ಹ್ಯುಂಡೈ ವರ್ಷಾಂತ್ಯದ ಡಿಸ್ಕೌಂಟ್ ಆಫರ್, ಜನಪ್ರಿಯ ಕಾರುಗಳ ಮೇಲೆ 75,000 ರೂ ಕಡಿತ!
ಜನವರಿಯಿಂದ ಬೆಲೆ ಏರಿಕೆ ಘೋಷಿಸಿರುವ ಹ್ಯುಂಡೈ ಇದರ ನಡುವೆ ಕ್ಲಿಯರೆನ್ಸ್‌ಗಾಗಿ ವರ್ಷಾಂತ್ಯದ ಭರ್ಜರಿ ಆಫರ್ ಘೋಷಿಸಿದೆ. ಆಯ್ದ ಕಾರುಗಳ ಮೇಲೆ ಬರೋಬ್ಬರಿ 75,000 ರೂಪಾಯಿ ಡಿಸ್ಕೌಂಟ್ ನೀಡಿದೆ.

ಹೊಸ ವರ್ಷದಿಂದ ಹ್ಯುಂಡೈ ಸೇರಿದಂತೆ ಹಲವು ಕಾರುಗಳ ಬೆಲೆ ಏರಿಕೆಯಾಗುತ್ತಿದೆ. ಆದರೆ ಇದಕ್ಕೂ ಮುನ್ನ ಹ್ಯುಂಡೈ ಗ್ರಾಹಕರಿಗೆ ಭರ್ಜರಿ ಕೊಡುಗೆ ನೀಡಿದೆ. ಹ್ಯುಂಡೈ ಜನಪ್ರಿಯ ಕಾರುಗಳ ಮೇಲೆ ಗರಿಷ್ಠ 75,000 ರೂಪಾಯಿ ಡಿಸ್ಕೌಂಟ್ ನೀಡಿದೆ. ಈ ಆಫರ್ ಡಿಸೆಂಬರ್ 31ರ ವರೆಗೆ ಲಭ್ಯವಿದೆ. ಈ ತಿಂಗಳಲ್ಲಿ ಹ್ಯುಂಡೈ ಕಾರು ಖರೀದಿಸುವ ಗ್ರಾಹಕರಿಗೆ ಈ ಆಫರ್ ಲಭ್ಯವಾಗಲಿದೆ.

ಹ್ಯುಂಡೈ ವೆನ್ಯೂ, ಎಕ್ಸ್‌ಟರ್, ಗ್ರ್ಯಾಂಡ್ ಐ10 ನಿಯೋಸ್ ಹಾಗೂ ಐ20 ಕೆಲ ವೇರಿಯೆಂಟ್ ಕಾರುಗಳ ಮೇಲೂ ಈ ಆಫರ್ ಘೋಷಿಸಲಾಗಿದೆ. 75,000 ರೂಪಾಯಿ ಡಿಸ್ಕೌಂಟ್ ಘೋಷಿಸುವ ಮೂಲಕ ಹ್ಯುಂಡೈ ಕಾರುಗಳು ಇದೀಗ ಕೈಗೆಟುಕುವ ದರದಲ್ಲಿ ಲಭ್ಯವಾಗಿದೆ. ಇಷ್ಟೇ ಅಲ್ಲ ಗ್ರಾಹಕರು ಸುಲಭವಾಗಿ ಕಾರು ಖರೀದಿಸಲು ಸಾಧ್ಯವಿದೆ. ಯಾವ ಕಾರುಗಳ ಎಷ್ಟು ಆಫರ್ ನೀಡಲಾಗಿದೆ. ಈ ಕೆಳಗಿದೆ.
