ಸುದೀರ್ಘ ವರ್ಷ ಭಾರತೀಯರ ಪ್ರೀತಿಗೆ ಪಾತ್ರವಾದ ಕಾರುಗಳ ಲಿಸ್ಟ್!
ಸದ್ಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಕಾರಗಳು ಗರಿಷ್ಠ 6 ರಿಂದ 8 ವರ್ಷ ಚಾಲ್ತಿಯಲ್ಲಿರುತ್ತದೆ. 100 ತಿಂಗಳ ಬಳಿಕ ಹೊಸ ಮಾಡೆಲ್ ಕಾರು ಮಾರುಕಟ್ಟೆ ಪ್ರವೇಶಿಸುತ್ತದೆ. ಆದರೆ ಭಾರತದ ಕಾರು ಮಾರುಕಟ್ಟೆಯಲ್ಲಿ ಸುದೀರ್ಘ ವರ್ಷಗಳ ಕಾಲ ಅಗ್ರಜನಾಗಿ ಮೆರೆದು ಅದೇ ಬೇಡಿಕೆಯ್ನು ಉಳಿಸಿಕೊಂಡ ಕೆಲ ಕಾರುಗಳಿವೆ. ಈ ಕಾರುಗಳು ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಇತಿಹಾಸ ಬರೆದಿದೆ.
ಹಿಂದೂಸ್ತಾನ್ ಅಂಬಾಸಿಡರ್ ಭಾರತದ ಕಾರಾಗಿ ಮಾತ್ರ ಉಳಿದಿರಲಿಲ್ಲ. ಹಲವು ಪೀಳಿಗೆ ಕಂಡ ಕಾರಿದು. ಉದ್ಯಮಿಗಳು, ಶ್ರೀಮಂತರು, ಸಾಮಾನ್ಯರು, ರಾಜಕಾರಣಿಗಳು, ಭಾರತೀಯ ಸೇನ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಬಳಕೆಯಾದ ಕಾರುಗಳಲ್ಲಿ ಹಿಂದೂಸ್ತಾನ್ ಅಂಬಾಸಿಡರ್ ಕಾರಿಗೆ ಮೊದಲ ಸ್ಥಾನ. 1957ರಿಂದ 2014ರ ವರೆಗೆ ಹಿಂದುಸ್ತಾನ್ ಅಂಬಾಸಿಡರ್ ಕಾರು ಭಾರತದ ಮಾರುಕಟ್ಟೆ ಆಕ್ರಮಿಸಿಕೊಂಡಿತ್ತು. ಅಂದರೆ ಬರೋಬ್ಬರಿ 684 ತಿಂಗಳು ಅಕ್ಷರಶಃ ರಾಜನಾಗಿ ಮೆರೆದಿತ್ತು.
1964ರಿಂದ 2000ನೇ ಇಸವಿ ವರೆಗೆ ಅಂದರೆ 432 ತಿಂಗಳು ಪ್ರಿಮಿಯರ್ ಪದ್ಮಿನಿ ಕಾರು ಹೊಸ ಶಕೆ ಆರಂಭಿಸಿತ್ತು. 1964ರಲ್ಲಿ ಫಿಯೆಟ್ 1100 ಕಾರಿನಿಂದ ಪ್ರಿಮಿಯರ್ ಪದ್ಮನಿ ಪಯಣ ಆರಂಭಗೊಂಡಿತು. 8 ವರ್ಷಗಳ ಬಳಿಕ ಫಿಯೆಟ್‌ನಿಂದ ಬೇರ್ಪಟ್ಟ ಪ್ರಿಮಿಯರ್ ಆಟೋಮೊಬೈಲ್ ಕಂಪಿ ಪ್ರಿಮಿರ್ ಪದ್ಮಿನಿ ಹೆಸರಲ್ಲಿ ಕಾರು ಬಿಡುಗಡೆ ಮಾಡಿತು.
