿಕ ಬೆಲೆ 4.26 ಲಕ್ಷ ರೂಪಾಯಿ(ಎಕ್ಸ್ ಶೋರೂಂ). ಗ್ರೌಂಡ್ ಕ್ಲಿಯರೆನ್ಸ್ ಉತ್ತಮವಾಗಿರುವ ಕಾರಣ ಈ ಕಾರು ಭಾರತದ ರಸ್ತೆಗೆ ಹೊಂದಿಕೊಳ್ಳುತ್ತದೆ.
ರೆನಾಲ್ಟ್ ಕಂಪನಿಗೆ ಭಾರತದಲ್ಲಿ ಪುನರ್ಜನ್ಮ ನೀಡಿದ ಕಾರು ಕ್ವಿಡ್. ರೆನಾಲ್ಡ್ ಕ್ವಿಡ್ ಕಾರ ಸ್ಥಳವಕಾಶ, ಗಾತ್ರದಲ್ಲೂ ದೊಡ್ಡದಿದೆ. ಹೀಗಾಗಿ ಕ್ವಿಡ್ ಕಾರಿನ ಬೇಡಿಕೆ ಹೆಚ್ಚಾಗಿದೆ. ಆಕರ್ಷಕ ವಿನ್ಯಾಸವನ್ನು ಹೊಂದಿದೆ.
ರೆನಾಲ್ಡ್ ಕ್ವಿಡ್ 800 ಸಿಸಿ ಕಾರಿನ ಆರಂಭಿಕ ಬೆಲೆ 4.70 ಲಕ್ಷ ರೂಪಾಯಿ(ಎಕ್ಸ್ ಶೋರೂಂ). ಕ್ವಿಡ್ ಹಲವು ಬಣ್ಣಗಳಲ್ಲೂ ಲಭ್ಯವಿದೆ. ಇನ್ನು ಕ್ವಿಡ್ ಕಾರಿನಲ್ಲಿ 1000 ಸಿಸಿ ಕ್ಲೈಂಬರ್ ಆಯ್ಕೆಯೂ ಲಭ್ಯವಿದೆ. ಆದರೆ ಇದರ ಬೆಲೆ ಕೊಂಚ ಹೆಚ್ಚಾಗಲಿದೆ.
Maruti Celerio
ಮಾರುತಿ ಸುಜುಕಿ ಮತ್ತೊಂದು ಕೈಗೆಟುಕವ ಕಾರು ಅಂದರೆ ಸೆಲೆರಿಯೋ. ಹಲವು ರೂಪಾಂತರ, ಹಲವು ಅಪ್‌ಗ್ರೇಟ್ ಪಡೆದಿರು ಸೆಲೆರಿಯೋ ಗರಿಷ್ಠ ಮಾರಾಟ ಪಟ್ಟಿಯಲ್ಲೂ ಕಾಣಿಸಿಕೊಂಡಿದೆ. ಸೆಲೆರಿಯೋ ಕಾರಿನ ಆರಂಭಿಕ ಬೆಲೆ 5.37 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)