ಹ್ಯುಂಡೈ ವೆನ್ಯೂ ಅತೀ ಹೆಚ್ಚು ಮಾರಾಟವಾಗುತ್ತಿರುವ ಸಬ್ ಕಾಂಪಾಕ್ಟ್ ಎಸ್‌ಯುವಿ ಕಾರು. ವೆನ್ಯೂ ಕಾರಿಗೆ ಗರಿಷ್ಠ 75,000 ರೂಪಾಯಿ ವರೆಗೆ ಡಿಸ್ಕೌಂಟ್ ನೀಡಲಾಗಿದೆ. ಇದರಲ್ಲಿ ಬೋನಸ್ ಸೇರಿದಂತೆ ಇತರ ಕೆಲ ಕೊಡುಗೆಗಳು ಸೇರಿದೆ. ಹ್ಯುಂಡೈ ವೆನ್ಯೂ ಕಾರಿನ ಸದ್ಯದ ಬೆಲೆ 7.94 ಲಕ್ಷ ರೂಪಾಯಿಯಿಂ0 13.44 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಸಣ್ಣ ಕಾರುಗಳ ಮೂಲಕ ಟಾಟಾ ಪಂಚ್ ಸೇರಿದಂತೆ ಇತರ ಕಾರುಗಳಿಗೆ ಪೈಪೋಟಿ ನೀಡುತ್ತಿರುವ ಹ್ಯುಂಡೈ ಎಕ್ಸ್‌ಟರ್ ಕಾರಿನ ಮೇಲೆ 53,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಎಕ್ಸ್‌ಟರ್ ಅತ್ಯಂತ ಆಕರ್ಷಕ ವಿನ್ಯಾಸ ಹಾಗೂ ಉತ್ತಮ ಪರ್ಫಾಮೆನ್ಸ ನೀಡಲಿದೆ. ಹ್ಯುಂಡೈ ಎಕ್ಸ್‌ಟರ್ ಕಾರಿನ ಬೆಲೆ 6.13 ಲಕ್ಷ ರೂಪಾಯಿಯಿಂದ 10.43 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಹ್ಯುಂಡೈ ಹ್ಯಾಚ್‌ಬ್ಯಾಕ್ ಕಾರುಗಳ ಪೈಕಿ ನಿಯೋಸ್ ಐ10 ಕಾರಿಗೂ ಆಫರ್ ಅನ್ವಯಿಸುತ್ತಿದೆ. ನಿಯೋಸ್ ಐ10 ಕಾರಿನ ಮೇಲೆ 68,000 ರೂಪಾಯಿ ಡಿಸ್ಕೌಂಟ್ ಘೋಷಿಸಿದೆ. ನಿಯೋಸ್ ಕಾರಿನ ಆರಂಭಿಕ ಎಕ್ಸ್ ಶೋ ರೂಂ ಬೆಲೆ 6 ಲಕ್ಷ ರೂಪಾಯಿ. ಇನ್ನು ಟಾಪ್ ವೇರಿಯೆಂಟ್ ಬೆಲೆ 8.50 ಲಕ್ಷ ರೂಪಾಯಿ(ಎಕ್ಸ್ ಶೋ ಶೋರೂಂ).
ಹ್ಯುಂಡೈ ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರಾಗಿರುವ ಐ20 ಮಾರಾಟದಲ್ಲೂ, ಬೇಡಿಕೆಯಲ್ಲೂ ಮುಂಚೂಣಿಯಲ್ಲಿದೆ. ಐ20 ಕಾರಿನ ಮೇಲೆ 65,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಹ್ಯುಂಡೈ ಐ20 ಕಾರಿನ ಆರಂಭಿಕ ಬೆಲೆ 7 ಲಕ್ಷ ರೂಪಾಯಿ ಹಾಗೂ ಟಾಪ್ ವೇರಿಯೆಂಟ್ ಕಾರಿನ ಬೆಲೆ 11.20 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ವಿಶೇಷ ಸೂಚನೆ: ಕಾರಿನ ಮೇಲಿನ ಡಿಸ್ಕೌಂಟ್ ಡೀಲರ್‌ನಿಂದ ಡೀಲರ್‌ಗೆ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುವ ಸಾಧ್ಯತೆ. ಹೀಗಾಗಿ ಸಮೀಪದ ಡೀಲರ್ ಬಳಿ ಮಾಹಿತಿ ಖಚಿತಪಡಿಸಿಕೊಳ್ಳಿ.