1984ರಿಂದ 2019ರ ವರೆಗೂ ಭಾರತದ ಎಲ್ಲಾ ವರ್ಗದ, ವ್ಯಾಪಾರಿಗಳು, ರೈತರ ನೆಚ್ಚಿನ ಕಾರಾಗಿದ್ದ ಮಾರುತಿ ಒಮ್ಮಿ ಬರೋಬ್ಬರಿ 420 ತಿಂಗಳು ಭಾರತದ ಕಾರು ಮಾರುಕಟ್ಟೆಯಲ್ಲಿ ಸಕ್ರಿಯವಾಗಿತ್ತು.
ಭಾರತೀಯ ಸೇನೆಯಿಂದ ಹಿಡಿದು ಸರ್ಕಾರಿ ಹಾಗೂ ಜನಸಾಮಾನ್ಯರ ಹೆಚ್ಚು ಇಷ್ಟಟ್ಟ ಕಾರು ಮಾರುತಿ ಜಿಪ್ಸಿ. 408 ತಿಂಗಳು ಭಾರತದಲ್ಲಿ ಚಾಲ್ತಿಯಲ್ಲಿತ್ತು. 1985ರಿಂದ 2015ರ ವರೆಗೆ ಜಿಪ್ಸಿ ಉತ್ಪಾದನೆಯಾಗುತ್ತಿತ್ತು. ಈಗಲೂ ಭಾರತೀಯ ಸೇನೆ ಮಾರುತಿ ಜಿಪ್ಸಿ ವಾಹನ ಹೆಚ್ಚಾಗಿ ಬಳಸುತ್ತಿದೆ.
ಭಾರತದ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದ ಕಾರುಗಳ ಪೈಕಿ ಮಾರುತಿ 800 ಕಾರಿಗೆ ಮೊದಲ ಸ್ಥಾನ ಸಲ್ಲಲಿದೆ. 1984ರಿಂದ 2014ರ ವರೆಗೆ 336 ತಿಂಗಳು ಮಾರುತಿ 800 ಕಾರು ಉತ್ಪಾದನೆ ಹಾಗೂ ಅದೇ ಬೇಡಿಕೆ ಉಳಿಸಿಕೊಂಡಿತ್ತು. ಸದ್ಯ ಹೊಸ ಮಾದರಿ ಹಾಗೂ ಹೊಸ ರೂಪದಲ್ಲಿ ಮಾರುತಿ 800 ಅಲ್ಟೋ ಕಾರು ಲಭ್ಯವಿದೆ.
ಟ್ರಕ್, ಬಸ್ ಸೇರಿದಂತೆ ಕರ್ಮಷಿಯಲ್ ವಾಹನಗಳತ್ತ ಹೆಚ್ಚು ಒಲವು ಹೊಂದಿದ್ದ ಟಾಟಾ ಮೋಟಾರ್ಸ್ ಇದರ ನಡುವೆ ಕೆಲ ಐಕಾನಿಕ್ ಪ್ಯಾಸೆಂಜರ್ ಕಾರು ಬಿಡುಗಡೆ ಮಾಡಿದೆ. ಇದರಲ್ಲಿ 1994ರಿಂದ 2019ರ ವರೆಗೆ 330 ತಿಂಗಳು ಟಾಟಾ ಸುಮೋ ಕಾರು ಭಾರತದಲ್ಲಿ ಹೊಸ suv ಕಾರಿನ ಪ್ರೀತಿ ಹುಟ್ಟು ಹಾಕಿತ್ತು.
ಸ್ಪೋರ್ಟ್ suv ಕಾರುಗಳಲ್ಲಿ ಟಾಟಾ ಸಫಾರಿ ಅತೀ ಹೆಚ್ಚು ತಿಂಗಳು ಭಾರತದ ಮಾರುಕಟ್ಟೆಯಲ್ಲಿ ರಾರಾಜಿಸಿತ್ತು. 252 ತಿಂಗಳು ಟಾಟಾ ಸಫಾರಿ ಕಾರು ಭಾರತೀಯರನ್ನು ಮೋಡಿ ಮಾಡಿತ್ತು. 1998ರಿಂದ 2019ರ ವರೆಗೆ ಸಫಾರಿ ಕಾರು ಉತ್ಪಾದನೆಯಲ್ಲಿ ತೊಡಗಿತ್ತು.