ಮೇಡ್ ಇನ್ ಇಂಡಿಯಾ BMW M340i xಡ್ರೈವ್ ಕಾರು ಬಿಡುಗಡೆ!
ಸಂಪೂರ್ಣವಾಗಿ ಭಾರತದಲ್ಲೇ ನಿರ್ಮಾಣಗೊಂಡಿರುವ ಹೊಚ್ಚ ಹೊಸ ಫರ್ಸ್ಟ್-ಎವರ್ BMW M340i xDrive ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ವಿಶೇಷತೆ, ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
BMW ಇಂಡಿಯಾ ಶಕ್ತಿಯುತ BWM M340i xDrive ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. . ಸ್ಥಳೀಯವಾಗಿ BWM ಗ್ರೂಪ್ ಪ್ಲಾಂಟ್ ಚೆನ್ನೈನಲ್ಲಿ ಉತ್ಪಾದನೆಯಾಗುವ ಇದು ಮೊದಲ ಹೈ-ಪರ್ಫಾರ್ಮೆನ್ಸ್ BMW ಭಾರತದಲ್ಲಿ ನಿರ್ಮಾಣವಾದ M ಎಂಜಿನ್ ಹೊಂದಿದೆ.
ಕಳೆದ 40 ವರ್ಷಗಳಿಂದ ಮತ್ತಾವುದೇ BMW ‘ಅಲ್ಟಿಮೇಟ್ ಡ್ರೈವಿಂಗ್ ಮೆಷಿನ್’ ಪರಿಕಲ್ಪನೆಯನ್ನು BWM 3 ಸೀರೀಸ್‍ಗಿಂತ ಉತ್ತಮವಾಗಿ ಹೊಂದಿರಲಿಲ್ಲ. BMW M ನಿಂದ ರೂಪುಗೊಂಡ ಫಸ್ರ್ಟ್-ಎವರ್ BMW M340i xDrive S ಸ್ಪೋರ್ಟಿಂಗ್ ಡ್ರೈವಿಂಗ್ ಮತ್ತು ಅದರ ಪೂರ್ಣ ಡೈನಮಿಕ್ ಸಾಮಥ್ರ್ಯ ನೀಡಲಿದೆ. ಇದು ಮೋಟಾರ್‌ಸ್ಪೋರ್ಟ್ BMW M’S ಶುದ್ಧ ಬಯಕೆಯನ್ನು ದೋಷ ರಹಿತವಾಗಿ ಮೈವೆತ್ತಿದೆ ಮತ್ತು ಚಾಲಕರಿಗೆ ರೋಮಾಂಚಕ ಅನುಭವ ನೀಡಲು ಗರಿಷ್ಠ ಕಾರ್ಯಕ್ಷಮತೆ ನೀಡುತ್ತದೆ.
“ಫಸ್ರ್ಟ್-ಎವರ್ BMW M340i xDrive ಭಾರತದಲ್ಲಿ ಲೋಕಲಿ ಪ್ರೊಡ್ಯೂಸ್ಡ್ ಅತ್ಯಂತ ತ್ವರಿತ ಕಾರು ಭಾರತದ ವಾಹನದ ಉತ್ಸಾಹಿಗಳು ಬಹಳ ಕುತೂಹಲದಿಂದ ಕಾಯುತ್ತಿರುವ ಸಂಪೂರ್ಣ ಅಪೂರ್ವ ಹೈ-ಪರ್ಫಾರ್ಮೆನ್ಸ್ ಉತ್ಪನ್ನ ಬಿಡುಗಡೆ ಮಾಡಲು ಉತ್ಸುಕರಾಗಿದ್ದೇವೆ. ಇದು