ADAS ಟೆಕ್ನಾಲಜಿ ಹೊಂದಿರುವ ಕೈಗೆಟುಕುವ ಬೆಲೆಯ SUV ಕಾರು ಭಾರತದಲ್ಲಿ ಲಭ್ಯ, ಇಲ್ಲಿದೆ ಲಿಸ್ಟ್!
ಕಾರು ಖರೀದಿಸುವಾಗ ಇದೀಗ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗುತ್ತದೆ. 5 ಸ್ಟಾರ್ ಸೇಫ್ಟಿ, ಏರ್‌ಬ್ಯಾಗ್ ಸೇರಿದಂತೆ ಹಲವು ವಿಚಾರಗಳನ್ನು ಗ್ರಾಹಕರು ಪರಿಶೀಲಿಸುತ್ತಾರೆ. ಇದರ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನ ADAS ಮತ್ತಷ್ಟು ಸುರಕ್ಷತೆ ನೀಡಲಿದೆ. ಭಾರತದಲ್ಲಿ ADAS ಟೆಕ್ನಾಲಜಿ ಹೊಂದಿರುವ ಕಾರುಗಳ ಪೈಕಿ ಕೈಗೆಟುಕುವ ಬೆಲೆಯಲ್ಲಿರುವ ಕಾರಿನ ವಿವರ ಇಲ್ಲಿದೆ.
ಮೈಲೇಜ್ ಬಗ್ಗೆ ಹೆಚ್ಚು ಗಮನ ನೀಡುತ್ತಿದ್ದ ಹೊಸ ಕಾರು ಖರೀದಿಸುವ ಗ್ರಾಹಕರು ಇದೀಗ ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದಾರೆ. 5 ಸ್ಟಾರ್ ಸೇಫ್ಟಿ, ಏರ್‌ಬ್ಯಾಕ್, ಎಬಿಎಸ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಗಳ ಮೊರೆ ಹೋಗುತ್ತಿದ್ದಾರೆ.
ಕ್ರಾಶ್ ಟೆಸ್ಟ್ ಸುರಕ್ಷತೆ, ಏರ್‌ಬ್ಯಾಗ್ ಜೊತೆಗೆ ಇದೀಗ ADAS ಟೆಕ್ನಾಲಜಿ ಪ್ರಮುಖವಾಗಿದೆ. ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್(ADAS) ಟೆಕ್ನಾಲಜಿ ಡ್ರೈವರ್ ಹಾಗೂ ಪ್ರಯಾಣಿಕರಿಗೆ ಮತ್ತಷ್ಟು ಸುರಕ್ಷತೆ ನೀಡುತ್ತದೆ. ಇದು ಅಪಘಾತವನ್ನು ತಪ್ಪಿಸಲು, ಚಾಲಕ ನಿದ್ದಗೆ ಜಾರದಂತೆ ಸೂಚನೆಗಳನ್ನು ನೀಡುತ್ತದೆ.
ಅಡಾಸ್ ಟೆಕ್ನಾಲಜಿ ಹೊಂದಿರುವ ಕಾರುಗಳು ಕೊಂಚ ದುಬಾರಿ. ಆದರೆ ಭಾರತದಲ್ಲಿ ಕೈಗೆಟುಕುವ ದರದಲ್ಲಿ ಅಡಾಸ್ ಟೆಕ್ನಾಲಜಿ ಕಾರುಗಳು ಲಭ್ಯವಿದೆ. ಈ ಪೈಕಿ ಮೊದಲ ಸ್ಥಾನ ಹ್ಯುಂಡೈ ವೆನ್ಯೂ ಕಾರಿಗೆ ಸಲ್ಲಲಿದೆ.
ಹ್ಯುಂಡೈ ವೆನ್ಯೂ ಲೆವೆನ್ 1 ಅಡಾಸ್ ಟೆಕ್ನಾಲಜಿ ಹೊಂದಿದೆ. ಇತ್ತೀಚೆಗೆ ಹ್ಯುಂಡೈ ತನ್ನ ವೆನ್ಯೂ ಕಾರಿನಲ್ಲಿ ಅಡಾಸ್ ಟೆಕ್ನಾಲಜಿ ಸೇರಿಸಿದೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ 10.32 ಲಕ್ಷ ರೂಪಾಯಿ
ಹ್ಯುಂಡೈ ಬಿಡುಗಡೆ ಮಾಡಿರುವ ವೆನ್ಯೂ ಎನ್ ಲೈನ್ ವರ್ಶನ್ ಕಾರಿನಲ್ಲೂ ಅಡಾಸ್ ಟೆಕ್ನಾಲಜಿ ಬಳಕೆ ಮಾಡಲಾಗಿದೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ 11.99 ಲಕ್ಷ ರೂಪಾಯಿ
ಹೋಂಡಾ ಇತ್ತೀಚೆಗೆ ಬಿಡುಗಡೆ ಮಾಡಿರುವ ಎಲವೇಟ್ ಎಸ್‌ಯುವಿ ಕಾರಿನಲ್ಲೂ ಅಡಾಸ್ ಟೆಕ್ನಾಲಜಿ ಬಳಕೆ ಮಾಡಲಾಗಿದೆ. ಈ ಕಾರಿನ ಆರಂಭಿಕ ಬೆಲೆ 14.90 ಲಕ್ಷ ರೂಪಾಯಿ
ಇಂಟರ್ನೆಟ್ ಇನ್‌ಸೈಡ್ ಎನ್ನುತ್ತಲೇ ಭಾರತದ ಮಾರುಕಟ್ಟೆ ಪ್ರವೇಶಿಸಿದ ಎಂಜಿ ಮೋಟಾರ್ಸ ತನ್ನ ಎಲ್ಲಾ ಕಾರುಗಳಲ್ಲಿ ಅಡಾಸ್ ಟೆಕ್ನಾಲಜಿ ಬಳಸಿದೆ. ಈ ಪೈಕಿ ಎಂಜಿ ಆ್ಯಸ್ಟರ್ ಕಾರು ಎಂಟ್ರಿ ಲೆವೆಲ್ ಅಡಾಸ್ ಕಾರಾಗಿದೆ. ಇದರ ಎಕ್ಸ್ ಶೋ ರೂಂ ಬೆಲೆ 16.99 ಲಕ್ಷ ರೂಪಾಯಿ
2023ರಲ್ಲಿ ಕಿಯಾ ಮೋಟಾರ್ಸ್ ಸೆಲ್ಟೋಸ್ ಫೇಸ್‌ಲಿಫ್ಟ್ ಕಾರು ಬಿಡುಗಡೆ ಮಾಡಿದೆ. ಅಡಾಸ್ ತಂತ್ರಜ್ಞಾನದ ಮೂಲಕ ಮತ್ತ ಸುರಕ್ಷತೆ ಒದಗಿಸಿರುವ ಸೆಲ್ಟೋಸ್ ಫೇಸ್‌ಲಿಫ್ಟ್ ಆರಂಭಿಕ ಬೆಲೆ 19.39 ಲಕ್ಷ ರೂಪಾಯಿ