ಕೂಪ್ ಶೈಲಿಯ ಎಲೆಕ್ಟ್ರಿಕ್ ಕಾರು ಬಿಡುಗಡೆ ಸಜ್ಜಾದ ಮಹೀಂದ್ರ,ಕಣ್ಣು ಕುಕ್ಕುವ ವಿನ್ಯಾಸ!
ಭಾರತದ ಹೆಮ್ಮೆಯ ಮಹೀಂದ್ರ ಇದೀಗ ಕೂಪ್ ಶೈಲಿಯ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಬಿಡುಗಡೆಗೆ ಸಜ್ಜಾಗಿದೆ. ಅತ್ಯಾಕರ್ಷಕ ವಿನ್ಯಾಸ, ಶೈಲಿ ಕಣ್ಣುಕುಕ್ಕುವಂತಿದೆ. ಹೊಸ ಕಾರು ಹೇಗಿದೆ? ಈ ಕಾರು ವಿಶ್ವದಲ್ಲೇ ಭಾರಿ ಸಂಚಲನ ಸೃಷ್ಟಿಸಲಿದೆ.
ಭಾರತದ ಹೆಮ್ಮೆಯ ಆಟೋಮೊಬೈಲ್ ಕಂಪನಿಗಳಲ್ಲಿ ಒಂದಾಗ ಮಹೀಂದ್ರ ಇದೀಗ ಹೊಸ ಎರಡು ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ. ವಿಶೇಷ ಅಂದರೆ ಇದರ ವಿನ್ಯಾಸ ಊಹೆಗೂ ನಿಲುಕದ ರೀತಿಯಲ್ಲಿದೆ. ಐಷಾರಾಮಿ ಕಾರುಗಳಲ್ಲಿರುವ ವಿನ್ಯಾಸದ ಇದೀಗ ಕೈಗೆಟುಕುವ ಬೆಲೆಯ ಮಹೀಂದ್ರ ತರುತ್ತಿದೆ. ಕೂಪ್ ಶೈಲಿಯ ಈ ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಕೆಲ ಫೋಟೋಗಳು ಜನರನ್ನು ಸೆಳೆಯುತ್ತಿದೆ.
ಇಂಗ್ಲೊ(INGLO) ತಂತ್ರಜ್ಞಾನ ವಾಸ್ತುಶಿಲ್ಪ ಅಡಿಯಲ್ಲಿ ಎರಡು ಎಲೆಕ್ಟ್ರಿಕ್ ಕಾರುಗಳನ್ನ ಮಹೀಂದ್ರ ಉತ್ಪಾದಿಸಿದೆ. ಎಕ್ಸ್ ಇವಿ 9ಇ ಮತ್ತು ಬಿಇ(ಬಿ ಎಂದು ಉಚ್ಚರಿಸಲಾಗುತ್ತದೆ) ಹೆಸರಿನ ಎರಡು ಕಾರುಗಳನ್ನು ಮಹೀಂದ್ರ ಬಿಡುಗಡೆ ಮಾಡುತ್ತಿದೆ. ಎರಡೂ ಕೂಪ್ ಶೈಲಿಯ ಎಕ್ಸ್‌ಯುವಿ ಕಾರುಗಳಾಗಿದೆ. ಇದರ ಡಿಸೈನ್ ಈಗ ಭಾರಿ ಚರ್ಚೆಯಾಗುತ್ತಿದೆ.
ನವೆಂಬರ್ 26ರಂದು ಚೆನ್ನೈನಲ್ಲಿ ಆಯೋಜಿಸಿರುವ ವರ್ಲ್ಡ್ ಪ್ರೀಮಿಯರ್‌ನಲ್ಲಿ ಮಹೀಂದ್ರ ಈ ಕಾರುಗಳನ್ನು ಪರಿಚಯಿಸಲು ಮುಂದಾಗಿದೆ. ವಿಶೇಷ ಅಂದರೆ ಮೂಲ ನೆಲೆ ಎಲೆಕ್ಟ್ರಿಕ್ ಕಾರುಗಳಾಗಿದ್ದು, ಹಲವು ಹೊಸತನ, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಅತೀ ಹೆಚ್ಚು ಫೀಚರ್ಸ್ ಹೊಂದಿದೆ.
ಅತ್ಯುತ್ತಮ ಪರ್ಫಾಮೆನ್ಸ್, ಗರಿಷ್ಠ ಮೈಲೇಜ್ ರೇಂಜ್, ಕಡಿಮೆ ಅವಧಿಯಲ್ಲಿ ಚಾರ್ಜಿಂಗ್ ಜೊತೆಗೆ ಆರಾಮದಾಯಕ ಪ್ರಯಾಣಕ್ಕೆ ಈ ಕಾರು ಉತ್ತಮವಾಗಿದೆ ಎಂದು ಮಹೀಂದ್ರ ಹೇಳಿಕೊಂಡಿದೆ. ಲ್ಲೀನಗೊಳಿಸುವ ನಾವೀನ್ಯತೆಗಳನ್ನು ಹೊಂದಿರುವ ಎರಡು ಕಾರುಗಳು ಬಹು-ಸಂವೇದನಾಶೀಲ ಚಾಲನೆಯ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.
ಎಕ್ಸ್ ಇ ವಿ9 ವಿ ವಾಹನವು ಎಲೆಕ್ಟ್ರಿಕ್ ಐಷಾರಾಮಿಯನ್ನು ಮರುವ್ಯಾಖ್ಯಾನಿಸುತ್ತದೆ. ಅದೇ ಬಿಇ 6ಇ ವಾಹನವು ಸ್ಪೋರ್ಟೀವ್ ಕಾರ್ಯಕ್ಷಮತೆ ನೀಡುತ್ತದೆ. ಭಾರತೀಯ ಪ್ರಾತಿನಿಧಿಕ ವಾಹನಗಳು ತಮ್ಮ ಸೋಲಿಲ್ಲದ ವಿನ್ಯಾಸ, ಸರಿಸಾಟಿಯಿಲ್ಲದ ತಂತ್ರಜ್ಞಾನ ಮತ್ತು ಅಪ್ರತಿಮ ಕಾರ್ಯಕ್ಷಮತೆಯೊಂದಿಗೆ ಜಗತ್ತಿನಲ್ಲಿರುವ ಪ್ರತಿಯೊಬ್ಬರನ್ನು ಮಣಿಸಲು ಸಿದ್ಧವಾಗಿವೆ ಎಂದು ಮಹೀಂದ್ರ ಹೇಳಿದೆ.