ವಿಶಿಷ್ಟ ಕಾರು ಏಕೆಂದರೆ ಇದರಲ್ಲಿ BMW 3 ಸೀರೀಸ್‍ನ ಥ್ರಿಲ್ಲಿಂಗ್ ಆತ್ಮವಿದೆ. ಇದರ ಗರಿಷ್ಠಗೊಳಿಸಿದ M ಶಕ್ತಿ ಮತ್ತು BMW M340i xDrive ಡ್ರೈವಿಂಗ್ ಡೈನಮಿಕ್ಸ್ ಹೊಂದಿದೆ. BMW M340i xDrive ಸೇರ್ಪಡೆಯೊಂದಿಗೆ BMW 3 ಸೀರೀಸ್ ಅತ್ಯಂತ ಶಕ್ತಿಯುತ ಮತ್ತು ವೈವಿಧ್ಯಮಯ ಶ್ರೇಣಿಯನ್ನು ಒದಗಿಸುವ ಮೂಲಕ ನಮ್ಮ ಗ್ರಾಹಕರಿಗೆ ಮೌಲ್ಯಯುತ `ಪವರ್ ಆಫ್ ಚಾಯ್ಸ್’ ನೀಡುತ್ತದೆ. ಈ `M’ಮನೆಯಿಂದ ಕಾರು ಹೈ-ಪರ್ಫಾರ್ಮೆನ್ಸ್ ಕಾರುಗಳ ಸ್ಥಳೀಯ ಉತ್ಪಾದನೆಯಲ್ಲಿ ಪ್ರಮುಖ ಮೈಲಿಗಲ್ಲನ್ನೂ ತೋರುತ್ತದೆ” ಎಂದು BMW ಗ್ರೂಪ್ ಇಂಡಿಯಾದ ಪ್ರೆಸಿಡೆಂಟ್ ವಿಕ್ರಮ್ ಪಾವಾಹ್ ಹೇಳಿದ್ದಾರೆ.
ಫಸ್ರ್ಟ್-ಎವರ್ BMW M340i xDrive ಕಾರ್ಯಕ್ಷಮತೆಯಲ್ಲಿ ಹೊಸ ಮಾನದಂಡಗಳನ್ನು ನಿಗದಿಪಡಿಸಿದ್ದು ಅದು ವಾಹನ ಉತ್ಸಾಹಿಗಳಿಗೆ ಸಂತೃಪ್ತಿ ಹಾಗೂ ಪ್ರಭಾವಿಸುತ್ತದೆ. ಈ ಕಾರು ಸ್ಟ್ರೈಟ್ ಸಿಕ್ಸ್-ಸಿಲಿಂಡರ್ ಪೆಟ್ರೋಲ್ ಎಂಜಿನ್ 387 HP ಯೊಂದಿಗೆ ಹೊಂದಿದೆ. ಒಟ್ಟಿಗೆ ಉನ್ನತ ಒ ಎಂಜಿನ್ ಪರ್ಫಾರ್ಮೆನ್ಸ್, ಒ ಪರ್ಫಾರ್ಮೆನ್ಸ್ ಚಾಸೀಸ್ ಟ್ಯೂನಿಂಗ್, ಒ ಸ್ಪೆಸಿಫಿಕ್ ಸಸ್ಪೆನ್ಷನ್ ಟೆಕ್ನಾಲಜಿ, BMW ಎಕ್ಸ್‍ಡ್ರೈವ್ ಇಂಟೆಲಿಜೆಂಟ್ ಆಲ್-ವ್ಹೀಲ್ ಡ್ರೈವ್ ಮತ್ತು ಸ್ಪೋರ್ಟ್ ರಿಯರ್ ಡಿಫರೆನ್ಷಿಯಲ್ ಅಸಾಧಾರಣ ಚಾಲನೆಯ ಅನುಭವ ನೀಡುತ್ತದೆ. ಈ ಅಸಾಧಾರಣ ಕ್ರೀಡಾ ಲಕ್ಷಣವು ಮಾದರಿಗೆ ನಿರ್ದಿಷ್ಟವಾದ ಡಿಸೈನ್ ಮತ್ತು ಹಲವು ಫೀಚರ್ಸ್ ಈ ಕಾರಿನಲ್ಲಿದೆ. ಫಸ್ರ್ಟ್-ಎವರ್ BMW M340i xDrive 62,90,000 ರೂಪಾಯಿ(ಎಕ್ಸ್ ಶೋ ರೂಂ).
