ವೋಕ್ಸ್‌ವ್ಯಾಗನ್ ಅಥವಾ ಫೋಕ್ಸ್‌ವ್ಯಾಗನ್? ಯಾವ ಉಚ್ಚಾರಣೆ ಸರಿ?
ಜರ್ಮನಿಯ ವೋಕ್ಸ್‌ವ್ಯಾಗನ್ ಕಾರಿನ ಸರಿಯಾದ ಉಚ್ಚಾರಣೆ ಏನು? ಹಲವರಲ್ಲಿ ಗೊಂದಲ ಇದೆ. ವೋಕ್ಸ್‌ವ್ಯಾಗನ್ ಅಥವಾ ಫೋಕ್ಸ್‌ವ್ಯಾಗನ್, ಯಾವುದು ಸರಿ ಅನ್ನೋ ಪ್ರಶ್ನೆಗೆ ಇಲ್ಲಿದೆ. ಉತ್ತರ
ಜರ್ಮನ್ ಕಾರುಗಳ ಹೆಸರುಗಳ ಉಚ್ಚಾರಣೆಯಲ್ಲಿ ಹಲವು ಗೊಂದಲಗಳಿವೆ. ಕಾರಣ ಜರ್ಮನಿ ಪದಗಳ ಅರ್ಥ ಉಚ್ಚಾರಣೆಯನ್ನು ಇಂಗ್ಲೀಷ್‌ಗೆ ಭಾಷಾಂತರಿಸಿ ಹೆಸರು ಇಡಲಾಗಿದೆ. ಜರ್ಮನಿಯ ಬಹುತೇಕ ಕಾರುಗಳ ಉಚ್ಚಾರಣೆಯಲ್ಲಿ ಈ ಗೊಂದಲ ಸಹಜ.
ಆದರಲ್ಲೂ ವೋಕ್ಸ್‌ವ್ಯಾಗನ್ ಕಾರಿನ ಉಚ್ಚಾರಣೆ ಸಾಕಷ್ಟು ಗೊಂದಲಕ್ಕೀಡುಮಾಡುತ್ತದೆ. ಫೋಕ್ಸ್‌ವ್ಯಾಗನ್ ಎಂದು ಕೆಲವರು ಹೇಳಿದರೆ ವೋಕ್ಸ್‌ವ್ಯಾಗನ್ ಅನ್ನೋದು ಹಲವರ ವಾದ.
Volkswagen(VW) ಇಂಗ್ಲೀಷ್ ಪದವನ್ನು ಯಾವ ಪಂಡಿತರು ಓದಿದದರೂ ಅದು ವೋಕ್ಸ್‌ವ್ಯಾಗನ್. ಆದರೆ ಜರ್ಮನಿಯಲ್ಲಿ ಇದರ ಉಚ್ಚಾರಣೆ ವೋಕ್ಸ್‌ವ್ಯಾಗನ್ ಅಲ್ಲ.
ಜರ್ಮನಿಯಲ್ಲಿ ಇಂಗ್ಲೀಷ್ ಅಕ್ಷರದ V ಉಚ್ಚಾರಣೆ ಎಫ್ ಆಗಿದೆ. ಇನ್ನು W ಅಕ್ಷರದ ಉಚ್ಚಾರಣೆ ವಿ ಎಂದು ಆಗಿದೆ. ಹೀಗಾಗಿ ಜರ್ಮನಿಯಲ್ಲಿ ಫೋಕ್ಸ್‌ವ್ಯಾಗನ್ ಸರಿಯಾದ ಉಚ್ಚಾರಣೆ
ಜರ್ಮನಿ ಹೊರತು ಪಡಿಸಿದರೆ ಇನ್ನುಳಿದ ಎಲ್ಲಾ ರಾಷ್ಟ್ರಗಳು ಇಂಗ್ಲೀಷ್ ಪದಗಳನ್ನು ಓದಲು ಸಾಧ್ಯ. ಹೀಗಾಗಿ ಜರ್ಮನಿ ಹೊರತು ಇನ್ನುಳಿದ ಎಲ್ಲಾ ರಾಷ್ಟ್ರಗಳು ಇದನ್ನು ವೋಕ್ಸ್‌ವ್ಯಾಗನ್ ಎಂದೇ ಕರೆಯುತ್ತಾರೆ.
ವೋಕ್ಸ್‌ವ್ಯಾಗನ್ ಅಥವಾ ಫೋಕ್ಸ್‌ವ್ಯಾಗನ್ ಎರಡು ಪದ ಉಚ್ಚಾರಣೆ ಸರಿಯಾಗಿದೆ. ಒಂದು ಇಂಗ್ಲೀಷ್ ಉಚ್ಚಾರೆ ಮತ್ತೊಂದು ಜರ್ಮನಿ ಉಚ್ಚಾರಣೆಯಾಗಿದೆ.
ಜರ್ಮನಿಯಲ್ಲಿ Volkswagen ಪದದ ಅರ್ಥವೇನು? ಜರ್ಮನಿಯಲ್ಲಿ Volk(ಫೋಲ್ಕ್) ಪದದ ಅರ್ಥ ಜನ. ಇನ್ನು wagen(ವ್ಯಾಗನ್) ಪದದ ಅರ್ಥ ವಾಹನ. ವ್ಯಾಗನ್ ಪದದ ಸರಿಯಾದ ಅರ್ಥ ಸೇನಾ ವಾಹನ ಎಂದಾಗಿದೆ.
ಭಾರತದಲ್ಲಿ ವೋಕ್ಸ್‌ವ್ಯಾಗನ್ ಕಂಪನಿ ಪೊಲೋ, ವೆಂಟೋ, ಟಿಗ್ವಾನ್ ಸೇರಿದಂತೆ ಕಲ ಕಾರುಗಳು ಜನಪ್ರಿಯವಾಗಿದೆ. ಐಷಾರಾಮಿ ಆಡಿ ಕಾರು ಕಂಪನಿ ಮಾತೃ ಸಂಸ್ಥೆಯಾಗಿರುವ ವೋಕ್ಸ್‌ವ್ಯಾಗನ್ ವಿಶ್ವದಲ್ಲೇ ಜನಪ್ರಿಯವಾಗಿದೆ.