ಫರ್ಸ್-ಎವರ್ BMW M340i xDrive ಸ್ಪೋರ್ಟಿಂಗ್ ಥೀಮ್‍ನಿಂದ ಸ್ಫೂರ್ತಿ ತುಂಬುತ್ತದೆ. ಗ್ರಿಲ್ ಮೆಷ್ ಹೆಡ್‍ಲೈಟ್ ಯೂನಿಟ್ಸ್‍ಗೆ ವಿನ್ಯಾಸದ ಮೂಲಕ ಕಾರಿನ ಅಂದ ಮತ್ತಷ್ಟು ಹೆಚ್ಚಿದೆ. . ಕಾರು ಅಡಾಪ್ಟಿವ್ LED ಹೆಡ್‍ಲೈಟ್ಸ್ BMW ಲೇಸರ್ ಲೈಟ್ ಹೊಂದಿದೆ. ಈ ಕಾರಿನ ಹುಡ್, ಲಾಂಗ್ ವ್ಹೀಲ್ ಬೇಸ್ ಮತ್ತು ರೂಫ್‍ಲೈನ್‌ನಿಂದ ಸ್ಪೋರ್ಟೀವ್ ಲುಕ್ ಹೆಚ್ಚಾಗಿದೆ. ಸಮಾನಾಂತರ ರೇಖೆಗಳು ಮತ್ತು ತೆಳು, ಸ್ಟೈಲಿಷ್ ಆದ ಡಾರ್ಕೆನ್ಡ್ ಲೈಟ್ ಯೂನಿಟ್ಸ್ ಐ-ಶೇಪ್ಡ್ LED ಟೈಲ್‍ಲೈಟ್ಸ್ ಹೊಂದಿದೆ. ಏರೊಡೈನಮಿಕ್ಸ್ ಪ್ಯಾಕೇಜ್ ಅನ್ನು ಆಪ್ಟಿಮೈಸ್ಡ್ ಬಾಡಿ ಎಲಿಮೆಂಟ್‌ನೊಂದಿಗೆ ಕಾರು ಬಾಡಿ ಕಲರ್ಡ್ ಒರಿಯರ್ ಸ್ಪಾಯ್ಲರ್ ಅನ್ನು ಬೂಟ್‍ಲಿಡ್ ಮೇಲೆ ನೀಡುತ್ತದೆ. ಈ ವಾಹನದ ವಿಶಿಷ್ಟ ನೋಟವು ಹೊರಗಿನ ಮಿರರ್ ಕ್ಯಾಪ್ಸ್, ಏರ್ ಇನ್‍ಟೇಕ್ ಸ್ಟ್ರಟ್ಸ್, ಟ್ರಪೊಝೊಡಿಯಲ್ ಟೈಲ್‍ಪೈಪ್ ಟ್ರಿಮ್ಸ್ ಮತ್ತು ಮಾಡೆಲ್ ಲೆಟರಿಂಗ್ ಎಲ್ಲವೂ ಸೆರಿಯಮ್ ಗ್ರೇ ಮೆಟಾಲಿಕ್‍ನಿಂದ ರೂಪಿಸಲಾಗಿದ್ದು ವಾಹನದ ವಿಶೇಷ ನೋಟ ನೀಡುತ್ತವೆ.
BMW M340i xDrive ಸ್ಟ್ರೈಟ್-ಸಿಕ್ಸ್ ಪೆಟ್ರೋಲ್ ಎಂಜಿನ್‍ನಿಂದ ಹೊಂದಿದೆ. ಅದು ಗರಿಷ್ಠ ಟಾರ್ಕ್ 500 NM ನೊಂದಿಗೆ 387 hP ಔಟ್‍ಪುಟ್ ಉತ್ಪಾದಿಸುತ್ತದೆ. ಇದು ವಿಶೇಷವಾದ ಶಬ್ದದೊಂದಿಗೆ ಹೊಂದಿಕೊಂಡಿದು ಅದಕ್ಕೆ M ಸ್ಪೋರ್ಟ್ ಎಕ್ಸಾಸ್ಟ್ ಯೂನಿಟ್ ಕಾರಣವಾಗಿದೆ. ಈ ಕಾರು ಕೇವಲ 4.4 ಸೆಕೆಂಡುಗಳಲ್ಲಿ 0 ಯಿಂದ 100 KM/h ವೇಗ ತಲುಪಲಿದೆ. ಈ ಮೂಲಕ ಅತೀ ವೇಗದ ಕಾರು ಎಂದೆನಿಸಿಕೊಂಡಿದೆ.
8-ಸ್ಪೀಡ್ ಸ್ಟೆಪ್ಟ್ರಾನಿಕ್ ಸ್ಪೋರ್ಟ್ ಅಟೊಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ. ಯಾವುದೇ ಸಮಯದಲ್ಲಿ, ಯಾವುದೇ ಗೇರಲ್ಲಿ ಟ್ರಾನ್ಸ್‌ಮಿಶನ್ ಪರಿಪೂರ್ಣವಾಗಿ ಎಂಜಿನ್‍ನೊಂದಿಗೆ ಸಹಯೋಗ ಹೊಂದುವ ಮೂಲಕ ಪೂರ್ಣ ಶಕ್ತಿ ಮತ್ತು ದಕ್ಷತೆ ಅಭಿವೃದ್ಧಿಪಡಿಸಿಕೊಳ್ಳಲು ಸಾಧ್ಯವಾಗಿಸುತ್ತದೆ. ಮತ್ತಷ್ಟು ಚಾಲನೆಯ ಸಂತೋಷಕ್ಕೆ ಇದು ಸ್ಟೀರಿಂಗ್ ವ್ಹೀಲ್ ಪ್ಯಾಡಲ್ ಶಿಫ್ಟರ್‍ಗಳು ಮತ್ತು ಕ್ರೂಸ್ ಕಂಟ್ರೋಲ್ ಬ್ರೇಕಿಂಗ್ ಕಾರ್ಯದೊಂದಿಗೆ ಸ್ಟಾಂಡರ್ಡ್ ಆಗಿ ನೀಡಿದೆ.
ಈ ವಿಭಾಗದಲ್ಲಿ ಪ್ರಥಮವಾದ ಈ ಕಾರು BMW M340i xDrive, ಇಂಟೆಲಿಜೆಂಟ್ ಆಲ್-ವ್ಹೀಲ್ ಡ್ರೈವ್ ಟೆಕ್ನಾಲಜಿಯನ್ನು ಹೊಂದಿದ್ದು ಇದು ಚಾಲನೆಯ ಸನ್ನಿವೇಶಗಳನ್ನು ಗಮನಿಸುತ್ತದೆ ಮತ್ತು ಗರಿಷ್ಠ ಟ್ರಾಕ್ಷನ್, ಎಜಿಲಿಟಿ ಮತ್ತು ವಾಹನ ಸಾಮಥ್ರ್ಯ ನೀಡಲು ತಕ್ಷಣ ಪ್ರತಿಕ್ರಿಯಿಸುತ್ತದೆ. M ಸ್ಪೋರ್ಟ್ ರಿಯರ್ ಡಿಫರೆನ್ಷಿಯಲ್ ಎಲೆಕ್ಟ್ರಾನಿಕಲಿ ಪ್ರತಿ ಚಕ್ರಕ್ಕೂ ಶಕ್ತಿಯ ವಿತರಣೆಯನ್ನು ಎಲೆಕ್ಟ್ರಾನಿಕಲಿ ನಿಯಂತ್ರಿಸುವ ಮೂಲಕ ಟ್ರಾಕ್ಷನ್ ಮತ್ತು ಕಾರ್ನರಿಂಗ್ ಹೆಚ್ಚಿಸುತ್ತದೆ.